SUDDIKSHANA KANNADA NEWS/ DAVANAGERE/ DATE:20-02-2025
ದಾವಣಗೆರೆ: ಇ- ಆಸ್ತಿ ಅಭಿಯಾನ ಆಯೋಜಿಸಲಾಗಿದೆ.
ಪುರಸಭೆ ವ್ಯಾಪ್ತಿಯೊಳಗೆ ಬರುವ ಸರ್ಕಾರಿ, ಅರೆ ಸರ್ಕಾರಿ, ಸ್ಥಳೀಯ ಸಂಸ್ಥೆಗಳ ಒಡೆತನದಲ್ಲಿರುವ ಆಸ್ತಿಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ರೀತಿಯ ಕಟ್ಟಡಗಳ, ನಿವೇಶನಗಳ ಮಾಲೀಕರು ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕು.
ಯಾವೆಲ್ಲಾ ದಾಖಲೆಗಳು ಬೇಕು?
– ಎಲ್ಲಾ ನೊಂದಾಯಿತ ಪತ್ರಗಳು
– ಆಸ್ತಿಯ ಛಾಯಾಚಿತ್ರ
– ಮಾಲೀಕರ ಭಾವಚಿತ್ರ
– ಮಾಲೀಕರ ಚುನಾವಣಾ ಗುರುತಿನ ಚೀಟಿ
– ಪಾನ್ಕಾರ್ಡ್
– ರೇಷನ್ ಕಾರ್ಡ್ ನಮೂನೆ-15(ಇಸಿ)
– ಕೆಇಬಿ ಬಿಲ್
– ನೀರಿನ ಬಿಲ್
– ಕಟ್ಟಡ ಪರವಾನಿಗೆ
-ಅನುಮೋದಿತ ನಕ್ಷೆ ನಕಲು ಪ್ರತಿ
– ಏಕ ನಿವೇಶನ
– ಬಹು ನಿವೇಶನ ತಾಂತ್ರಿಕ ಅನುಮೋದನೆ ನಕ್ಷೆ
– ಕಂದಾಯ ಪಾವತಿಸಿದ ರಶೀದಿ ಹಾಗೂ ಅವಶ್ಯಕತೆ ಇರುವ ಇತರೆ
ದಾಖಲೆಗಳನ್ನು ಹಾಜರಿಪಡಿಸಿ ನಿಮ್ಮ ಆಸ್ತಿಯನ್ನು ಗಣಕೀಕರಿಸಿಕೊಂಡು ನಮೂನೆ-3 ಮತ್ತು ನಮೂನೆ-3ಎ ರನ್ನು ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿhttps://eaasthi.kanajakarnatakasmartcity.in/kmf24 ವೆಬ್ಸೈಟ್ ಅಥವಾ ಪುರಸಭೆ ಮುಖ್ಯಾಧಿಕಾರಿಗಳು, ಕಂದಾಯ ಅಧಿಕಾರಿ, ಕಂದಾಯ ಶಾಖೆ ಸಿಬ್ಬಂದಿಯನ್ನು ಸಂಪರ್ಕಿಸಬೇಕೆಂದು ಎಂದು ಹೆಚ್.ಎನ್.ಭಜಕ್ಕನವರು ತಿಳಿಸಿದರು.