SUDDIKSHANA KANNADA NEWS/ DAVANAGERE/ DATE:03-04-2025
ದಾವಣಗೆರೆ: ಹೊಸದಾಗಿ ನೋಂದಣಿಯಾದ ಕಾರ್ಮಿಕರ ಕ್ಷೇಮಾಭಿವೃದ್ದಿ ಸಹಕಾರ ಸಂಘ ನಿ. ದಾವಣಗೆರೆ ಇದರ ಪ್ರಥಮ ಆಡಳಿತ ಮಂಡಳಿಗೆ ಚುನಾವಣೆಯನ್ನು ಏಪ್ರಿಲ್ 19 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ 12, ಪಿ.ಬಿ.ರಸ್ತೆ ದಾವಣಗೆರೆ ಇಲ್ಲಿ ಚುನಾವಣೆ ನಡೆಸಲಾಗುವುದು.
ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಪ್ರಕಾರ ಹಾಗೂ ಸಂಘದ ಬೈಲಾ ಅಧ್ಯಾಯ ಸಂ:7 ಇದ್ದು, ಕ್ರ.ಸಂ-59 ರ ರೀತ್ಯಾ ಸಂಘದ ಒಟ್ಟು ಆಡಳಿತ ಮಂಡಳಿ ಸದಸ್ಯರ ಸಂಖ್ಯೆ-17 ಇದ್ದು, ಈ ಪೈಕಿ ಚುನಾವಣೆ ಮೂಲಕ ಚುನಾಯಿಸಬೇಕಾದ ನಿರ್ದೇಶಕರ ಸಂಖ್ಯೆ ಒಟ್ಟು-8 ಸ್ಥಾನಗಳಿಗೆ ಚುನಾವಣೆ ನಡೆಸಲಾಗುವುದು.
8 ಸ್ಥಾನಗಳ ಕ್ಷೇತ್ರ ವಿಂಗಡಣೆ ಹಾಗೂ ಮೀಸಲಾತಿ ವಿವರ: ಸಾಮಾನ್ಯ-2, ಪರಿಶಿಷ್ಟ ಜಾತಿ-1, ಪರಿಶಿಷ್ಟ ಪಂಗಡ-1, ಹಿಂದುಳಿದ ವರ್ಗ ಎ-2 ಹಾಗೂ ಮಹಿಳಾ ಮೀಸಲು-2 ಸ್ಥಾನಗಳಿಗೆ ಚುನಾವಣೆ ನಡೆಸಲಾಗುವುದು.
ಚುನಾವಣಾ ವೇಳಾಪಟ್ಟಿ: ಏ.4 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸ್ವೀಕರಿಸಲಾಗುವುದು.
ಏ.11 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಏ.12 ನಾಮಪತ್ರಗಳ ಪರಿಶೀಲನೆ ನಂತರ ಚುನಾವಣಾಧಿಕಾರಿಗಳಿಂದ ಕ್ರಮ ಬದ್ದವಾಗಿ ನಾಮನಿರ್ದೇಶನಗೊಂಡ ಅಭ್ಯರ್ಥಿಗಳ ಪಟ್ಟಿ ಪ್ರಕಟ. ಏ.13 ರಂದು ನಾಮಪತ್ರ ವಾಪಸ್ಸು ಪಡೆಯುವ ದಿನ.
ನಂತರ ಸ್ಪರ್ಧೆಯಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಹಾಗೂ ಚುನಾವಣಾಧಿಕಾರಿಗಳಿಂದ ಅಭ್ಯರ್ಥಿಗಳಿಗೆ ಚುನಾವಣಾ ಚಿಹ್ನೆಗಳನ್ನು ಹಂಚಿಕೆ ಮಾಡಲಾಗುವುದು. ಏ.14 ರಂದು ಸೂಚನಾ ಫಲಕದಲ್ಲಿ ಚಿಹ್ನೆಗಳ ಸಮೇತ ಮಾದರಿ ಮತ ಪತ್ರದ ಹಂಚಿಕೆ. ಏ.19 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಸಲಾಗುವುದು. ನಂತರ ಅದೇ ದಿನ ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಿಸಲಾಗುವುದೆಂದು ಕಾರ್ಮಿಕರ ಕ್ಷೇಮಾಭಿವೃದ್ದಿ ಸಹಕಾರ ಸಂಘ ನಿ, ರಿಟರ್ನಿಂಗ್ ಅಧಿಕಾರಿ ಸತೀಶ್ ನಾಯ್ಕ.ಎಲ್ ತಿಳಿಸಿದ್ದಾರೆ.