SUDDIKSHANA KANNADA NEWS/ DAVANAGERE/ DATE:12-02-2024
ದಾವಣಗೆರೆ: ಮಹಾನಗರ ಪಾಲಿಕೆಯ ಎಲ್ಲಾ ವಾರ್ಡ್ ಗಳಲ್ಲಿನ ಇ- ಆಸ್ತಿ ಖಾತಾ ಆಂದೋಲನ ಮತ್ತು ಆಸ್ತಿ ತೆರಿಗೆ ವಸೂಲಿ ಕಾರ್ಯಕ್ರಮವನ್ನು ಫೆಬ್ರವರಿ 13ರಿಂದ 15ರವರೆಗೆ ಏರ್ಪಡಿಸಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸ್ಥಿರಾಸ್ತಿಗಳನ್ನು ಇ- ಆಸ್ತಿ ತಂತ್ರಾಶಕ್ಕೆ ಒಳಪಡಿಸಿ ಇ- ಖಾತೆಗಳನ್ನು ವಿತರಿಸಲು ದಾವಣಗೆರೆ ಮಹಾನಗರ ಪಾಲಿಕೆಯ ವತಿಯಿಂದ ಇ- ಆಸ್ತಿ ಖಾತಾ ಆಂದೋಲನ, ಬಾಕಿಯಿರುವ ಆಸ್ತಿ ತೆರಿಗೆ, ನೀರು ಹಾಗೂ ಒಳಚರಂಡಿ ಶುಲ್ಕ ವಸೂಲಾತಿ ನಡೆಯಲಿದೆ. ನಗರದ ಸ್ಥಿರಾಸ್ತಿಗಳ ಮಾಲೀಕರು ಈ ಸುವರ್ಣಾವಕಾಶ ಸದುಪಯೋಗಪಡಿಸಿಕೊಂಡು ತಮ್ಮ ವಾರ್ಡ್ ವ್ಯಾಪ್ತಿಯ ವಲಯ ಕಚೇರಿ ಅಥವಾ ತಮ್ಮ ವಾರ್ಡ್ ನಲ್ಲಿ ನಿಗದಿಪಡಿಸಿದ ಇ- ಆಸ್ತಿ ಆಂದೋಲನ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ದಾಖಲಾತಿಗಳನ್ನು ಸಲ್ಲಿಸಿ ನೇರವಾಗಿ ತಮ್ಮ ಮನೆ ಬಾಗಿಲಿಗೆ ತಮ್ಮ ಆಸ್ತಿಗಳ ಇ- ಖಾತೆಯನ್ನು ಪಡೆದುಕೊಳ್ಳಬಹುದಾಗಿದೆ.
ಸಾರ್ವಜನಿಕರು ಇ- ಆಸ್ತಿ ಖಾತೆಗಳನ್ನು ಪಡೆಯಲು ಈ ದಾಖಲಾತಿಗಳನ್ನು ನೀಡಬೇಕು.
ಅರ್ಜಿ
- ಅರ್ಜಿದಾರರ ಪಾಸ್ ಪೋರ್ಟ್ ಅಳತೆ ಭಾವಚಿತ್ರ ಮತ್ತು ನಿವೇಶನಯ ಮನೆಯ ಜಿಪಿಎಸ್ ಭಾವಚಿತ್ರ
- ನೋಂದಣಿ ಕ್ರಯಪತ್ರ
- ಇಸಿ 2023-24ನೇ ಸಾಲಿನಿಂದ ಈ ದಿನವರೆಗೆ ಪಾವತಿಸಿರುವ ಆಸ್ತಿ ತೆರಿಗೆ ಮತ್ತು ನೀರು ಮತ್ತು ಒಳಚರಂಡಿ ಶುಲ್ಕದ ಚಲನ್ ಗಳು
- ಭೂ ಪರಿವರ್ತನೆ ಆದೇಶ (ಇಲ್ಲದಿದ್ದಲ್ಲಿ ಪಹಣಿ)
- ಅನುಮೋದಿತ ಬಡಾವಣೆ ನಕ್ಷೆ ಮತ್ತು ಪರವಾನಗಿ
- ಕಟ್ಟಡದ ಅನುಮೋದಿತ ನಕ್ಷೆ ಮತ್ತು ಪರವಾನಗಿ
- ವಿದ್ಯುತ್ ಬಿಲ್ ಆರ್. ಆರ್. ನಂಬರ್
ಹೆಚ್ಚಿನ ಮಾಹಿತಿಗೆ ಈ ಕೆಳಕಂಡ ಮಹಾನಗರ ಪಾಲಿಕೆಯ ವಲಯ ಕಚೇರಿಗಳ ಆಯುಕ್ತರನ್ನು ಅಥವಾ ವಾರ್ಡ್ ನ ಕಂದಾಯ ಶಾಖೆಯ ಸಿಬ್ಬಂದಿ ಸಂಪರ್ಕಿಸುವಂತೆ ಕೋರಲಾಗಿದೆ.
ವಲಯ ಕಚೇರಿ- 01 ಎಸ್ ಎಂ ಕೃಷ್ಣ ನಗರ ದಾವಣಗೆರೆ – ಆಯುಕ್ತರಾದ ಸವಿತಾ ಎಂ. ಜಿ. ಮೊಬೈಲ್ – 98808-09146
ವಲಯ ಕಚೇರಿ – 02 ಹದಡಿ ರಸ್ತೆ, ಟಿವಿ ಸ್ಟೇಷನ್ ಹತ್ತಿರ, ದಾವಣಗೆರೆ: ಆಯುಕ್ತರಾದ ನಾಸೀರ್ ಬಾಷಾ ಮೊಬೈಲ್ – 94485-65904
ವಲಯ ಕಚೇರಿ-03 ಆಶ್ರಯ ಆಸ್ಪತ್ರೆಯ ಪಕ್ಕ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ: ಆಯುಕ್ತರಾದ ಕೆ. ನಾಗರಾಜ್ ಮೊಬೈಲ್ – 94826-86755