Home ಕ್ರೈಂ ನ್ಯೂಸ್ ಯುರೋಪ್‌ನಲ್ಲಿ ಮುಸ್ಲಿಂ ಜನಸಂಖ್ಯೆ ದ್ವಿಗುಣ: ಕ್ರಿಶ್ಚಿಯನ್ ಧರ್ಮಕ್ಕೆ ಅತಿ ದೊಡ್ಡ ಸವಾಲು ಇಸ್ಲಾಂ ಅಲ್ಲ, ಮತ್ತೇನು? ಪ್ಯೂ ರಿಸರ್ಚ್ ವರದಿಯಲ್ಲಿ ಸ್ಫೋಟಕ ಮಾಹಿತಿ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಯುರೋಪ್‌ನಲ್ಲಿ ಮುಸ್ಲಿಂ ಜನಸಂಖ್ಯೆ ದ್ವಿಗುಣ: ಕ್ರಿಶ್ಚಿಯನ್ ಧರ್ಮಕ್ಕೆ ಅತಿ ದೊಡ್ಡ ಸವಾಲು ಇಸ್ಲಾಂ ಅಲ್ಲ, ಮತ್ತೇನು? ಪ್ಯೂ ರಿಸರ್ಚ್ ವರದಿಯಲ್ಲಿ ಸ್ಫೋಟಕ ಮಾಹಿತಿ!

Share
ಯುರೋಪ್‌
Share

ನವದೆಹಲಿ: ಯುರೋಪ್ ಖಂಡದಲ್ಲಿ ಮುಸ್ಲಿಂ ಜನಸಂಖ್ಯೆಯು 2070ರ ವೇಳೆಗೆ ಪ್ರಸ್ತುತ ಇರುವ ಶೇಕಡಾ 6ರಿಂದ ಶೇಕಡಾ 13ಕ್ಕೆ ಅಂದರೆ ಸುಮಾರು ಎರಡು ಪಟ್ಟು ಹೆಚ್ಚಾಗಲಿದೆ ಎಂದು ವಿಶ್ವಖ್ಯಾತ ಪ್ಯೂ ರಿಸರ್ಚ್ ಸೆಂಟರ್ (Pew Research Center) ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

ಆದರೆ, ಯುರೋಪ್‌ನಲ್ಲಿ ಕ್ರಿಶ್ಚಿಯನ್ ಧರ್ಮ ಎದುರಿಸುತ್ತಿರುವ ಅತಿ ದೊಡ್ಡ ಸವಾಲು ಇಸ್ಲಾಂ ಧರ್ಮದ ಬೆಳವಣಿಗೆಯಲ್ಲ, ಬದಲಿಗೆ ದಿನದಿಂದ ದಿನಕ್ಕೆ ಧರ್ಮವನ್ನು ತೊರೆದು ನಾಸ್ತಿಕರಾಗುತ್ತಿರುವ ಅಥವಾ ಯಾವುದೇ ಧರ್ಮವಿಲ್ಲ ಎಂದು ಗುರುತಿಸಿಕೊಳ್ಳುತ್ತಿರುವ ಯುರೋಪಿಯನ್ ಜನರ ಸಂಖ್ಯೆ ಹೆಚ್ಚಾಗುತ್ತಿರುವುದು ಎಂದು ವರದಿ ಸ್ಪಷ್ಟಪಡಿಸಿದೆ.

ನವೆಂಬರ್ 18 ರಂದು ಪ್ರಕಟವಾದ ‘ಯುರೋಪ್‌ನಲ್ಲಿ ಧರ್ಮದ ಭವಿಷ್ಯ, 2020-2070’ (The Future of Religion in Europe, 2020-2070) ವರದಿಯ ಪ್ರಕಾರ, 2020ರಲ್ಲಿ ಶೇಕಡಾ 67ರಷ್ಟಿದ್ದ ಕ್ರಿಶ್ಚಿಯನ್ ಜನಸಂಖ್ಯೆಯು 2070ರ ವೇಳೆಗೆ ಶೇಕಡಾ 52ಕ್ಕೆ ಕುಸಿಯುವ ಸಾಧ್ಯತೆಯಿದೆ. ಅದೇ ಸಮಯದಲ್ಲಿ, ನಾಸ್ತಿಕರು, ಅಜ್ಞೇಯತಾವಾದಿಗಳು ಮತ್ತು ಯಾವುದೇ ಧರ್ಮವಿಲ್ಲದವರನ್ನೊಳಗೊಂಡ ಧರ್ಮಾತೀತ ಅಥವಾ ಅನಾಮಧೇಯ ಗುಂಪಿನ ಜನಸಂಖ್ಯೆಯು ಶೇಕಡಾ 25ರಿಂದ ಶೇಕಡಾ 33ಕ್ಕೆ ಏರಿಕೆಯಾಗಲಿದೆ. ಇದರರ್ಥ ಮುಸ್ಲಿಮರ ಸಂಖ್ಯೆ ಹೆಚ್ಚಾದರೂ ಕೂಡ, ಯಾವುದೇ ಧರ್ಮವಿಲ್ಲದ ಜನರು ಯುರೋಪ್‌ನ ಎರಡನೇ ಅತಿ ದೊಡ್ಡ ಜನಸಂಖ್ಯೆಯ ವರ್ಗವಾಗಿ ಮುಂದುವರಿಯಲಿದ್ದಾರೆ ಮತ್ತು ಇಸ್ಲಾಂ ಮೂರನೇ ಸ್ಥಾನದಲ್ಲಿರಲಿದೆ.

ಧರ್ಮ ತ್ಯಾಗ ಮತ್ತು ಜನಸಂಖ್ಯೆಯ ಇಳಿಕೆ: ಯುರೋಪ್‌ನಲ್ಲಿ 2020 ರಿಂದ 2070ರ ನಡುವೆ ಸುಮಾರು 35 ಮಿಲಿಯನ್ ಕ್ರಿಶ್ಚಿಯನ್ನರು ಧರ್ಮ ಬದಲಾವಣೆ ಅಥವಾ ಧರ್ಮ ತ್ಯಾಗ ಮಾಡಲಿದ್ದು, ಇವರಲ್ಲಿ ಹೆಚ್ಚಿನವರು ಯಾವುದೇ ಧರ್ಮವಿಲ್ಲದವರ ಗುಂಪಿಗೆ ಸೇರಲಿದ್ದಾರೆ. ವಯಸ್ಸಾದ ಜನಸಂಖ್ಯೆ ಮತ್ತು ಕಡಿಮೆ ಜನನ ಪ್ರಮಾಣದಿಂದಾಗಿ ಕ್ರಿಶ್ಚಿಯನ್ ಸಮುದಾಯವು ಸುಮಾರು 160 ಮಿಲಿಯನ್ ಜನರನ್ನು ಸ್ವಾಭಾವಿಕ ಸಾವುಗಳ ಮೂಲಕ ಕಳೆದುಕೊಳ್ಳಲಿದೆ.

ಪಾಶ್ಚಾತ್ಯ ಯುರೋಪ್‌ನಲ್ಲಿ ಗಮನಾರ್ಹ ಬದಲಾವಣೆ: ಯುನೈಟೆಡ್ ಕಿಂಗ್‌ಡಮ್ (UK) ಮತ್ತು ಫ್ರಾನ್ಸ್ ದೇಶಗಳಲ್ಲಿ 2070ರ ವೇಳೆಗೆ ಜನಸಂಖ್ಯೆಯು ಶೇಕಡಾ 52ರಿಂದ 53ರಷ್ಟು ಭಾಗವು ಧರ್ಮವಿಲ್ಲದವರ (Non-religious) ಅಥವಾ ನಾಸ್ತಿಕರ ಕೈ ಸೇರಲಿದೆ ಹಾಗೂ ಈ ದೇಶಗಳಲ್ಲಿ ಕ್ರಿಶ್ಚಿಯನ್ನರ ಜನಸಂಖ್ಯೆ ಶೇಕಡಾ 25ಕ್ಕೆ ಇಳಿಯಲಿದೆ.

ಜನನ ಪ್ರಮಾಣ ಹಾಗೂ ಮುಸ್ಲಿಂ ಜನಸಂಖ್ಯೆ ವೃದ್ಧಿ: ಯುರೋಪ್‌ನಲ್ಲಿ ಮುಸ್ಲಿಂ ಮಹಿಳೆಯರ ಸರಾಸರಿ ಮಕ್ಕಳ ಜನನ ಪ್ರಮಾಣ 1.9ರಷ್ಟಿದ್ದರೆ, ಕ್ರಿಶ್ಚಿಯನ್ ಮಹಿಳೆಯರಿಗೆ ಇದು 1.4 ಮತ್ತು ಧರ್ಮವಿಲ್ಲದ ಮಹಿಳೆಯರಿಗೆ 1.3ರಷ್ಟಿದೆ. ವಲಸೆ, ಯುವ ಜನಸಂಖ್ಯೆ ಹಾಗೂ ತುಸು ಹೆಚ್ಚಿನ ಜನನ ಪ್ರಮಾಣದಿಂದಾಗಿ ಯುರೋಪ್‌ನ ಮುಸ್ಲಿಂ ಜನಸಂಖ್ಯೆಯು 2020ರಲ್ಲಿದ್ದ 46 ಮಿಲಿಯನ್‌Sನಿಂದ 2020ರ ವೇಳೆಗೆ 80 ಮಿಲಿಯನ್‌ಗೆ ಏರಿಕೆಯಾಗಲಿದೆ.

ಈ ಬೆಳವಣಿಗೆಯು ಯುರೋಪ್‌ನಲ್ಲಿ ಕ್ರಿಶ್ಚಿಯನ್ ಸಂಸ್ಥೆಗಳು ಮತ್ತು ಧಾರ್ಮಿಕ ನಾಯಕರಲ್ಲಿ ತೀವ್ರ ಕಳವಳ ಮೂಡಿಸಿದ್ದು, ಕ್ರಿಶ್ಚಿಯನ್ ವಿರೋಧಿ ದೇಶಗಳಲ್ಲಿ ದೌರ್ಜನ್ಯ ಮತ್ತು ಧಾರ್ಮಿಕ ತಾರತಮ್ಯದ ವಿರುದ್ಧ ಕಠಿಣ ರಕ್ಷಣೆ ಹಾಗೂ ಕಾನೂನು ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.

Share
Related Articles