SUDDIKSHANA KANNADA NEWS/ DAVANAGERE/ DATE:24-10-2024
ದಾವಣಗೆರೆ: ನವೆಂಬರ್ ತಿಂಗಳಿನಿಂದ ವಾರ್ಡ್ ವಾರು ಇ- ಆಸ್ತಿ ಆಂದೋಲನ ಪ್ರಾರಂಭ ಮಾಡಲು ನಿರ್ಧರಿಸಲಾಗಿದೆ.
ಎಲ್ಲಾ ಆಸ್ತಿ ಮಾಲೀಕರು ಆಸ್ತಿ ತೆರಿಗೆ ಪಾವಿತಿಸಿದ ಚಲನ್, ಇ. ಸಿ., ಮನೆಗೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
ಪಾಲಿಕೆಯಿಂದ ಆಂದೋಲನದ ವೇಳಾಪಟ್ಟಿಯನ್ನು ಸದ್ಯದಲ್ಲಿಯೇ ಪ್ರಕಟಿಸಲಾಗುವುದು. ನಂತರ ನಿಗದಿತ ದಿನಾಂಕಗಳಂದು ಆಯಾ ವಾರ್ಡ್ ಗಳಲ್ಲಿ ಇ- ಸ್ವತ್ತು ನೀಡಲಾಗುವುದು ಎಂದು ಮಹಾನಗರ ಪಾಲಿಕೆಯ ಮೇಯರ್ ಕೆ. ಚಮನ್ ಸಾಬ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಂದಾಯವನ್ನು ಸರಿಯಾದ ಸಮಯದಲ್ಲಿಯೇ ಪಾವತಿಸಬೇಕು. ಡಿಜಿಟಲ್ ಸರ್ವೆ ನಡೆಸಲಾಗುವುದು. ಹೆಚ್ಚು ಕಡಿಮೆ ಕಂದಾಯ ಪಾವತಿಸಿದ್ದರೆ ದಂಡ ಸಮೇತ ವಸೂಲಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.