Home ಕ್ರೈಂ ನ್ಯೂಸ್ ಪ್ರಿಯಕರನ ಜೊತೆಗೂಡಿ ಗಂಡನನ್ನೇ ಕೊಲೆ ಮಾಡಿದ ಹೆಂಡತಿ, ಕಳ್ಳರ ಕಥೆ ಕಟ್ಟಿ ಸಿಕ್ಕಿಬಿದ್ದಳು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪ್ರಿಯಕರನ ಜೊತೆಗೂಡಿ ಗಂಡನನ್ನೇ ಕೊಲೆ ಮಾಡಿದ ಹೆಂಡತಿ, ಕಳ್ಳರ ಕಥೆ ಕಟ್ಟಿ ಸಿಕ್ಕಿಬಿದ್ದಳು!

Share
ಪ್ರಿಯಕರ
Share

ಫರೀದಾಬಾದ್: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಭೀಕರವಾಗಿ ಕೊಲೆ ಮಾಡಿ, ಮನೆಗೆ ಕಳ್ಳರು ನುಗ್ಗಿ ದಾಳಿ ಮಾಡಿದ್ದಾರೆಂದು ಸುಳ್ಳು ಕಥೆ ಕಟ್ಟಿ ಸಿಕ್ಕಿಬಿದ್ದ ಘಟನೆ ಹರಿಯಾಣದ ಫರೀದಾಬಾದ್‌ನಲ್ಲಿ ನಡೆದಿದೆ.

ಹತ್ಯೆಗೊಳಗಾದ ವ್ಯಕ್ತಿಯನ್ನು ಉತ್ತರ ಪ್ರದೇಶದ ಹಾಥರಸ್ ಮೂಲದ ಗೋಪಾಲ್ (40) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಪಾಲ್ ಅವರ ಪತ್ನಿ ಕಾಜಲ್ ಹಾಗೂ ಆಕೆಯ ಪ್ರಿಯಕರ (ಬೌನ್ಸರ್) ಯೋಗೇಂದ್ರ ಎಂಬಾತನನ್ನು ಫರೀದಾಬಾದ್ ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ:

ಅಕ್ಟೋಬರ್ 14 ಮತ್ತು 15 ರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಅಂದು ರಾತ್ರಿ ಮನೆಗೆ ಬಂದ ಗೋಪಾಲ್ ನಿದ್ರಿಸುತ್ತಿದ್ದಾಗ, ಪತ್ನಿ ಕಾಜಲ್ ತರಕಾರಿ ಕತ್ತರಿಸುವ ಚಾಕುವಿನಿಂದ ಆತನ ಕುತ್ತಿಗೆಗೆ ಬಲವಾಗಿ ಇರಿದು ಕೊಲೆ ಮಾಡಿದ್ದಾಳೆ. ತದನಂತರ ಯಾರೋ ಅಪರಿಚಿತ ವ್ಯಕ್ತಿಗಳು ಮನೆಗೆ ನುಗ್ಗಿ ಪತಿಯ ಮೇಲೆ ದಾಳಿ ನಡೆಸಿದ್ದಾರೆ ಎಂದು ನೆರೆಹೊರೆಯವರಿಗೆ ಹಾಗೂ ಪೊಲೀಸರಿಗೆ ಕಥೆ ಕಟ್ಟಿದ್ದಳು. ಆದರೆ ಪೊಲೀಸರು ಆಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದು, ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಸ್ನೇಹ ಅನೈತಿಕ ಸಂಬಂಧಕ್ಕೆ ತಿರುಗಿತ್ತು:

ಕೊಲೆಯಾದ ಗೋಪಾಲ್ ಫರೀದಾಬಾದ್‌ನ ಕಂಪನಿಯೊಂದರಲ್ಲಿ ಕಳೆದ 20 ವರ್ಷಗಳಿಂದ ಮೆಷಿನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಸುಮಾರು 16 ವರ್ಷಗಳ ಹಿಂದೆ ಮೊದಲ ಗಂಡನನ್ನು ತೊರೆದು ಬಂದಿದ್ದ ಕಾಜಲ್‌ನನ್ನು ಗೋಪಾಲ್ ಕೋರ್ಟ್ ಮದುವೆಯಾಗಿದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ. ಹಾಥರಸ್‌ನಲ್ಲಿರುವ ಸ್ವಂತ ಮನೆಯಲ್ಲಿ ಕಾಜಲ್ ಮಕ್ಕಳೊಂದಿಗೆ ವಾಸಿಸುತ್ತಿದ್ದರೆ, ಗೋಪಾಲ್ ಫರೀದಾಬಾದ್‌ನಲ್ಲಿ ದುಡಿದು ಕುಟುಂಬ ನಿರ್ವಹಣೆ ಮಾಡುತ್ತಿದ್ದರು.

ಗೋಪಾಲ್ ಅವರ ಊರಿನ ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿ ವಾಸಿಸುತ್ತಿದ್ದ ಯೋಗೇಂದ್ರ ಎಂಬಾತ ಗೋಪಾಲ್ ಸ್ನೇಹಿತನಾಗಿದ್ದ. ಆದರೆ ಗೋಪಾಲ್ ಕೆಲಸಕ್ಕೆ ತೆರಳಿದಾಗ ಯೋಗೇಂದ್ರ ಮನೆಗೆ ಬರಲು ಪ್ರಾರಂಭಿಸಿದ್ದ. ಇದು ಕಾಜಲ್ ಹಾಗೂ ಯೋಗೇಂದ್ರ ನಡುವೆ ಅನೈತಿಕ ಸಂಬಂಧಕ್ಕೆ ಕಾರಣವಾಗಿತ್ತು. ಈ ವಿಚಾರ ತಿಳಿದ ಗೋಪಾಲ್ ದಂಪತಿ ನಡುವೆ ತೀವ್ರ ಗಲಾಟೆ ನಡೆದಿತ್ತು. ಈ ಜಗಳದಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ಗೋಪಾಲ್ ಊರಿನ ಮನೆಗೆ ಹೋಗುವುದನ್ನೇ ಬಿಟ್ಟಿದ್ದರು.

ಪೂರ್ವನಿಯೋಜಿತ ಸಂಚು:

ಅನೈತಿಕ ಸಂಬಂಧಕ್ಕೆ ಗೋಪಾಲ್ ಅಡ್ಡಿಯಾಗುತ್ತಿದ್ದ ಕಾರಣ, ಆತನನ್ನು ಮುಗಿಸಲು ಕಾಜಲ್ ಮತ್ತು ಯೋಗೇಂದ್ರ ಯೋಜನೆ ರೂಪಿಸಿದ್ದರು. ಅದರಂತೆ ಅಕ್ಟೋಬರ್ 13 ರಂದು ಮಕ್ಕಳೊಂದಿಗೆ ಫರೀದಾಬಾದ್‌ಗೆ ಬಂದ ಕಾಜಲ್, ಮರುದಿನ ಪ್ರಿಯಕರ ಯೋಗೇಂದ್ರನನ್ನು ಅಲ್ಲಿಗೆ ಕರೆಸಿಕೊಂಡಿದ್ದಳು. ಅಕ್ಟೋಬರ್ 14 ರ ರಾತ್ರಿ ಗೋಪಾಲ್ ಗಾಢ ನಿದ್ರೆಯಲ್ಲಿದ್ದಾಗ ಕಾಜಲ್ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾಳೆ.

ಈ ಕೊಲೆಯಲ್ಲಿ ಕಾಜಲ್‌ನ ಮೊದಲ ಪತಿಯ ಮಗಳು ಶಾಲಿನಿ (19) ಪಾತ್ರವೂ ಇದೆ ಎಂದು ಗೋಪಾಲ್ ಅವರ ಸಹೋದರ ಅಶೋಕ್ ಶಂಕೆ ವ್ಯಕ್ತಪಡಿಸಿದ್ದರು. ಆದರೆ, ಸದ್ಯದ ತನಿಖೆಯಲ್ಲಿ ಆಕೆಯ ಭಾಗವಹಿಸುವಿಕೆಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *