SUDDIKSHANA KANNADA NEWS/ DAVANAGERE/ DATE-02-07-2025
ದಾವಣಗೆರೆ: ದಾವಣಗೆರೆ ನಗರದಲ್ಲಿ ಆಟೋಗಳಲ್ಲಿ ಹೆಚ್ಚುವರಿ ಪ್ಯಾಸೆಂಜರ್ಸ್ ಗಳನ್ನು ಹಾಕಿಕೊಂಡು ಸಂಚಾರ ನಿಯಮಗಳ ಉಲ್ಲಂಘನೆ ಮಾಡಿದಂತಹ ಆಟೋಗಳ ಮೇಲೆ ಒಟ್ಟು ಏಳು ಕೇಸ್ ದಾಖಲಿಸಲಾಗಿದೆ.
ಈ ಸುದ್ದಿಯನ್ನೂ ಓದಿ: EXCLUSIVE: ದಾವಣಗೆರೆಯಲ್ಲಿ ಹೃದಯಾಘಾತಕ್ಕೆ 2ನೇ ಬಲಿ: ಎದೆನೋವೆಂದು ಆಸ್ಪತ್ರೆಗೆ ಹೋದ ಬಳಿಕ ಸಾವು!

ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರ ಸೂಚನೆಯಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ, ನಗರ ಡಿವೈಎಸ್ಪಿ ಶರಣಬಸವೇಶ್ವರ ಭೀಮರಾವ್ ಮಾರ್ಗದರ್ಶನದಲ್ಲಿ ದಾವಣಗೆರೆ ದಕ್ಷಿಣ ಟ್ರಾಫಿಕ್ ಪೊಲೀಸ್ ಪಿಎಸ್ಐ ಶೈಲಜಾ ಹಾಗೂ ನಿರ್ಮಲ ನೇತೃತ್ವದಲ್ಲಿ ಹಾಗೂ ಸಂಚಾರ ಸಿಬ್ಬಂದಿಗಳನ್ನೊಳಗೊಂಡ ತಂಡಗಳು ಇಂದು ವಿಶೇಷ ಕಾರ್ಯಚರಣೆ ನಡೆಸಿದವು.
ದಾವಣಗೆರೆ ನಗರದಲ್ಲಿ ಇಂದು ಆಟೋ ರಿಕ್ಷಾಗಳಲ್ಲಿ ನಿಗಧಿಗಿಂತ ಹೆಚ್ಚುವರಿ ವಿದ್ಯಾರ್ಥಿಗಳು, ಪ್ಯಾಸೆಂಜರ್ಸ್ ಗಳನ್ನು ಹಾಕಿಕೊಂಡು ಚಾಲನೆ ಮಾಡುತ್ತಿದ್ದ ಆಟೋಗಳನ್ನು ಹಿಡಿದಿದ್ದು, ಆಟೋ ರಿಕ್ಷಾಗಳಲ್ಲಿ ನಿಗದಿಗಿಂತ ಹೆಚ್ಚುವರಿ ಪ್ಯಾಸೆಂಜರ್ಸ್ ಗಳನ್ನು ಕೂರಿಸಿಕೊಂಡು ಹೋಗುತ್ತಿದ್ದು ಪತ್ತೆಯಾಗಿದೆ. ಸಂಚಾರ ನಿಯಮ ಉಲ್ಲಂಘನೆ ಸಂಬಂಧ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ 7 ಪ್ರಕರಣಗಳನ್ನು ದಾಖಲಿಸಲಾಗಿದೆ.
ದಾವಣಗೆರೆ ನಗರದಲ್ಲಿ ನಿಗದಿಗಿಂತ ಹೆಚ್ಚುವರಿ ವಿದ್ಯಾರ್ಥಿಗಳು, ಪ್ಯಾಸೆಂಜರ್ಸ್ ಗಳನ್ನು ಹಾಕಿಕೊಂಡು ಚಲಾಯಿಸುವ ಆಟೋಗಳ ಮೇಲೆ ಇನ್ನು ಮುಂದೆಯೂ ಕಾರ್ಯಾಚರಣೆ ನಡೆಸಲಾಗುವುದು. ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಎಲ್ಲಾ ಆಟೋ ಚಾಲಕರು, ಮಾಲೀಕರಿಗೆ ಪೊಲೀಸ್ ಇಲಾಖೆಯು ಎಚ್ಚರಿಕೆ ನೀಡಿದೆ.