ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ತಾಳ್ಮೆ, ಬುದ್ಧಿಶಕ್ತಿ ಬೆಳವಣಿಗೆಗೆ ಸಹಕಾರಿ ಚದುರಂಗ: ಗಡಿಗುಡಾಳ್ ಮಂಜುನಾಥ್

On: May 19, 2025 5:43 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE-19-05-2025

ದಾವಣಗೆರೆ: ನಗರದ ಗುರುಭವನದಲ್ಲಿ ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ 16 ವರ್ಷದೊಳಗಿನ ಮತ್ತು ಓಪನ್ ರಾಪಿಡ್ ಚೆಸ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು.

ಈ ಪಂದ್ಯಾವಳಿಯ ಉದ್ಘಾಟನೆಯನ್ನು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ಮಾಜಿ ನಾಯಕ ಗಡಿಗುಡಾಳ್ ಮಂಜುನಾಥ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು ಚದುರಂಗ ಆಟ ಮಕ್ಕಳಿಗೆ ಬುದ್ಧಿಶಕ್ತಿ, ತಾಳ್ಮೆ, ಆತ್ಮಸ್ಥೈರ್ಯ ಬರಲು ಕಾರಣವಾಗುತ್ತದೆ. ಮಕ್ಕಳು ಇನ್ನು ಹೆಚ್ಚಿನ ರೀತಿಯಲ್ಲಿ ಕಲಿತು ದಾವಣಗೆರೆಗೆ ಕೀರ್ತಿ ತರಲಿ ಎಂದು ಹಾರೈಸಿದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯ ನಾಗರಾಜ್, ಡಿ. ಎನ್. ಜಗದೀಶ್, ದಾವಣಗೆರೆ ಜಿಲ್ಲಾ ಕೇರಂ ಅಸೋಸಿಯೇಷನ್ ಕಾರ್ಯದರ್ಶಿ ಕೇರಂ ಗಣೇಶ್, ಅಂತರರಾಷ್ಟ್ರೀಯ ತೀರ್ಪುಗಾರ ಪ್ರಾಣೇಶ್, ಯಾದವ್ ಸಂಘದ ಕಾರ್ಯದರ್ಶಿ ಯುವರಾಜ್, ಮಂಜುಳಾ ತರುಣ್ ಮತ್ತಿತರರು ಹಾಜರಿದ್ದರು.

16 ವರ್ಷದೊಳಗಿನ ವಿಭಾಗದಲ್ಲಿ ಶಿವಮೊಗ್ಗದ ವರ್ಚಸ್ ಪ್ರಥಮ, ಹಾಗೂ ಭದ್ರಾವತಿಯ ಬಿ. ಜಿ. ಇಬ್ಬನಿ, ದ್ವಿತೀಯ, ದಾವಣಗೆರೆಯ ಸಾತ್ವಿಕ್ ನಾಯಕ್ ತೃತೀಯ ಸ್ಥಾನ, ನಾಲ್ಕು ಮತ್ತು ಐದನೇ ಸ್ಥಾನವನ್ನು ಪ್ರವೀಣ್ ಪ್ರಭಾಕರ್, ಅಮೃತ್ ಬಿ. ರಾಮ್ ಶೆಟ್ಟರ್ ಪಡೆದರು. ಓಪನ್ ಮುಕ್ತ ಪಂದ್ಯಾವಳಿಯಲ್ಲಿ ಶಿವಮೊಗ್ಗದ ಅಜಯ್ ಎಸ್.ಎಂ. ಪ್ರಥಮ, ಶಿರಸಿಯ ರಾಮಚಂದ್ರ ಭಟ್ ದ್ವಿತೀಯ,ಶಿವಮೊಗ್ಗದ ವಿಲ್ಸನ್ ಆಂಡ್ರಾಯ್ಡ್ ತೃತೀಯ ಸ್ಥಾನ ಪಡೆದರೆ, ವಿಲಾಸ್ ಅಂಡ್ ನಾಲ್ಕನೇ ಸ್ಥಾನ, ದಾವಣಗೆರೆಯ ಸಮೀರ್ ಅಹ್ಮದ್ ಐದನೇ ಸ್ಥಾನ ಪಡೆದರು.

ಈ ಪಂದ್ಯಾವಳಿಯಲ್ಲಿ ರಾಜ್ಯದ 150ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ಈ ಪಂದ್ಯಾವಳಲ್ಲಿ ಹದಿನಾರು ವರ್ಷದ ಒಳಗಿನ ವಿಭಾಗಗಳಲ್ಲಿ U06- U08- U10 – U12- U14- U16 ಓಪನ್ ಎಲ್ಲಾ ವಿಭಾಗಗಳಲ್ಲಿ ತಲಾ 10 ಸ್ಥಾನಗಳಿಗೆ ಟ್ರೋಫಿ ನೀಡಲಾಯಿತು. ಅತಿ ಹಿರಿಯ ಆಟಗಾರ ಮತ್ತು ಅತಿ ಹಿರಿಯ ಮಹಿಳೆ ಆಟಗಾರ್ತಿ ತಲಾ ಮೂರು ಪ್ರಶಸ್ತಿಯನ್ನು ಹಾಗೂ ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment