ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

75 ಲಕ್ಷ ರೂ. ಮೌಲ್ಯದ ಮದ್ಯ ವಶ: ಚಾಲಕ, ಮಾಲೀಕ ಬಂಧನ, ಬಿಡುಗಡೆ

On: April 18, 2023 2:12 PM
Follow Us:
---Advertisement---

SUDDIKSHANA KANNADA NEWS| DAVANAGERE| DATE:18-04-2023

ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ರಾಷ್ರ್ಟೀಯ ಹೆದ್ದಾರಿ 13ರ ಮಾದಾಪುರ ಚೆಕ್ ಪೋಸ್ಟ್ ನಲ್ಲಿ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಬರೋಬ್ಬರಿ 75 ಲಕ್ಷದ 66 ಸಾವಿರ ರೂಪಾಯಿ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಬೆಳಗಾವಿಯ ಅಬಕಾರಿ ಅಪರ ಆಯುಕ್ತರು ಹಾಗೂ ಹೊಸಪೇಟೆ ಅಬಕಾರಿ ಜಂಟಿ ಆಯುಕ್ತ ನಿರ್ದೇಶನದಂತೆ ದಾವಣಗೆರೆ ಜಿಲ್ಲಾ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಅಬಕಾರಿ ಹೊನ್ನಾಳಿ ಉಪವಿಭಾಗದ ಉಪ ಅಧೀಕ್ಷಕರ ನೇತೃತ್ವದಲ್ಲಿ ಸಿಬ್ಬಂದಿ ಜೊತೆ ಪರಿಶೀಲನೆ ನಡೆಸಿದಾಗ ಪತ್ತೆಯಾಗಿದೆ.

ಚಿತ್ರದುರ್ಗ-ಚನ್ನಗಿರಿ ಮಾರ್ಗವಾಗಿ ವಾಹನ ಸಂಖ್ಯೆ: KA 06AB 6408 TATA 1212 ಲಾರಿ  ಗೂಡ್ಸ್ ವಾಹನವನ್ನು ತಡೆದು ಪರಿಶೀಲಿಸಿದಾಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮಾರೋಹಳ್ಳಿ ಮೆ. ಪರ್ನಾಡ್ ರಿಕಾರ್ಡ್ ಇಂಡಿಯಾ ಪ್ರೈ. ಲಿ (ಲೆಸ್ಸಿ ಆಫ್ ಯುನಿವರ್ಸಲ್ ಬಾಟ್ಲರ್ ಪ್ರೈ. ಲಿ. ನಿಂದ ಬಂದ ಲಾರಿ ಇದಾಗಿದೆ.

SEAGRAM’S BLENDERS  PRIDE RARE PREMIUM WIHISKY 375ML (0091) 03 ಬಾಕ್ಸ್ ಗಳು, 2) SEAGRAM’S 100 PIPERS DELUXE BLENDED SCOTCH WHISKY 375 ML (0091) 10 ಬಾಕ್ಸ್ ಗಳು 3) SEAGRAM’S 100 PIPERS DELUXE BLENDED SCOTCH WHISKY 60 ML X 150 BTLS (0091) 15 ಬಾಕ್ಸ್ ಗಳು 4) SEAGRAM’S BLENDERS  PRIDE RARE PREMIUM WIHISKY 360 ML X 150 BTLS  (0091) 15ಬಾಕ್ಸ್ ಗಳು 5) SEAGRAM’S 100 PIPERS DELUXE BLENDED SCOTCH WHISKY 750 ML (0091) 20 ಬಾಕ್ಸ್ ಗಳು 6) SEAGRAM’S ROYAL STAG DELUXE WHISKY 60 ML X 150 BTLS (0091) 20 ಬಾಕ್ಸ್ ಗಳು 7) SEAGRAM’S BLENDERS  PRIDE RARE PREMIUM WIHISKY 750 ML  (0091)  25 ಬಾಕ್ಸ್ ಗಳು 8) SEAGRAM’S ROYAL STAG DELUXE WHISKY 375 ML (0091) 25 ಬಾಕ್ಸ್ ಗಳು 9) SEAGRAM’S ROYAL STAG DELUXE WHISKY 750 ML (0091) 25 ಬಾಕ್ಸ್ ಗಳು 10) SEAGRAM’S BLENDERS  PRIDE RARE PREMIUM WIHISKY 180 ML  (0091) 30 ಬಾಕ್ಸ್ ಗಳು 11) SEAGRAM’S ROYAL STAG DELUXE WHISKY 180 ML (0091) 50 ಬಾಕ್ಸ್ ಗಳು 12) SEAGRAM’S IMPERIAL BLUE SUPERIER GRAIN WHISKY 750 ML (0091) 75 ಬಾಕ್ಸ್ ಗಳು 13) SEAGRAM’S IMPERIAL BLUE SUPERIER GRAIN WHISKY 90  ML X 96 BTLS  (0091) 87 ಬಾಕ್ಸ್ ಗಳು 14) SEAGRAM’S IMPERIAL BLUE SUPERIER GRAIN WHISKY 180 ML (0091) 150 ಸೇರಿದಂತೆ ಒಟ್ಟು 4835 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ.

ತುಮಕೂರು-ತಿಪಟೂರು – ಅರಸೀಕೆರೆ ಮಾರ್ಗವಾಗಿ ಕೆ ಎಸ್ ಬಿ ಸಿ ಎಲ್ ಶಿವಮೊಗ್ಗ ಕ್ಕೆ ಸಾಗಾಟ ಮಾಡಬೇಕಾಗಿತ್ತು. ಆದರೆ ಈ ವಾಹನವು ಶಿರಾ-ಚಿತ್ರದುರ್ಗ- ಚನ್ನಗಿರಿ ಮಾರ್ಗವಾಗಿ ಹೋಗುವಾಗ ಚನ್ನಗಿರಿ ತಾಲ್ಲೂಕಿನ ಮಾದಾಪುರ ಚೆಕ್ ಪೋಸ್ಟ್ ನ ಮೂಲಕ ಹಾದುಹೋಗುವಾಗ ವಾಹನದ ಪರವಾನಗಿ ಪತ್ರವನ್ನು ಪರಿಶೀಲಿಸಿದಾಗ, ನಿಯಮಬಾಹಿರವಾಗಿ ಸಾಗಾಟ ಮಾಡುತ್ತಿದ್ದದ್ದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮದ್ಯ ಹಾಗೂ ವಾಹನ ಜಫ್ತಿ ಮಾಡಲಾಗಿದೆ.

ವಾಹನ ಚಾಲಕ ಧನಂಜಯ್ ಬಿನ್ ಗುರನಾಥಪ್ಪ ಹಾಗೂ ವಾಹನದ ಮಾಲೀಕ ರವಿ ಅವರನ್ನು ಬಂಧಿಸಿ, ಜಾಮೀನಿನ ಮೇರೆಗೆ ಬಿಡುಗಡೆ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.ಒಟ್ಟು ಮದ್ಯದ ಮೌಲ್ಯ ರೂ. 75,66,793 ಆಗಿದ್ದರೆ, ವಾಹನದ ಮೌಲ್ಯ ರೂ. 22,00,000 ಆಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment