SUDDIKSHANA KANNADA NEWS/ DAVANAGERE/ DATE:16-04-2025
ದಾವಣಗೆರೆ: ನ್ಯಾಮತಿ ತಾಲ್ಲೂಕಿನ ಸುರಹೊನ್ನೆಯಲ್ಲಿ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿ ಹಾಗೂ ಕರಿಯಮ್ಮ ದೇವಿ ರಥೋತ್ಸವದ ಹಿನ್ನೆಲೆಯಲ್ಲಿ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಹಾಗೂ ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಅವರು ಭೇಟಿ ನೀಡಿದರು. ಈ ವೇಳೆ ಶ್ರೀ ಚನ್ನ ಮಲ್ಲಿಕಾರ್ಜುನ ಸ್ವಾಮಿ ಮತ್ತು ಕರಿಯಮ್ಮ ದೇವಿಯ ದರ್ಶನ ಪಡೆದರು.
ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿ ಮತ್ತು ಕರಿಯಮ್ಮ ದೇವಿಯ ದರ್ಶನ ಪಡೆದಿದ್ದು ತುಂಬಾನೇ ಖುಷಿ ಕೊಟ್ಟಿತು. ಇಲ್ಲಿಗೆ ಬಂದ ಗ್ರಾಮದ ಜನರು ತೋರಿದ ಪ್ರೀತಿಗೆ ಎಂದಿಗೂ ಚಿರಋಣಿಯಾಗಿರುತ್ತೇನೆ. ಪ್ರತಿಯೊಬ್ಬರೂ ಮನೆಮಗನಂತೆ
ಬರಮಾಡಿಕೊಂಡರು. ಇದು ಸಂತಸ ಕೊಟ್ಟಿದೆ ಎಂದು ಜಿ. ಬಿ. ವಿನಯ್ ಕುಮಾರ್ ಅವರು ಹೇಳಿದರು.
ಈ ಬಾರಿ ಉತ್ತಮ ಮಳೆಯಾಗಲಿ. ರೈತರ ಬದುಕು ಹಸನಾಗಲಿ. ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮತ್ತು ಕರಿಯಮ್ಮ ದೇವಿಯು ಎಲ್ಲರಿಗೂ ಒಳಿತು ಮಾಡಲಿ ಎಂದು ಪ್ರಾರ್ಥನೆ ಸಲ್ಲಿಸಿರುವುದಾಗಿ ಅವರು ತಿಳಿಸಿದರು.
ಈ ವೇಳೆ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿ ಆದಿಶಕ್ತಿ ದೇವಿ ಮತ್ತು ಶ್ರೀ ಗಡಿ ಚೌಡೇಶ್ವರಿ ಸೇವಾ ಸಮಿತಿಯ ಧರ್ಮಪ್ಪ, ಈಶ್ವರಪ್ಪ, ಹಳದಪ್ಪ, ಅಶೋಕಪ್ಪ, ರೇವಣಸಿದ್ದಪ್ಪ, ಧರ್ಮಪ್ಪ, ಶ್ರೀಕಾಂತ್ ಅವರು ಜಿ.ಬಿ. ವಿನಯ್ ಕುಮಾರ್ ರವರನ್ನು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮಾತನಾಡಿದ ಸಮಿತಿಯ ಪದಾಧಿಕಾರಿಗಳು ಜಿ. ಬಿ. ವಿನಯ್ ಕುಮಾರ್ ಅವರು ಆಗಮಿಸಿದ್ದು ನಮ್ಮೆಲ್ಲರಿಗೂ ಸಂತೋಷ ಕೊಟ್ಟಿದೆ. ಎಲ್ಲರೊಟ್ಟಿಗೆ ವಿನಯ್ ಕುಮಾರ್ ಅವರು ಬೆರೆಯುವ ರೀತಿ, ಶಿಕ್ಷಣಕ್ಕೆ ನೀಡುತ್ತಿರುವ ಮಹತ್ವ,
ಎಲ್ಲಾ ವರ್ಗದವರ ಬಗ್ಗೆ ಇರುವ ಕಾಳಜಿ ನಮ್ಮೆಲ್ಲರನ್ನೂ ಪುಳಕಿತಗೊಳಿಸಿದೆ ಎಂದು ಹೇಳಿದರು.
ಇನ್ನು ದೇವರ ದರ್ಶನಕ್ಕೆ ಬಂದಿದ್ದ ಭಕ್ತರು ವಿನಯ್ ಕುಮಾರ್ ಅವರಿಗೆ ನಾವು ನಿಮ್ಮೊಂದಿಗೆ ಇದ್ದೇವೆ. ನೀವು ಮುನ್ನಡೆಯಿರಿ. ನಿಮ್ಮ ಮಾತುಗಳು ನಮಗೆ ಸ್ಫೂರ್ತಿದಾಯಕ. ಎಲ್ಲಾ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ಗುಣಮಟ್ಟ ನೀಡುವ ಗುರಿ ಹೊಂದಿದ್ದಾರೆ. ಈ ಕನಸು ಈಡೇರಲಿ. ಬಡವರ ಮಕ್ಕಳೂ ಐಎಎಸ್, ಐಪಿಎಸ್, ಕೆಎಎಸ್ ನಂಥ ಉನ್ನತ ಹುದ್ದೆಗೆ ಹೋಗುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಅವರ ಈ ಕನಸು ಈಡೇರಲಿ ಎಂದು ಮಲ್ಲಿಕಾರ್ಜುನಸ್ವಾಮಿ ಮತ್ತು ಕರಿಯಮ್ಮ ದೇವಿಯಲ್ಲಿ ನಾವೂ ಪ್ರಾರ್ಥಿಸಿದ್ದೇವೆ ಎಂದು ತಿಳಿಸಿದರು.