Home ಕ್ರೈಂ ನ್ಯೂಸ್ ಫೇಸ್ ಬುಕ್ ಗೆಳತಿ ಪ್ರೀತಿಸಿ ಮದುವೆಯಾದ, ಯುವತಿಯರ ಪಟಾಯಿಸಿ ಮಜಾ ಮಾಡ್ತಿದ್ದ: ಪತಿ ಮನ್ಮಥಲೀಲೆ ಬಟಾಬಯಲಾಗಿಸಿದ ಪತ್ನಿ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಫೇಸ್ ಬುಕ್ ಗೆಳತಿ ಪ್ರೀತಿಸಿ ಮದುವೆಯಾದ, ಯುವತಿಯರ ಪಟಾಯಿಸಿ ಮಜಾ ಮಾಡ್ತಿದ್ದ: ಪತಿ ಮನ್ಮಥಲೀಲೆ ಬಟಾಬಯಲಾಗಿಸಿದ ಪತ್ನಿ!

Share
ಪತಿ
Share

ಮಂಗಳೂರು: ಪ್ರೀತಿ ಮಾಯೆ ಹುಷಾರು ಎಂಬ ಮಾತಿದೆ. ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾಗಿ, ಪ್ರೀತಿಸಿ ಮದುವೆಯಾದವರ ಎಷ್ಟೋ ಮಂದಿ ಬದುಕು ಬೀದಿಗೆ ಬಿದ್ದಿದೆ. ಇಂಥದ್ದೇ ಒಂದು ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದಿದೆ. ತನ್ನ ಪತಿ ಮನ್ಮಥಲೀಲೆಗಳನ್ನು ಪತ್ನಿಯೇ ಬಟಾಯಲಾಗಿಸಿದ ಕೇಸ್ ಇದು.

ಪತಿ ಲೀಲೆ ಜಗಜ್ಜಾಹೀರುಗೊಳಿಸಿದ ಪತ್ನಿ:

ಪ್ರೀತಿ ಎಂಬಾಕೆಗೆ ಫೇಸ್ ಬುಕ್ ನಲ್ಲಿ ಮಂಗಳೂರಿನ ಮನೀಶ್ ಪರಿಚಯವಾಗಿದ್ದ. ಪರಿಚಯ ಪ್ರೀತಿಗೆ ತಿರುಗಿತ್ತು. ಆ ನಂತರ ಮದುವೆಯೂ ಆಗಿದ್ದ. ಪ್ರೀತಿಯು ತನ್ನ ಪತಿ ದುಡಿದು ಸಂಸಾರದ ನೌಕೆ ಸಾಗಿಸಲು ನೆರವಾಗಲೆಂದು 2 ಲಕ್ಷ ರೂಪಾಯಿ ನೀಡಿ ಮನೀಶ್ ಗೆ ದುಬೈನಲ್ಲಿ ಕೆಲಸ ಕೊಡಿಸಿದ್ದಳು. ದುಬೈ ಕೆಲಸಕ್ಕೆ ಹೋದ ಮನೀಶ್ ತನ್ನ ಲೀಲೆಗಳನ್ನು ಮುಂದುವರಿಸಿದ್ದ.

ಬಹರೇನ್ ಮಹಿಳೆ ಜೊತೆ ಲವ್ವಿಡವ್ವಿ:

ಬಹರೇನ್​ನಲ್ಲಿರೋ ಮಹಿಳೆ ಜೊತೆ ಲವ್ವಿಡವ್ವಿಗೆ ಬಿದ್ದಿದ್ದ. ಆಕೆ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಆಕೆ ಜೊತೆ ಎಲ್ಲೆಂದರಲ್ಲಿ ಎಂಜಾಯ್ ಮಾಡ್ತಿದ್ದ. ತನ್ನ ಪತ್ನಿ ಪ್ರೀತಿಗೆ ಫೋನ್ ಮಾಡುತ್ತಿರಲಿಲ್ಲ. ಈಕೆ ಫೋನ್ ಮಾಡಿದಾಗಲೂ ಸರಿಯಾಗಿ ಪ್ರತಿಕ್ರಿಯಿಸುತ್ತಿರಲಿಲ್ಲ. ಮಾತನಾಡುತ್ತಿರಲಿಲ್ಲ. ಆಕೆಗೆ ಇದು ಅನುಮಾನ ಬರುವಂತೆ ಮಾಡಿತ್ತು.

ಮನೀಶ್ ಇತಿಹಾಸವೇ ಯುವತಿಯರಿಗೆ ಮೋಸ: 

ಆಗ ಮನೀಷ್ ಇತಿಹಾಸ ತಿಳಿಯಲು ಮುಂದಾದ ಪ್ರೀತಿಗೆ ಆಶ್ಚರ್ಯ ಕಾದಿತ್ತು. ಯಾಕೆಂದರೆ ಮನೀಶ್ ಎಂಬ ಮನ್ಮಥರಾಜನದ್ದು ಹಲವು ಯುವತಿಯರ ಜೊತೆಗಿನ ಸ್ನೇಹ. ಜೊತೆಗೆ ರಂಗಿನ್ ಆಟ. ಮದುವೆಗೂ ಮುಂಚೆ ಯುವತಿಯರ ಜೊತೆ ಲವ್ ಅಫೇರ್ ಇತ್ತು ಎನ್ನುವುದು ಬಯಲಾಗಿದೆ.

ಬ್ರೈನ್ ಟ್ಯೂಮರ್ ಎನ್ನೋದು ಹಣ ಪೀಕೋದು: 

ಈ ಹಿಂದೆಯೂ ಮನೀಶ್ ಯುವತಿಯರ ಬಳಿ ಹಣ ಪಡೆದು ಮೋಸ ಮಾಡಿದ್ದ ಅನ್ನೋ ಬಗ್ಗೆ ಪ್ರೀತಿಗೆ ಮಾಹಿತಿ ಸಿಕ್ಕಿದೆ. ಹಣ ವಾಪಸ್ ಕೇಳಿದ್ರೆ, ಬ್ರೈನ್ ಟ್ಯೂಮರ್ ಇದೆ ಎಂದು ಎಲ್ಲಾ ಹುಡುಗೀರಿಗೆ ಹೇಳಿ, ಹಣ ಕೊಡದೇ ಲವ್ ಬ್ರೇಕಪ್ ಮಾಡ್ಕೊಂಡಿದ್ದಾನೆ. ಅಂದಾಗೆ, ಈ ಮಂಗಳೂರಿನ ಮನ್ಮಥ, ಟಿಕ್ ಟಾಕ್​ನಲ್ಲಿ ರೀಲ್ಸ್ ಮಾಡಿ ಯುವತಿಯರಿಗೆ ಗಾಳ ಹಾಕ್ತಿದ್ದ. ಸದ್ಯ ಮನೀಷ್ ವಿರುದ್ಧ ಪತ್ನಿ ದೂರು ನೀಡಿದ್ದು, ಮಂಗಳೂರು ಮಹಿಳಾ ಠಾಣೆಯಲ್ಲಿ FIR ದಾಖಲಾಗಿದೆ.

ಮಹಿಳೆಯರು, ಯುವತಿಯರೇ ಹುಷಾರ್:

ಸೋಷಿಯಲ್ ಮೀಡಿಯಾ ಅನ್ನೋದು ಜನರನ್ನು ವಂಚನೆ ಮಾಡುವ ಮಾಧ್ಯಮ ಎನ್ನುವಂತಾಗಿಬಿಟ್ಟಿದೆ. ಒಳ್ಳೆಯದಕ್ಕೆ ಬಳಕೆಯಾಗೋದಕ್ಕಿಂತ ಕೆಟ್ಟದ್ದಕ್ಕೆ ಹೆಚ್ಚು ಬಳಕೆಯಾಗ್ತಿದೆ. ಇನ್ನು ಮುಂದಾದರೂ ಯುವತಿಯರು, ಮಹಿಳೆಯರು ಈ ಫೇಸ್ ಬುಕ್ ಮೋಸಗಾರರ ಬಗ್ಗೆ ಎಚ್ಚರ ವಹಿಸಬೇಕು. ಇಲ್ಲದಿದ್ದರೆ ಬದುಕು ಬೀದಿಗೆ ಬೀಳುವಂತೆ ಗ್ಯಾರಂಟಿ.

Share

Leave a comment

Leave a Reply

Your email address will not be published. Required fields are marked *

Related Articles