Home ದಾವಣಗೆರೆ “ಬಾಯ್ ಹರುಕ ಶಾಸಕ ಬಿಪಿ ಹರೀಶ್, ಬಾಯ್ ಬಡುಕ ಯಶವಂತರಾವ್ ಜಾಧವ್, ಇಲಿ ಬುಡುಕ ಹಾಲೇಶ್”:ದಿನೇಶ್ ಕೆ. ಶೆಟ್ಟಿ ವಾಗ್ದಾಳಿ!
ದಾವಣಗೆರೆನವದೆಹಲಿಬೆಂಗಳೂರು

“ಬಾಯ್ ಹರುಕ ಶಾಸಕ ಬಿಪಿ ಹರೀಶ್, ಬಾಯ್ ಬಡುಕ ಯಶವಂತರಾವ್ ಜಾಧವ್, ಇಲಿ ಬುಡುಕ ಹಾಲೇಶ್”:ದಿನೇಶ್ ಕೆ. ಶೆಟ್ಟಿ ವಾಗ್ದಾಳಿ!

Share
ಬಿಪಿ ಹರೀಶ್
Share

ದಾವಣಗೆರೆ: ಹರಿಹರ ಬಿಜೆಪಿ ಶಾಸಕ ಬಿಪಿ ಹರೀಶ್ ಬಾಯ್ ಹರುಕ. ಹರೀಶ್ ಅವರ ಮಾತನ್ನು ಬಿಜೆಪಿ ಪಕ್ಷದಲ್ಲೇ ಯಾರೂ ಕೇಳುತ್ತಿಲ್ಲ. ಈ ಬಾರಿ ಚಂದ್ರಶೇಖರ ಪೂಜಾರಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹರಿಹರ ವಿಧಾನಸಭಾ ಕ್ಷೇತ್ರದ ಟಿಕೆಟ್ ಸಿಗುವ ಸಾಧ್ಯತೆ ಇದೆ. ಹೈಕಮಾಂಡ್‌ನಲ್ಲಿ ಮಾನ್ಯತೆಯೂ ಇಲ್ಲ. ಹಾಗಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಏನನ್ನೋ ಮಾತನಾಡುತ್ತಿದ್ದಾರೆ ಎಂದು ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ. ಪಿ. ಹರೀಶ್ ಅವರಿಗೆ ಹರಿಹರ ಕ್ಷೇತ್ರದಲ್ಲೇ ಅವರಿಗೆ ವಿರೋಧ ವ್ಯಕ್ತವಾಗುತ್ತಿದೆ. ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಅವರು ದಾವಣಗೆರೆ ಚಂಪತ್‌ರಾಯ್ ಇದ್ದಂತೆ. ಶ್ರೀರಾಮನ ಹೆಸರೇಳಿಕೊಂಡು ಬೆಳ್ಳಿ ವಸೂಲಿ ಮಾಡಿರೋದು ದಾವಣಗೆರೆಯಲ್ಲಿ ಜಗಜ್ಜಾಹೀರಾಗಿದೆ. ದುರ್ಗಾಂಬಿಕ ದೇವಸ್ಥಾನದ ಬಗ್ಗೆ ಹಗುರವಾಗಿ ಮಾತನಾಡಿ ನಗರದೇವತೆ ದುರ್ಗಾಂಬಿಕೆಗೆ ಅವಮಾನ ಮಾಡುತ್ತಿದ್ದು ಈ ದೇವಸ್ಥಾನದ
ಟ್ರಸ್ಟ್ ಬಹಳ ಬಿಗಿ ಆಡಳಿತ ನಡೆಸುತ್ತಿದೆ ಎಂದು ತಿಳಿಸಿದರು.

ಕಳೆದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ವೇಳೆ ದುರ್ಗಾಂಬಿಕೆ ದೇವಸ್ಥಾನದ ಒಳಗೆ ನಾಮಪತ್ರ ಸಲ್ಲಿಕೆಗೆ ಹೋಗುವ ಮುನ್ನ ಚಪ್ಪಲಿ ದೇವಸ್ಥಾನದ ಒಳಗೆ ಬಿಟ್ಟು ದೇವಸ್ಥಾನದ ಪಾವಿತ್ರ್ಯತೆ ಹಾಳು ಮಾಡಿದ್ದು ದುರ್ಗಾಂಬಿಕದೇವಿ
ಅವರಿಗೆ ನೋಡಿಕೊಳ್ಳಲಿ, ಇವರಿಂದ ಕಲಿಯುವಂತದ್ದು ಏನೂ ಇಲ್ಲ ಎಂದರು.

ಇಲಿ ಬುಡುಕ ಹಾಲೇಶ್ ಎಂಬಾತನಿಂದ ಯಾವ ಪಕ್ಷವೂ ಉದ್ದಾರ ಆಗಿಲ್ಲ, ಇವರು ಕಾಲು ಇಟ್ಟ ಕಡೆ ಪಕ್ಷ ಹಾಳಾಗುತ್ತದೆ. ಸಂಘಟನೆ ಮಾಡುವವರ ಬಗ್ಗೆ ಹಗುರ ಮತ್ತು ಕೇವಲವಾಗಿ ಮಾತನಾಡುವುದಷ್ಟೇ ಗೊತ್ತು ಎಂದು ವಾಗ್ದಾಳಿ ನಡೆಸಿದರು.

ಗೋಷ್ಠಿಯಲ್ಲಿ ದಾವಣಗೆರೆ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಜಿ. ಶಿವಕುಮಾರ್, ದಾವಣಗೆರೆ ದಕ್ಷಿಣ ಬ್ಲಾಕ್ ಅಧ್ಯಕ್ಷ ಅಯೂಬ್ ಪೈಲ್ವಾನ್, ನಾಗಭೂಷಣ್, ಅನಿತಾ ಬಾಯಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮತ್ತಿತರರು
ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *