SUDDIKSHANA KANNADA NEWS/ DAVANAGERE/ DATE:24-01-2024
ದಾವಣಗೆರೆ: ಖೋಟಾನೋಟುಗಳನ್ನು ಪ್ರಿಂಟ್ ಮಾಡಿ ಚಲಾವಣೆ ಮಾಡುತ್ತಿದ್ದ ಅಂತರ್ ಜಿಲ್ಲಾ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರು ಆರೋಪಿಗಳನ್ನು ಬಂಧಿಸಲಾಗಿದೆ. ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.
ದಾವಣಗೆರೆ ತಾಲೂಕಿನ ಕುಕ್ಕುವಾಡ ಗ್ರಾಮದ ತಳವಾರ ಕುಬೇರಪ್ಪ (58), ಐಗೂರು – ಲಿಂಗಾಪುರದ ಹರೀಶ ಅಲಿಯಾಸ್ ಹರೀಶಗೌಡ (29), ಭದ್ರಾವತಿ ತಾಲೂಕಿನ ದೊಡ್ಡಗೊಪ್ಪನಹಳ್ಳಿಯ ಜಿ. ರುದ್ರೇಶ (39), ಮೈಸೂರು
ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ಮಾಕನಹಳ್ಳಿ ಗ್ರಾಮದ ಮನೋಜ್ ಗೌಡ (21), ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರದ ಕೆ. ಆರ್. ನಗರ ತಾಲೂಕಿನ ಬೋರೆಕಲ್ಲಹಳ್ಳಿ ವಾಸಿ ಸಂದೀಪ (30) ಹಾಗೂ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕಲ್ಕೆರೆ ಲಂಬಾಣಿ ಹಟ್ಟಿಯ ಕೃಷ್ಣ ನಾಯ್ಕ (28) ಬಂಧಿತ ಆರೋಪಿಗಳು.
ತಳವಾರ ಕುಬೇರಪ್ಪ ಹಾಗೂ ಹರೀಶ್ ಅಲಿಯಾಸ್ ಹರೀಶ್ ಗೌಡ ಅವರನ್ನು ಹಿಡಿದು ಇವರಿಂದ ರೂ 500 ಮುಖಬೆಲೆಯ ಒಟ್ಟು 37000 ರೂ. ಮೌಲ್ಯದ ಖೋಟಾನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರು ನೀಡಿದ ಮಾಹಿತಿ ಮೇರೆಗೆ ಕಳೆದ 18ರಂದು ದಾವಣಗೆರೆ ತಾಲೂಕಿನ ಬಾಡಾ ಕ್ರಾಸ್ ಬಳಿ ಜೆ.ರುದ್ರೇಶ, ಮನೋಜ್ ಗೌಡ, ಸಂದೀಪ, ಕೃಷ್ಣನಾಯ್ಕ ಎಂಬುವವರು 17ರಂದು ಬೆಳಿಗ್ಗೆ ಹರಿಹರ ತಾಲ್ಲೂಕಿನ ಹನಗವಾಡಿ ಗ್ರಾಮದ ಬಳಿಯ ಸರ್ವೀಸ್ ರಸ್ತೆಯಲ್ಲಿ ಯಾರೋ ಇಬ್ಬರು ಖೋಟಾನೋಟುಗಳನ್ನು ಚಲಾವಣೆ ಮಾಡಲು ಪ್ರಯತ್ನಿಸುತ್ತಿದ್ದಾರೆಂಬ ಮಾಹಿತಿ ಮೇರೆಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ವಿಜಯಕುಮಾರ. ಎಂ. ಸಂತೋಷ, ಜಿ. ಮಂಜುನಾಥ, ದಾವಣಗೆರೆ ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ. ಎಸ್. ಬಸವರಾಜ ಅವರ ಮಾಹಿತಿ ಮತ್ತು ಮಾರ್ಗದರ್ಶನದಲ್ಲಿ ಹರಿಹರ ವೃತ್ತದ ಸಿಪಿಐ ಸುರೇಶ ಸಗರಿ, ಪಿಎಸ್ ಐ ಬಿ. ಎಸ್. ಅರವಿಂದ್, ಹರಿಹರ ಗ್ರಾಮಾಂತರ ಠಾಣೆಯ ಪಿಎಸ್ ಐ ಅಬ್ದುಲ್ ಖಾದರ್ ಜಿಲಾನಿ, ದಾವಣಗೆರೆ ಡಿ.ಸಿ.ಆರ್.ಬಿ ವಿಭಾಗದ ಮಜೀದ್, ಆಂಜನೇಯ, ರಾಘವೇಂದ್ರ, ರಮೇಶ್ ನಾಯ್ಕ, ಬಾಲರಾಜ್ ತಂಡವು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಬಂಧಿತರಿಂದ ರೂ 500 ಮುಖಬೆಲೆಯ ಒಟ್ಟು ರೂ 9000 ಮುಖಬೆಲೆಯ ಖೋಟಾನೋಟುಗಳು, ಕೃತ್ಯಕ್ಕೆ ಉಪಯೋಗಿಸಿದ ರೂ 1,00,000 ಮೌಲ್ಯದ KA1996554 ನಂಬರ್ ನ ಕಾರ್ ಹಾಗೂ ಖೋಟಾನೊಟುಗಳನ್ನು ತಯಾರಿಸಲು ಉಪಯೋಗಿಸಿದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. 19ರಂದು ರುದ್ರೇಶ ಹಾಗೂ ಮನೋಜ್ ಗೌಡನನ್ನು ಇಬ್ಬರು ಆರೋಪಿಗಳ ಕೊಟ್ಟ ಮಾಹಿತಿ ಮೇರೆಗೆ ಮೈಸೂರು ಜಿಲ್ಲೆಯ ಕೂರಗಳ್ಳಿ ಮೇಗಲ ಕೊಪ್ಪಲುವಿನಲ್ಲಿನ ಮೂರನೇ ಆರೋಪಿತನ ಬಾಡಿಗೆ ಮನೆಯಲ್ಲಿ ರೂ 500 ಮತ್ತು ರೂ 200 ಮುಖಬೆಲೆಯ ಒಟ್ಟು 7,07,700 ಮೌಲ್ಯದ ಖೋಟಾನೋಟುಗಳು, ರೂ 500 ಮುಖಬೆಲೆಯ ರೂ 43,000 ಮೌಲ್ಯದ ಅಸಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.
ಖೋಟಾನೋಟುಗಳನ್ನು ತಯಾರಿಸಲು ಉಪಯೋಗಿಸಿರುವ ಒಟ್ಟು ಅಂದಾಜು ರೂ 3,00,000 ಮೌಲ್ಯದ ಲ್ಯಾಪ್ ಟಾಪ್ ಗಳು. ಕಲರ್ ಪ್ರಿಂಟರ್ ಗಳು, ಪೇಪರ್ ಕಟ್ಟರ್, ಕಲರ್ ಬಾಟಲಿಗಳು ಹಾಗೂ ಇತರೇ ಸಾಮಾಗ್ರಿ, ಉಪಕರಣಗಳನ್ನು ವಶಪಡಿಸಿಕೊಂಡಿದ್ದು, ಅಲ್ಲದೇ ಸುಮಾರು 30,00,000 ಮೌಲ್ಯದ 500 ಮುಖ ಬೆಲೆಯ ಎರಡು ಬದಿ ಪ್ರಿಂಟ್ ಆಗಿರುವ 718 ಖೋಟಾ ನೋಟುಗಳು, 500 ಮುಖ ಬೆಲೆಯ ಒಂದು ಬದಿ ಪ್ರಿಂಟ್ ಆಗಿರುವ 570 ಖೋಟಾ ನೋಟುಗಳು, 200 ಮುಖ ಬೆಲೆಯ ಎರಡು ಬದಿ ಪ್ರಿಂಟ್ ಆಗಿರುವ 803 ಖೋಟಾ
ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ತಳವಾರ ಕುಬೇರಪ್ಪ ಹಾಗೂ ಹರೀಶ್ ಗೌಡರ ಮೇಲೆ ಖೋಟಾ ನೋಟಿಗೆ ಸಂಬಂಧಿಸದಂತೆ ಈ ಹಿಂದೆ ಹರಿಹರ ಗ್ರಾಮಾಂತರ ಠಾಣೆ, ವಿಜಯನಗರ ಜಿಲ್ಲೆಯ ಹೊಸಪೇಟೆ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಕರಣವನ್ನು ಬೇಧಿಸಿದ ಹರಿಹರ ಸಿ.ಪಿ.ಐ ಸುರೇಶ ಸಗರಿ, ಹರಿಹರ ಗ್ರಾಮಾಂತರ ಠಾಣೆಯ ಪಿ.ಎಸ್.ಐ ಬಿ.ಎಸ್ ಅರವಿಂದ್, ಅಬ್ದುಲ್ ಖಾದರ್ ಜಿಲಾನಿ, ದಾವಣಗೆರೆ ಡಿ.ಸಿ.ಆರ್.ಬಿ ವಿಭಾಗದ ಸಿಬ್ಬಂದಿಯವರಾದ ಮಜೀದ್, ಅಂಜಿನೇಯ, ರಾಘವೇಂದ್ರ, ರಮೇಶ್ ನಾಯ್ಕ, ಬಾಲರಾಜ್. ಹರಿಹರ ವೃತ್ತ ಕಛೇರಿಯ ಮಹ್ಮದ್ ಇಲಿಯಾಜ್, ನಾಗರಾಜ, ಮುರುಳಿಧರ, ಹರಿಹರ ಗ್ರಾಮಾಂತರ ಠಾಣೆಯ ಸಿಬ್ಬಂದಿಯವರಾದ ರಮೇಶ್, ನೀಲಮೂರ್ತಿ, ಬಣಕಾರ ಶ್ರೀಧರ, ಗಂಗಾಧರ, ಸಿದ್ದಪ್ಪ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಜಾಧವ್, ರಾಘವೇಂದ್ರ, ಶಾಂತ ಕುಮಾರ ಅವರಿಗೆ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಅಭಿನಂದಿಸಿ ಬಹುಮಾನ ಘೋಷಿಸಿದರು.