Home ಕ್ರೈಂ ನ್ಯೂಸ್ ಚಾಕುವಿನಿಂದ ಚುಚ್ಚಿ ಚುಚ್ಚಿ 21 ವರ್ಷದ ಮಾಡೆಲ್ ಮನೆಯಲ್ಲೇ ಭೀಕರ ಕೊಲೆ, ಜಿಮ್ ಟ್ರೈನರ್ ಇಮ್ರಾನ್ ಮೇಲೆ ಆರೋಪ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಚಾಕುವಿನಿಂದ ಚುಚ್ಚಿ ಚುಚ್ಚಿ 21 ವರ್ಷದ ಮಾಡೆಲ್ ಮನೆಯಲ್ಲೇ ಭೀಕರ ಕೊಲೆ, ಜಿಮ್ ಟ್ರೈನರ್ ಇಮ್ರಾನ್ ಮೇಲೆ ಆರೋಪ!

Share
ಮಾಡೆಲ್
Share

ನವದೆಹಲಿ: ದೆಹಲಿಯಲ್ಲಿ ಭೀಕರ ಕೃತ್ಯ ನಡೆದಿದೆ. 21 ವರ್ಷದ ವಿದ್ಯಾರ್ಥಿನಿ ಹಾಗೂ ಪಾರ್ಟ್ ಟೈಮ್ ಮಾಡೆಲ್ ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ದೆಹಲಿಯ ತಿಲಕ್ ನಗರದ ನ್ಯೂ ಮಹಾವೀರ್ ನಗರದಲ್ಲಿ 21 ವರ್ಷದ ವಿದ್ಯಾರ್ಥಿನಿ ಹಾಗೂ ಪಾರ್ಟ್-ಟೈಮ್ ಮಾಡೆಲ್ ಮುಸ್ಕಾನ್ ಎಂಬಾಕೆಯನ್ನು ಮನೆಯಲ್ಲಿ ಯಾರೂ ಇಲ್ಲದ ವೇಳೆ ಸತತವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಮುಸ್ಕಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮುಸ್ಕಾನ್ ಹೋಗುತ್ತಿದ್ದ ಜಿಮ್‌ನ ತರಬೇತುದಾರ (ಜಿಮ್ ಟ್ರೈನರ್) ಇಮ್ರಾನ್ ಎಂಬಾತನೇ ಈ ಕೃತ್ಯ ಎಸಗಿದ್ದಾನೆ ಎಂದು ಮೃತರ ಸಹೋದರ ಆಕಾಶ್ ಮತ್ತು ಕುಟುಂಬದವರು ಆರೋಪಿಸಿದ್ದಾರೆ.

ಆರೋಪಿ ಇಮ್ರಾನ್ ಸದ್ಯ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ದೆಹಲಿ ಪೊಲೀಸರು ಹಲವು ತಂಡಗಳನ್ನು ರಚಿಸಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ

Share

Leave a comment

Leave a Reply

Your email address will not be published. Required fields are marked *

Related Articles