Home ಕ್ರೈಂ ನ್ಯೂಸ್ ಧೈರ್ಯವಿದ್ದರೆ ಪೂರ್ಣ ವಿಡಿಯೋ ಹಾಕಿ, ದೆಹಲಿ ಪೋಲೀಸರು ಬಿಡುಗಡೆ ಮಾಡಿದ ವಿಡಿಯೋ ಎಡಿಟ್ ಆಗಿದೆ: ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಗಂಭೀರ ಆರೋಪ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಧೈರ್ಯವಿದ್ದರೆ ಪೂರ್ಣ ವಿಡಿಯೋ ಹಾಕಿ, ದೆಹಲಿ ಪೋಲೀಸರು ಬಿಡುಗಡೆ ಮಾಡಿದ ವಿಡಿಯೋ ಎಡಿಟ್ ಆಗಿದೆ: ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಗಂಭೀರ ಆರೋಪ!

Share
ಅಭಿಜಿತ್ ದೀಪ್ಕೆ
Share

ನವದೆಹಲಿ / ಹಿಂಗೋಲಿ: ತಮ್ಮ ಅಜ್ಜಿಯ ನಿಧನದ ಸುದ್ದಿಯನ್ನು ತಿಳಿಸುವ ವೇಳೆ ದೆಹಲಿ ಪೊಲೀಸರು ಬಿಡುಗಡೆ ಮಾಡಿರುವ ವಿಡಿಯೋ ಸಂಪೂರ್ಣವಾಗಿ ‘ಎಡಿಟ್’ ಮಾಡಲಾಗಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಪೊಲೀಸರಿಗೆ ಧೈರ್ಯವಿದ್ದರೆ ಘಟನೆಯ “ಸಂಪೂರ್ಣ ವಿಡಿಯೋ” ಬಿಡುಗಡೆ ಮಾಡುವಂತೆ ಸವಾಲು ಹಾಕಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ದೆಹಲಿಗೆ ಆಗಮಿಸಿದ್ದ ಅಭಿಜಿತ್ ದೀಪ್ಕೆ, ಅಶುತೋಷ್ ರಾಂಕಾ ಮತ್ತು ಸೌರವ್ ದಾಸ್ ಅವರನ್ನು ಅಕ್ಟೋಬರ್ 10ರಂದು ದೆಹಲಿ ಪೊಲೀಸರು ಬಂಧಿಸಿದ್ದರು. ಅದೇ ದಿನ ಮಹಾರಾಷ್ಟ್ರದ ಹಿಂಗೋಲಿಯಲ್ಲಿ ದೀಪ್ಕೆ ಅವರ ಅಜ್ಜಿ ನಿಧನರಾಗಿದ್ದರು.

ಬಂಧನದಲ್ಲಿದ್ದಾಗ ದೀಪ್ಕೆಗೆ ಅಜ್ಜಿಯ ಸಾವು ತಿಳಿಸಲಾಗಿಲ್ಲ ಎಂಬ ಆರೋಪಕ್ಕೆ ಪ್ರತಿಯಾಗಿ, ದೆಹಲಿ ಪೊಲೀಸರು ರವಿವಾರ ಸಂಜೆ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಸಾಂತ್ವನ ಹೇಳುವುದು, ದೀಪ್ಕೆಗೆ ನೀರು ನೀಡುವುದು ಹಾಗೂ ಮನೆಗೆ ತೆರಳಲು ವಿಮಾನ ಅಥವಾ ಬಸ್ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳುವುದು ದಾಖಲಾಗಿತ್ತು. ಆದರೆ ದೀಪ್ಕೆ ಈ ಆಫರ್ ಅನ್ನು ನಿರಾಕರಿಸಿದ್ದರು.

‘ಕಸಿನ್ ಜೊತೆ ಮಾತನಾಡಲು ಬಿಡಲಿಲ್ಲ’: ಈ ಕುರಿತು ಮಹಾರಾಷ್ಟ್ರದ ಹಿಂಗೋಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ದೀಪ್ಕೆ, “ದೆಹಲಿ ಪೊಲೀಸರಿಗೆ ಧೈರ್ಯವಿದ್ದರೆ, ನಾನು ಪದೇ ಪದೇ ನನ್ನ ಕಸಿನ್ ಹಾಗೂ ವಕೀಲರೊಂದಿಗೆ ಮಾತನಾಡಲು ಫೋನ್ ನೀಡುವಂತೆ ಮನವಿ ಮಾಡಿದ ಸಂಪೂರ್ಣ ವಿಡಿಯೋವನ್ನು ಬಿಡುಗಡೆ ಮಾಡಲಿ. ಪೊಲೀಸರು ಜನರನ್ನು ಹಾದಿತಪ್ಪಿಸಲು ಎಡಿಟ್ ಮಾಡಿದ ವಿಡಿಯೋ ಪ್ರದರ್ಶಿಸುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

ಬಂಧನಕ್ಕೊಳಗಾದ ವ್ಯಕ್ತಿಗೆ ವಕೀಲರೊಂದಿಗೆ ಅಥವಾ ಕುಟುಂಬದವರೊಂದಿಗೆ ಮಾತನಾಡಲು ಅವಕಾಶ ನೀಡುವುದು ಮೂಲಭೂತ ಕಾನೂನು ಹಕ್ಕು. ಆದರೆ ಅದನ್ನು ಪೊಲೀಸರು ಕಸಿದುಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಭಾನುವಾರ ಬೆಳಿಗ್ಗೆ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಲಾದ ನಂತರ ದೀಪ್ಕೆ ತಮ್ಮ ಸ್ವಂತ ಊರಿಗೆ ತೆರಳಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles