ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ರಾಜ್ಯಾದ್ಯಂತ ಭರ್ಜರಿ ಸದ್ದು ಮಾಡಿದ್ದ ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು ಹೊನ್ನಾಳಿ – ನ್ಯಾಮತಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಮಾತ್ರವಲ್ಲ, ಯಾವ ಪಕ್ಷಗಳ ಹಿಂದೆಯೂ ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಮಂಡ್ಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ಕೇಳಿದ್ದೆ. ಆದರೆ ಕೊಡಲಿಲ್ಲ. ಪಕ್ಷೇತರನಾಗಿ ಕಣಕ್ಕಿಳಿದಿದ್ದೆ ಎಂದು ತಿಳಿಸಿದರು.
ಶಾಮನೂರು ಶಿವಶಂಕರಪ್ಪರ ಅಕಾಲಿಕ ನಿಧನದಿಂದ ತೆರವಾಗಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗುತ್ತೆ ಎಂಬುದು ಕೊನೆಯವರೆಗೂ ಹರಿದಾಡಿದರೂ ಅಂತಿಮವಾಗಿ ಶ್ರೀನಿವಾಸ್
ದಾಸಕರಿಯಪ್ಪರಿಗೆ ಟಿಕೆಟ್ ನೀಡಲಾಗಿತ್ತು. ಬಿಜೆಪಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದರು. ಆದರೆ ಈಗ ಹೊನ್ನಾಳಿ ಕ್ಷೇತ್ರದಿಂದ 2028ರ ವಿಧಾನಸಭೆ ಚುನಾವಣೆಯಲ್ಲಿ ಇಂಡಿಪೆಂಡೆಂಟ್ ಆಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ
ಮಾಡಿರುವುದರಿಂದ ಹೊನ್ನಾಳಿ ರಾಜಕೀಯ ಮತ್ತಷ್ಟು ರಂಗೇರಲಿದೆ.
ಹೊನ್ನಾಳಿ ಇತಿಹಾಸ ನೋಡುವುದಾದರೆ…?
ಹೊನ್ನಾಳಿ – ನ್ಯಾಮತಿ ರಾಜಕೀಯ ಯಾವಾಗಲೂ ರಂಗು ರಂಗಾಗಿರುತ್ತದೆ. ಇದಕ್ಕೆ ಕಾರಣ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ. ಬಿಜೆಪಿಯಿಂದ ರೇಣುಕಾಚಾರ್ಯ ಹಾಗೂ ಕಾಂಗ್ರೆಸ್ ನ ಶಾಂತನಗೌಡರ ನಡುವೆ ಯಾವಾಗಲೂ ಪೈಪೋಟಿ
ಇದ್ದೇ ಇರುತ್ತದೆ. ಆದರೆ ಈಗ ವಿನಯ್ ಕುಮಾರ್ ಅವರು ಹೊನ್ನಾಳಿ – ನ್ಯಾಮತಿ ಕ್ಷೇತ್ರ ಆರಿಸಿಕೊಂಡಿದ್ದು, ಸಾಕಷ್ಟು ಓಡಾಟವನ್ನೂ ನಡೆಸಿದ್ದಾರೆ. ಆದರೆ ಈಗ ಅಧಿಕೃತವಾಗಿ ಘೋಷಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಅದೃಷ್ಟ
ಪರೀಕ್ಷೆಗೆ ಇಳಿಯುವುದು ಸ್ಪಷ್ಟ.
ವಿಧಾನಸಭಾ ಕ್ಷೇತ್ರ:
ಹೊನ್ನಾಳಿ ಕ್ಷೇತ್ರದ ಕಳೆದ ಹಲವು ಚುನಾವಣಾ ಫಲಿತಾಂಶಗಳನ್ನು ನೋಡಿದರೆ ಇಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆದ್ದ ಉದಾಹರಣೆಯೂ ಇದೆ. 1999ರಿಂದ 2023ರವರೆಗೆ ಡಿ.ಜಿ. ಶಾಂತನಗೌಡ ಮತ್ತು ಎಂ.ಪಿ. ರೇಣುಕಾಚಾರ್ಯ ಅವರು ತಲಾ ಮೂರು ಬಾರಿ ಗೆದ್ದಿದ್ದಾರೆ. 2023ರ ಚುನಾವಣೆಯಲ್ಲೂ ಶಾಂತನಗೌಡರು 92,392 ಮತ ಪಡೆದು ಗೆದ್ದರೆ, ರೇಣುಕಾಚಾರ್ಯರು 74,832 ಮತ ಪಡೆದರು. ಗೆಲುವಿನ ಅಂತರ 17,560 ಮತ.
ಒಂದೆಡೆ ಹಳೆ ರಾಜಕೀಯ ಮುಖಗಳು. ಮತ್ತೊಂದೆಡೆ ಹೊಸ ಮುಖ. ಮತದಾರರ ಬದಲಾಗುತ್ತಿರುವ ನಿರೀಕ್ಷೆಗಳು ಸಹ ಇದರಲ್ಲಿದೆ. ಜಿ. ಬಿ. ವಿನಯ್ ಕುಮಾರ್ ಅವರ ಹೆಸರು ಜಿಲ್ಲೆ ಮಾತ್ರವಲ್ಲ, ರಾಜ್ಯಾದ್ಯಂತ ಚಿರಪರಿಚಿತ. ಇನ್ನೆಷ್ಟು ವರ್ಷ ಅದೇ
ಮುಖಗಳನ್ನು ನೋಡಿಕೊಂಡು ಇರಬೇಕು. ಹೊಸಬರು ಬರುತ್ತಾರಾ ಎಂದು ಕಾಯುತ್ತಿದ್ದ ಜನರಿಗೆ ಈಗ ಅವಕಾಶ ಲಭಿಸುವ ಎಲ್ಲಾ ಲಕ್ಷಣ ಗೋಚರಿಸಿದೆ. ಚುನಾವಣೆಗೆ ಸಾಕಷ್ಟು ಸಮಯ ಇದೆ. ಆದರೆ ತಯಾರಿಯಂತೂ ಶುರುವಾಗಿರುತ್ತದೆ. ಈಗ
ವಿನಯ್ ಕುಮಾರ್ ಘೋಷಿಸಿರುವುದು ರಾಜಕೀಯ ಸಂಚಲನ ಮೂಡಿಸಿದೆ.
ರಾಜಕೀಯ ಲೆಕ್ಕಾಚಾರಗಳ ನಡುವೆ ಹೊನ್ನಾಳಿ-ನ್ಯಾಮತಿ ಜನಮಾನಸದಲ್ಲಿ ಕೇಳಿಸುತ್ತಿರುವ ಹೊಸ ಧ್ವನಿ.. ಹೊಸ ಭರವಸೆ. ಯುವ ಶಕ್ತಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಕುಟುಂಬ ರಾಜಕಾರಣದ ವಿರುದ್ಧ ಏಕಾಂಗಿಯಾಗಿ ನಿಂತು 42,907 ವೋಟ್
ಪಡೆದು ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಕುಟುಂಬ ರಾಜಕಾರಣದ ವಿರುದ್ಧ ಪಣತೊಟ್ಟು ದಾವಣಗೆರೆಯಲ್ಲಿ ಗಟ್ಟಿಯಾಗಿ ನಿಂತವರು.
ವಿನಯ್ ಕುಮಾರ್ ಸರಳ ಸಜ್ಜನ ವ್ಯಕ್ತಿ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿರುವ ಶಕ್ತಿ. ವಿನಯ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಐಎಎಸ್,ಐಪಿಎಸ್, ಸರ್ಕಾರಿ ಹುದ್ದೆಗಳಿಗೆ ಸಾವಿರಾರು ಮಂದಿ ಹೋಗಿದ್ದಾರೆ. ಅದೆಷ್ಟೋ ಬಡ ಯುವಕ ಯುವತಿಯರು ಸರ್ಕಾರಿ ಕೆಲಸದಲ್ಲಿಯೂ ಇದ್ದಾರೆ. ವಿನಯ್ ಕುಮಾರ್ ಅವರ ಹಿಂದೆ ದೊಡ್ಡ ಪಡೆಯೇ ಇದೆ. ಈ ಎಲ್ಲ ಕಾರಣಕ್ಕಾಗಿ ವಿನಯ್ ಕುಮಾರ್ ಸ್ಪರ್ಧೆ ಘೋಷಿಸಿರುವುದು ರಾಜಕೀಯವಾಗಿ ಚರ್ಚಿತ ವಿಷಯವಾಗಿದೆ.
2028ರ ಚುನಾವಣೆ ಯಾರಿಗೂ ಸುಲಭವಲ್ಲ ಎಂಬುದು ಗೊತ್ತು. ಹೊನ್ನಾಳಿ-ನ್ಯಾಮತಿ ಕ್ಷೇತ್ರದಲ್ಲಿ ಹೊಸ ನಾಯಕತ್ವವನ್ನು ಜನರು ಬಯಸಿದ್ದೇ ಆದಲ್ಲಿ ವಿನಯ್ ಕುಮಾರ್ ಅವರಿಗೆ ಗೆಲುವು ಕಷ್ಟವಾಗದು. ಹೊನ್ನಾಳಿ-ನ್ಯಾಮತಿ ರಾಜಕೀಯದಲ್ಲಿ “ಹೊಸ ಧ್ವನಿ” ಎಂಬ ಚರ್ಚೆ ಈಗಾಗಲೇ ಶುರುವಾಗಿದೆ. ಈ ಚರ್ಚೆಯಲ್ಲಿ ಯುವ ಶಕ್ತಿ ಧ್ವನಿಯಾಗಿ ವಿನಯ್ ಕುಮಾರ್ ಎಂಬ ಹೆಸರು ಮೊಳಗುತ್ತಿದೆ. ಜನರು ಬದಲಾವಣೆ ಬಯಸಿದ್ದೇ ಆದಲ್ಲಿ ವಿಧಾನಸಭೆಗೆ ವಿನಯ್ ಕುಮಾರ್ ಹೋಗುವುದು ಕಷ್ಟವೇನೂ ಆಗದು.
- 2028 Karnataka Assembly Elections
- 2028 ವಿಧಾನಸಭೆ ಚುನಾವಣೆ
- Davanagere Politics
- DG Shantana Gowda
- GB Vinay Kumar
- Honnali Nyamati Constituency
- Independent Candidate.
- Insights IAS
- MP Renukacharya
- ಇನ್ಸೈಟ್ಸ್ ಐಎಎಸ್
- ಎಂ. ಪಿ. ರೇಣುಕಾಚಾರ್ಯ
- ಜಿ. ಬಿ. ವಿನಯ್ ಕುಮಾರ್
- ಡಿ.ಜಿ. ಶಾಂತನಗೌಡ
- ದಾವಣಗೆರೆ ರಾಜಕೀಯ
- ಪಕ್ಷೇತರ ಅಭ್ಯರ್ಥಿ
- ಹೊನ್ನಾಳಿ ನ್ಯಾಮತಿ ಕ್ಷೇತ್ರ











Leave a comment