SUDDIKSHANA KANNADA NEWS/ DAVANAGERE/ DATE:19-02-2025
ದಾವಣಗೆರೆ: ಫೆಬ್ರವರಿ 19 ರಿಂದ ಮೇ 10 ರವರೆಗೆ ಮಹಾನಗರ ಪಾಲಿಕೆಯ ವಲಯ ಕಚೇರಿಯಲ್ಲಿ ಇ-ಖಾತಾ ಅಭಿಯಾನವನ್ನು ಆಯೋಜಿಸಲಾಗಿದೆ.
ನಗರದಲ್ಲಿನ ನಿವೇಶನಗಳು, ಕಟ್ಟಡಗಳು ಭೂಪರಿವರ್ತನೆಯಾಗದೆ ಉಪವಿಭಜನೆ ಮಾಡಿ ಮಾರಾಟ ಮಾಡಿರುವ ನಿವೇಶನ, ಕಟ್ಟಡಗಳಿಗೆ 24 ಸೆಪ್ಟೆಂಬರ್ 2024 ರ ಒಳಗೆ ನೋಂದಣೆಯಾಗಿರುವ ಆಸ್ತಿಗಳಿಗೆ ಇ-ಆಸ್ತಿ ತಂತ್ರಾಂಶದಿಂದ 2ಎ ನಮೂನೆ ಸೃಜಿಸಿ ನೀಡಲಾಗುವುದು.