SUDDIKSHANA KANNADA NEWS/ DAVANAGERE/ DATE:08-07-2023
ದಾವಣಗೆರೆ: ದಾವಣಗೆರೆ ಲೋಕಸಭಾ ಸದಸ್ಯ ಜಿ. ಎಂ. ಸಿದ್ದೇಶ್ವರ ಅವರನ್ನು ಸೋಲಿಸುವುದೇ ನಮ್ಮ ಗುರಿ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ (S. S. Mallikarjun) ಹೇಳಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಹಿರಿಯ ಶಾಸಕರೂ ಆದ ನಿಮ್ಮ ತಂದೆ ಶಾಮನೂರು ಶಿವಶಂಕರಪ್ಪ ಅವರು ಸಿದ್ದೇಶ್ವರ ಅವರನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಸೋಲಿಸುತ್ತೇವೆ ಎಂದು ಹೇಳಿದ್ದಾರಲ್ವಾ ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.
ಮಾವ- ಅಳಿಯ ವಿಚಾರ ನನಗೆ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷದ್ದು ಅದೇ ಗುರಿ. ಸಿದ್ದೇಶ್ವರ ಅವರನ್ನು ಸೋಲಿಸಬೇಕು ಎಂಬುದು. ನನ್ನದೂ ಸೇರಿದಂತೆ ಎಲ್ಲರ ಗುರಿಯೂ ಇದೊಂದೇ ಆಗಿದೆ ಎಂದು ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯ ಭೀಮನಸಮುದ್ರದಲ್ಲಿ ಮೈನಿಂಗ್ ಲಾರಿಗಳು ಕಳೆದ ಒಂದು ತಿಂಗಳಿನಿಂದ ನಿಂತಿವೆ, ಕಾಂಗ್ರೆಸ್ ಶಾಸಕರು ಕಮೀಷನ್ ಕೇಳಿದ ಆರೋಪ ಇದೆಯಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಕಾಂಗ್ರೆಸ್ (Congress) ಎಂಎಲ್ ಎ ಗಳಾ ಅಥವಾ ಎಂಪಿನಾ..? ಚಿತ್ರದುರ್ಗ ಎಂಎಲ್ಎನೋ, ಚಿತ್ರದುರ್ಗ ಎಂಪಿನೋ ಅಥವಾ ದಾವಣಗೆರೆ ಎಂಎಲ್ಎನೋ, ದಾವಣಗೆರೆ ಎಂಪಿನೋ ಯಾರು ಅಂತಾ ಬೇಕಲ್ವಾ. ಯಾರು ಎಂಬುದು ಗೊತ್ತಾಗಬೇಕಲ್ವಾ. ಕಾನೂನು ವಿರೋಧಿಯಾಗಿದ್ದರೆ ಕ್ರಮ ತೆಗೆದುಕೊಂಡಿರುತ್ತಾರೆ. ಈ ಬಗ್ಗೆ ಪರಿಶೀಲಿಸುವಂತೆ ಸೂಚಿಸುತ್ತೇನೆ ಎಂದು ತಿಳಿಸಿದರು.
ಅರಣ್ಯ ಪ್ರದೇಶಕ್ಕೆ ಸೇರಿದ ಜಾಗದಲ್ಲಿ ಲಾರಿಗಳು ಸಂಚರಿಸುತ್ತಿವೆ ಎಂಬ ಕುರಿತಂತೆ ಮಾಹಿತಿ ಸಿಕ್ಕಿದೆ. ಬಂದ್ ಆಗಿರುವುದರ ಬಗ್ಗೆ ಹೇಳಿದ್ದಾರೆಯೋ ಅಥವಾ ಬಂದ್ ಮಾಡಲು ಹೇಳಿದ್ದಾರೆಯೋ ಬಿಜೆಪಿ ಮಾಜಿ ಅಧ್ಯಕ್ಷರು ಎಂದು ಪ್ರಶ್ನಿಸಿದ ಮಲ್ಲಿಕಾರ್ಜುನ್ ಅವರು, ಅವರಿಗ್ಯಾಕೆ ಇದರ ಉಸಾಬರಿ, ಅಲ್ಲಿಯೇ ಹೋಗಿ ಖುರ್ಚಿ ಹಾಕಿಕೊಂಡು ಕುಳಿತುಕೊಳ್ಳಲು ಹೇಳಿ ಎಂದು ಕಿಡಿಕಾರಿದರು.
ಈ ಸುದ್ದಿಯನ್ನೂ ಓದಿ:
Davanagere: ಭ್ರಷ್ಟಾಚಾರ ನಡೆಸಿದರೆ ಸಹಿಸುವ ಪ್ರಶ್ನೆಯೇ ಇಲ್ಲ: ಅಧಿಕಾರಿಗಳಿಗೆ ಎಸ್. ಎಸ್. ಮಲ್ಲಿಕಾರ್ಜುನ್ ಖಡಕ್ ಸೂಚನೆ
ಆಶ್ರಯ ಯೋಜನೆಯಡಿ ನಿವೇಶನ ನೀಡುವಲ್ಲಿ ಲೋಪದೋಷವಾಗಿವೆ ಎಂಬುದಾಗಿ ಮೂಕರ್ಜಿಗಳು ಬಂದಿವೆ. ಕೆಲವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತನಿಖೆಗೆ ನೀಡಲಾಗಿದೆ. ಅದಾದ ಬಳಿಕ ಸತ್ಯಾಂಶ ಹೊರಬರಲಿದೆ. ಚುನಾವಣೆ ವೇಳೆಯಲ್ಲಿ ಸರ್ಟಿಫಿಕೆಟ್ ಕೊಟ್ಟರು, ಹಕ್ಕು ಪತ್ರ ಕೊಡುತ್ತೇವೆ ಎಂದರು. ಇದರಲ್ಲಿ ಸಾಕಷ್ಟು ದುರುಪಯೋಗ ನಡೆದಿದೆ, ದುಡ್ಡು ಸಂಗ್ರಹ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಎಲ್ಲವೂ ತನಿಖೆಯಾಗಲಿ. ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Shamanuru Mallikarjun, Shamanuru Mallikarjun Statement, Shamanuru Mallikarjun Stad, Shamanuru Mallikarjun in Davanagere