ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

BIG BREAKING: ಶಾಮನೂರು ಶಿವಶಂಕರಪ್ಪ, ಎಸ್. ಎಸ್. ಮಲ್ಲಿಕಾರ್ಜುನ್, ಡಾ. ಪ್ರಭಾ ಮಲ್ಲಿಕಾರ್ಜುನ್ ಬಗ್ಗೆ ಅವಹೇಳನ: ಎಫ್ಐಆರ್ ದಾಖಲು!

On: September 11, 2025 12:02 PM
Follow Us:
ಶಾಮನೂರು ಶಿವಶಂಕರಪ್ಪ
---Advertisement---

SUDDIKSHANA KANNADA NEWS/ DAVANAGERE/DATE:11_09_2025

ದಾವಣಗೆರೆ: ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ತೇಜೋವಧೆ ಮಾಡಿದ್ದು ಜಿಲ್ಲಾ ಪೊಲೀಸ್ ಸೈಬರ್ ಕ್ರೈಂ ಠಾಣೆ ಡಿವೈಎಸ್ಪಿ ಅವರಿಗೆ ದೂರು ನೀಡಲಾಗಿದ್ದು, ಎಫ್ಐಆರ್ ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ: “ನಾನು ಮುಸ್ಲಿಂ ಧರ್ಮದಲ್ಲಿ ಹುಟ್ಟಬೇಕೆಂದಿದ್ದು ನಿಜ”: ಸಮರ್ಥಿಸಿಕೊಂಡ ಭದ್ರಾವತಿ ಕಾಂಗ್ರೆಸ್ ಬಿ. ಕೆ. ಸಂಗಮೇಶ್ವರ ಏನೆಲ್ಲಾ ಹೇಳಿದ್ರು?

ರವಿರಾಜ್ ವಿ. ಹಿಂದೂ ಮತ್ತು ದರ್ಶನ್ ಪವರ್ ಎಂಬ ಹೆಸರಿನ ಫೇಸ್ ಬುಕ್ ಖಾತೆದಾರ ರಾಜ್ಯದ ತೋಟಗಾರಿಕ ಸಚಿವ ಎಸ್. ಎಸ್. ಮಲ್ಲಿಕಾರ್ಜನ್ ಅವರು ಈ ಹಿಂದೆ ಹಿಂದು ಮತ್ತು ಮುಸ್ಲಿಂ ಬಾಂಧವರು ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುವಂತೆ ಮಾತನಾಡಿರುವ ವಿಡಿಯೋವನ್ನು ತಿರುಚಿರುವುದು ಕಂಡು ಬಂದಿದೆ. ರವಿರಾಜ್ ವಿ. ಹಿಂದೂ ಎಂಬವರು ಫೇಸ್ ಬುಕ್ ನಲ್ಲಿ. ತಮ್ಮ ಫೇಸ್ ಬುಕ್ ಖಾತೆಯಲಿ, ಎಸ್. ಎಸ್. ಮಲ್ಲಿಕಾರ್ಜುನ್ ಅವರು ಮಾತನಾಡಿರುವ ಭಾಷಣವನ್ನು ಎಡಿಟ್ ಮಾಡಿ, ಎಸ್. ಎಸ್. ಮಲ್ಲಿಕಾರ್ಜುನ್ ಮತ್ತು ಅವರ ತಂದೆಯ ಬಗ್ಗೆ, ಅವಹೇಳನಕಾರಿಯಾಗಿ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ಫೇಸ್ ಬುಕ್ ನಲ್ಲೇ ಕ್ರಿಯೇಟ್ ಮಾಡಿ ವಿಡಿಯೋ ಹರಿಬಿಡಲಾಗಿದೆ.

ದಾವಣಗೆರೆಯ ದರ್ಶನ್ ಪವ‌ರ್ ಎಂಬುವರು ನೋಡಿ, ಲೈಕ್ ಮಾಡಿ, ಸುಮಾರು 14 ಕ್ಕಿಂತ ಹೆಚ್ಚು ಜನರಿಗೆ ಶೇರ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ, ನೋಡುವಂತೆ ಮಾಡಲು ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಅವರ ತಂದೆಯವರಿಗೆ ತೇಜೋವಧೆಯುಂಟು ಮಾಡುವ ಕೆಲಸವನ್ನು ಮಾಡಿದ್ದಾರೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಎಸ್ ಎಸ್ ಮಲ್ಲಿಕಾರ್ಜುನ್ ಅವರ ವಿಡಿಯೋವನ್ನು ಎಡಿಟ್ ಮಾಡಿ ಹರಿಬಿಟ್ಟಿರುವ ರವಿರಾಜ್ ವಿ. ಹಿಂದು ಮತ್ತು ದರ್ಶನ್ ಪವರ್ ಎಂಬ ಫೇಸ್ ಬುಕ್ ಖಾತೆಯಲಿರುವ ವ್ಯಕ್ತಿಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಲಿಖಿತ ದೂರು ಸ್ವೀಕರಿಸಿ, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಎಸ್. ಎಸ್. ಮಲ್ಲಿಕಾರ್ಜುನ್, ಶಾಮನೂರು ಶಿವಶಂಕರಪ್ಪ ಹಾಗೂ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಬಗ್ಗೆ ಅವಹೇಳನಕಾರಿ ತೇಜೋವಧೆ ಮಾಡಿರುವವರ ಪತ್ತೆ ಮಾಡಿ ಎಫ್ ಐಆರ್ ದಾಖಲಿಸುವಂತೆ ದಾವಣಗೆರೆ ಜಿಲ್ಲಾ ಪೊಲೀಸ್ ಸೈಬರ್ ಕ್ರೈಂ ಠಾಣೆಯಲ್ಲಿ ಡಿವೈಎಸ್ಪಿ ಅವರಿಗೆ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಲೀಗಲ್ ಸೆಲ್ ಚೇರ್ಮನ್ ಡಿ. ಸಿ. ರಾಕೇಶ್, ಹರೀಶ್, ವಿವೇಕ್, ಲೀಗಲ್ ಸೆಲ್ ಕಮಿಟಿಯ ಉಪಾಧ್ಯಕ್ಷ ನವೀನ್ ಹೊರಟ್ಟಿ ಅವರು ದೂರು ನೀಡಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment