ಭಾರತದಲ್ಲಿ ಮದುವೆಯಾಗುವುದು ಅದೆಷ್ಟೋ ಯುವಕ-ಯುವತಿಯರ ಕನಸಾಗಿದೆ. ಆದರೆ ದಕ್ಷಿಣ
ಕೊರಿಯಾದಲ್ಲಿ ಸರ್ಕಾರವೇ ಮದುವೆ ಮಾಡಿಕೊಳ್ಳಿ ಎಂದು ಜನರ ಚೆನ್ನು ಬಿದ್ದಿದೆ.
ಮಾತ್ರವಲ್ಲದೆ ಮಕ್ಕಳು ಮಾಡಿಕೊಂಡರೆ 31 ಲಕ್ಷ ನೀಡುವುದಾಗಿ ಘೋಷಣೆ ಕೂಡ ಮಾಡಿದೆ. ದಕ್ಷಿಣ ಕೊರಿಯಾ ಜನರು ಮದುವೆಗೆ ಆಸಕ್ತಿ ತೋರಿಸುತ್ತಿಲ್ಲವಂತೆ ಇದರಿಂದ ಸರ್ಕಾರ ಭಾರೀ ಆಘಾತಕ್ಕೆ ಒಳಗಾಗಿದೆ. ಈಗಾಗಲೇ ಇಲ್ಲಿ ಜನನ ಪ್ರಮಾಣ ಕುಸಿದಿದ್ದು, ಅದನ್ನು ಸಮ ಪ್ರಮಾಣಕ್ಕೆ ತರಲು ಸರ್ಕಾರ ಪರದಾಡುತ್ತಿದೆ. ಇಲ್ಲಿ ಮಾತ್ರವಲ್ಲದೇ ಜಪಾನ್ ದೇಶದಲ್ಲಿಯೂ
ಇದೇ ಪರಿಸ್ಥಿತಿ ಉಂಟಾಗಿದೆ.