SUDDIKSHANA KANNADA NEWS/ DAVANAGERE/ DATE:17-04-2025
ಶಿವಮೊಗ್ಗ: ಕೃಷಿಕರ ಮಕ್ಕಳಿಗಾಗಿ ಮೀಸಲಿರುವ ಕೃಷಿ ಪದವಿ ಸೀಟುಗಳಿಗಾಗಿ ಪ್ರವೇಶ ಪರೀಕ್ಷೆಯ ದಿನಾಂಕಗಳನ್ನು ಮುಂದೂಡಲಾಗಿದ್ದು, ಸಿ.ಇ.ಟಿಯ ನೇತೃತ್ವದಲ್ಲಿ ನಡೆಸಲಾಗುವ ಈ ಪ್ರಾಯೋಗಿಕ ಪರೀಕ್ಷೆ ಎಲ್ಲಾ ಕೃಷಿ ವಿಜ್ಞಾನಗಳಿಗೆ ಹಾಗೂ ಪಶು ವೈದ್ಯಕೀಯ ವಿಜ್ಞಾನಗಳಿಗೆ ಪ್ರವೇಶ ಪ್ರಕ್ರಿಯೆಗಾಗಿ ನಡೆಯಲಿದೆ.
ಕೃಷಿಕರ ಕೋಟಾದಲ್ಲಿ ಈಗಗಾಲೇ ಸಿ.ಇ.ಟಿ. ಅರ್ಜಿಯಲ್ಲಿ ಆಯ್ಕೆ ನೀಡಿದವರಿಗೆ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪಲೋಡ್ ಮಾಡುವ ದಿನಾಂಕವನ್ನು ಏ.21 ರ ಮಧ್ಯರಾತ್ರಿ 12 ಗಂಟೆಗೆ ಮುಂದೂಡಲಾಗಿದೆ.
ಅಭ್ಯರ್ಥಿಗಳು ಮೂಲ ದಾಖಲಾತಿಗಳನ್ನು ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಬಹುದು. ಏ.21 ರ ಮಧ್ಯರಾತ್ರಿ 12.00 ಗಂಟೆವರೆಗೆ. ಆನ್‌ಲೈನ್ ನಲ್ಲಿ ದಾಖಲಾತಿಗಳ ಪರಿಶೀಲನೆ ಮತ್ತು ಪರೀಕ್ಷೆಗೆ ಅರ್ಹ/
ಅರ್ಹರಲ್ಲದ ಅಭ್ಯರ್ಥಿಗಳ ಪಟ್ಟಿಯ ಸಿದ್ಧತೆ – ಆಯಾ ಕೇಂದ್ರಗಳಲ್ಲಿ ನಿಯೋಜಿಸಿದ ಸಮಿತಿ ಸದಸ್ಯರಿಂದ (ಆಯಾ ವಿಶ್ವವಿದ್ಯಾನಿಲಯಗಳು ನಿಯೋಜಿಸಿದ) ಏ. 23ರ ಸಂಜೆ 5 ಗಂಟೆವರೆಗೆ. ಕೃಷಿ ಕೋಟಾದಡಿ ಅರ್ಹ /
ಅರ್ಹರಲ್ಲದ ಅಭ್ಯರ್ಥಿಗಳ ಪಟ್ಟಿಯನ್ನು ಎಲ್ಲಾ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳು ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣದಲ್ಲಿ ಏ.25 ರ ಸಂಜೆ 4 ಗಂಟೆಯ
ನಂತರ ಪ್ರಕಟಿಸಲಾಗುವುದು.
ಅನರ್ಹ ಅಭ್ಯರ್ಥಿಗಳಿಗೆ ಮಾತ್ರ ದಾಖಲೆಗಳ ಬಗ್ಗೆ ಸೃಷ್ಠೀಕರಣ ಮತ್ತು ಸಂಬಂಧಿತ ಕೇಂದ್ರಗಳಲ್ಲಿ ಖುದ್ದಾಗಿ ದಾಖಲೆಗಳನ್ನು ಸಲ್ಲಿಸಲು ಕಾಲಾವಕಾಶ ಏ. 26 ರಿಂದ ಏ. 27 ರ ಸಂಜೆ 4ಗಂಟೆಯವರೆಗೆ. ಪ್ರಾಯೋಗಿಕ
ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯದ ಎಲ್ಲಾ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳಲ್ಲಿ ಏ. 28 ರಂದು ಮಧ್ಯಾಹ್ನ 1 ಗಂಟೆಯ ನಂತರ ಪ್ರಕಟಿಸಲಾಗುವುದು.
ಅರ್ಹ ಅಭ್ಯರ್ಥಿಗಳಿಗೆ ಪ್ರವೇಶ ಪತ್ರವನ್ನು (Hall ticket) ಡೌನ್‌ಲೋಡ್ ಮಾಡಿಕೊಳ್ಳುವ ದಿನಾಂಕ ಮೇ.1 ರಿಂದ ಮೇ.5 ರಂದು ಸಂಜೆ 4 ರಿಂದ 12ಗಂಟೆಯವರೆಗೆ. ಪ್ರಾಯೋಗಿಕ ಪರೀಕ್ಷೆಯನ್ನು ರಾಜ್ಯದ ಎಲ್ಲಾ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳ 17 ಕೇಂದ್ರಗಳಲ್ಲಿ ಏಕಕಾಲಕ್ಕೆ ಮೇ.9 ರಂದು ಬೆಳಗ್ಗೆ 9 ಗಂಟೆಯಿಂದ ಪ್ರಾರಂಭಿಸಲಾಗುವುದು. ತಡವಾಗಿ ಬರುವ ಅಭ್ಯರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ.
ರಾಜ್ಯದ ಎಲ್ಲಾ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳಲ್ಲಿ ಮೇ 12 ರಂದು ಸಂಜೆ 6 ಗಂಟೆಯ ನಂತರ ಪ್ರಾಯೋಗಿಕ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲಾಗುವುದು. ಸಂಬಂಧಿತ ಪ್ರಾಯೋಗಿಕ ಪರೀಕ್ಷಾ
ಕೇಂದ್ರಗಳಲ್ಲಿ ಫಲಿತಾಂಶಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಂದ ಆಕ್ಷೇಪ / ಮನವಿಗಳೇನಾದರೂ ಇದ್ದಲ್ಲಿ ಮೇ. 13 ರ ಸಂಜೆ 4 ಗಂಟೆಯ ಒಳಗೆ ಸಲ್ಲಿಸಬಹುದು. ಪ್ರಾಯೋಗಿಕ ಪರೀಕ್ಷೆಯ ಅಂತಿಮ ಫಲಿತಾಂಶವನ್ನು
ರಾಜ್ಯದ ಎಲ್ಲಾ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣದಲ್ಲಿ ಮೇ. 15 ರಂದು ಮಧ್ಯಾಹ್ನ 12 ಗಂಟೆಯ ನಂತರ ಪ್ರಕಟಿಸಲಾಗುವುದು ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿದ್ಯಾರ್ಥಿಗಳು ಬದಲಾದ ದಿನಾಂಕಗಳನ್ನು ತಿಳಿಯಲು ಹಾಗೂ ಹೆಚ್ಚಿನ ಮಾಹಿತಿಗಾಗಿ www.uasbangalore.edu.in, www.uasd.edu.in/www.uasd.edu, www.uhsbagalkot.edu.in /uhsbagalkot.karnataka.gov.in, www.uahs.edu.in, www.uasraichur.edu.in/raichur.karnataka.gov.in, www.kvafsu.edu.in, http//kea.kar.nic.in, http//pgadmission.kar.nic.in/ugcet/UG_Home.aspx www.kvafsu.edu.in. ಅಂತರ್ಜಾಲ ತಾಣಗಳಿಗೆ ಭೇಟಿ ನೀಡಬಹುದಾಗಿದೆ.