ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Kalaburagi: ರಾಜ್ಯದಲ್ಲಿ ಎಣ್ಣೆ ದುಬಾರಿ, ಪಣಜಿ ಟು ಹೈದರಾಬಾದ್ ಗೆ ಅಕ್ರಮ ಮದ್ಯ ಸಾಗಣೆ ಪತ್ತೆ ಹಚ್ಚಿದ್ದೇಗೆ ಅಬಕಾರಿ ಪೊಲೀಸ್…? ವಶಪಡಿಸಿಕೊಂಡ “ಎಣ್ಣೆ” ಎಷ್ಟು ಮೌಲ್ಯದ್ದು ಗೊತ್ತಾ…?

On: September 29, 2023 2:31 PM
Follow Us:
EXICISE OFFICERES RAID IN KALABURAGI
---Advertisement---

SUDDIKSHANA KANNADA NEWS/ DAVANAGERE/ DATE:29-09-2023

ಕಲಬುರಗಿ (Kalaburagi): ಗೋವಾದ ಪಣಜಿಯಿಂದ ನಗರದ ಮೂಲಕ ಹೈದರಾಬಾದ್‌ಗೆ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶಪಡಿಸಿಕೊಂಡಿರುವ ಅಬಕಾರಿ ಪೊಲೀಸ್ ಸಿಬ್ಬಂದಿ ವಿವಿಧ ಬ್ರ್ಯಾಂಡ್ ನ ಗೋವಾ ರಾಜ್ಯದ ಒಟ್ಟು 9 ಲೀಟರ್ ಮದ್ಯ, ಬಸ್ ಸೇರಿ 45 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಸುದ್ದಿಯನ್ನೂ ಓದಿ: 

ಏರಿಕೆ ಕಂಡ ಷೇರುಪೇಟೆ (STOCK MARKET): ನಿಫ್ಟಿ114 ಅಂಕ, ಸೆನ್ಸೆಕ್ಸ್ 320 ಅಂಕ ಏರಿಕೆ

ತೆಲಂಗಾಣ ಮತ್ತು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ನಿವಾಸಿಗಳಾದ ಮುರಳಿಕೃಷ್ಣ, ಸತ್ಯನಾರಾಯಣ, ಬನೋಥ್ ಬಾಳು, ಬನೋಥ್ ದೇವುಜಾ ಮತ್ತು ವೆಂಕಟೇಶ ಲಾಜರ್ ಬಂಧಿತ ಆರೋಪಿಗಳು. ಅಬಕಾರಿ ಡಿವೈಎಸ್‌ಪಿ ದೊಡ್ಡಪ್ಪ ಹೆಬಳೆ ಅವರ ನೇತೃತ್ವದಲ್ಲಿ ನಗರದ ಹೊರವಲಯದಲ್ಲಿ ದಾಳಿ ನಡೆಸಿ ಪತ್ತೆ ಹಚ್ಚಲಾಗಿದೆ.

ಪಣಜಿಯಿಂದ ಹೈದರಾಬಾದ್‌ಗೆ ಹೋಗುವ ಖಾಸಗಿ ಬಸ್‌ನಲ್ಲಿ ಚಾಲಕ ಕ್ಯಾಬಿನ್‌ನಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡಲಾಗುತಿತ್ತು. ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದ ಕಲಬುರಗಿ ಉಪ ವಿಭಾಗ ಅಬಕಾರಿ ನಿರೀಕ್ಷಕ ಶಿವಾನಂದ ಪಾಟೀಲ್ ಅವರು ಪ್ರಕರಣವನ್ನು ದಾಖಲಿಸಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಅಬಕಾರಿ ನಿರೀಕ್ಷಕರಾದ ಸಿದ್ರಾಮಪ್ಪ ತಾಳಿಕೋಟಿ, ಸುಭಾಷ ಕೋಟಿ, ಅಬಕಾರಿ ಉಪ ನಿರೀಕ್ಷಕರಾದ ನರೇಂದ್ರ, ಪ್ರವೀಣಕುಮಾರ, ಕಾನ್‌ಸ್ಟೆಬಲ್‌ಗಳಾದ ರವಿಕುಮಾರ, ರಾಜೇಂದ್ರ ಮೋಘಾ, ಶಿವಪ್ಪಗೌಡ, ಅರವಿಂದ್, ರಾಜೇಂದ್ರನಾಥ ದಾಳಿ ನಡೆಸಿದ ತಂಡದಲ್ಲಿದ್ದರು.

ಮದ್ಯ ದರ ಹೆಚ್ಚಳದ ಲಾಭ ಪಡೆಯಲು ಯತ್ನ:

“ಗೋವಾ ಮತ್ತು ಹೈದ್ರಾಬಾದ್ ನಡುವೆ, ಕಲಬುರಗಿ ಮಾರ್ಗವಾಗಿ ಪ್ರತಿನಿತ್ಯ ಹತ್ತಕ್ಕೂ ಹೆಚ್ಚು ಬಸ್​ಗಳು ಓಡಾಡುತ್ತವೆ. ಸ್ಲೀಪರ್, ಓಲ್ವೋ ಬಸ್​ಗಳು ಕೇವಲ ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದು, ಕರೆದುಕೊಂಡು ಬರುವುದು ಮಾತ್ರ ಮಾಡಲ್ಲ. ಬದಲಾಗಿ ಗೋವಾದಿಂದ ಬರುವಾಗ ಮದ್ಯದ ಬಾಟಲ್​ಗಳನ್ನು ಕೂಡಾ ಕದ್ದು ಮುಚ್ಚಿ ತರುವ ಕೆಲಸ ನಡೆಯುತ್ತಿತ್ತು ಎಂಬುದು ತಿಳಿದು ಬಂದಿದೆ.

ಬೆಳಗಾವಿ ಹೊರವಲಯದಲ್ಲಿ ಅಬಕಾರಿ ಚೆಕ್ ಪೋಸ್ಟ್ ಇದ್ದರೂ ಕೂಡಾ ಬಸ್​ ಒಳಗಡೆ, ಸ್ಪೇರ್ ಪಾರ್ಟ್ಸ್ ಇಡುವ ಜಾಗ ಸೇರಿದಂತೆ ಕೆಲವಡೇ ಯಾರಿಗೂ ಗೊತ್ತಾಗದ ಜಾಗದಲ್ಲಿ ಗೋವಾದಿಂದ ಮದ್ಯದ ಬಾಟಟ್​ಗಳು ತರಲಾಗ್ತಿತ್ತು. ಗೋವಾದಲ್ಲಿ ಒಂದು ಬಾಟಲ್ ರಾಯಲ್ ಸ್ಟ್ಯಾಗ್ ವಿಸ್ಕಿ ಬೆಲೆ 330 ರೂಪಾಯಿ ಇದ್ದರೆ, ಕರ್ನಾಟಕದಲ್ಲಿ 1800 ರೂಪಾಯಿಯಿದೆ. ಅನೇಕರು ಗೋವಾಕ್ಕೆ ಹೋಗುವ ಬಸ್​ಗಳ ಸಿಬ್ಬಂದಿ ಜೊತೆ ಸಂಪರ್ಕವನ್ನು ಹೊಂದಿದ್ದು, ಅವರ ಮೂಲಕ ಮದ್ಯದ ಬಾಟಲ್​ಗಳನ್ನು ತರಿಸುತ್ತಿದ್ದರಂತೆ.

ಮೂಲ ಬೆಲೆಯ ಬಾಟಲ್​ಗಳ ಮೇಲೆ ಐನೂರು ಹೆಚ್ಚು ಕೊಟ್ಟು ಇಲ್ಲಿನ ಜನ ಖರೀದಿಸುತ್ತಾರಂತೆ. ಹೀಗಾಗಿ ಬಸ್ ಸಿಬ್ಬಂದಿ, ಗೋವಾದಿಂದ ಬರುವಾಗ ಐದರಿಂದ ಹತ್ತು ಬಾಟಲಲ್​ಗಳನ್ನು ಅಕ್ರಮವಾಗಿ ತಂದು ಮಾರಾಟ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ. ರಾಜ್ಯದ ಬೊಕ್ಕಸಕ್ಕೆ ನಷ್ಟ ಮಾಡಿ, ಗೋವಾ ರಾಜ್ಯದ ಬೊಕ್ಕದ ತುಂಬಿಸುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment