ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮೋತಿ ನಗರ್ ಮೆಟ್ರೋ ನಿಲ್ದಾಣದ ಸಮೀಪವಿರುವ ಬಟ್ಟೆ ಶೋರೂಮ್ ಒಂದರಲ್ಲಿ 18 ವರ್ಷದ ಯುವತಿಯೊಬ್ಬಳನ್ನು ಆಕೆಯ ಮಾಜಿ ಪ್ರಿಯಕರ, ಪರಿಚಯಸ್ಥನೇ ಟ್ರಾಯ್ ರೂಮ್‌ಗೆ ಎಳೆದುಕೊಂಡು ಹೋಗಿ ಗಂಟಲು ಸೀಳಿ ಭೀಕರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಮೃತರನ್ನು ಶಬ್ನಮ್ ಎಂದು ಗುರುತಿಸಲಾಗಿದ್ದು, ಆರೋಪಿ ಸುರಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಶೋರೂಮ್‌ನ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿದ್ದು, ಕಿತ್ತಳೆ ಬಣ್ಣದ ಟಿ-ಶರ್ಟ್ ಧರಿಸಿದ್ದ ಆರೋಪಿ ಶೋರೂಮ್‌ಗೆ ನುಗ್ಗಿ ಕುರ್ಚಿಯ ಮೇಲೆ ಕುಳಿತಿದ್ದ ಶಬ್ನಮ್ ಅವರನ್ನು ಕೂದಲು ಹಿಡಿದು ಬಲವಂತವಾಗಿ ಎಬ್ಬಿಸಿ ಅತ್ತುಕೊಂಡೇ ಒಳಗೆ ಕರೆದೊಯ್ಯುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಶನಿವಾರ ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುವ ಹೊತ್ತಿನಲ್ಲಿ ಈ ಕೃತ್ಯ ನಡೆದಿದ್ದು, ರಾತ್ರಿ 9 ಗಂಟೆಗೆ ಅಂಗಡಿ ಮುಚ್ಚುವ ವೇಳೆ ಟ್ರಾಯ್ ರೂಮ್‌ನಲ್ಲಿ ರಕ್ತದ ಮಡುವಿನಲ್ಲಿ ಯುವತಿಯ ಶ್ರವ ಪತ್ತೆಯಾಗಿದೆ. ಇಬ್ಬರ ನಡುವಿನ ವೈಯಕ್ತಿಕ ಕಲಹ ಹಾಗೂ ಪ್ರೀತಿ-ಪ್ರಕರಣದ ತಿರಸ್ಕಾರವೇ ಈ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ.
ಸಿಸಿಟಿವಿಯಲ್ಲಿ ಸೆರೆಯಾದ ಕೃತ್ಯ: ಶೋರೂಮ್‌ನ ಗಾಜಿನ ಬಾಗಿಲಿನ ಸಮೀಪ ಕುಳಿತಿದ್ದ ಶಬ್ನಮ್ ಬಳಿಗೆ ಬಂದ ಆರೋಪಿ ಸುರಜ್, ಆಕೆಯ ಮೇಲೆ ಹಲ್ಲೆ ನಡೆಸಿ ಕೂದಲು ಹಿಡಿದು ಟ್ರಾಯ್ ರೂಮ್‌ಗೆ ಎಳೆದುಕೊಂಡು ಹೋಗಿ ಗಂಟಲು ಕೊಯ್ದು ಕೊಲೆ ಮಾಡಿದ್ದಾನೆ.
ಶೋರೂಮ್ ಸಿಬ್ಬಂದಿಯಿಂದ ಮಾಹಿತಿ: ರಾತ್ರಿ ಅಂಗಡಿ ಮುಚ್ಚಲು ಸಿದ್ಧತೆ ನಡೆಸುತ್ತಿದ್ದ ವೇಳೆ ಸಿಬ್ಬಂದಿ ಟ್ರಾಯ್ ರೂಮ್ ಪರಿಶೀಲಿಸಿದಾಗ ಶಬ್ನಮ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಆರೋಪಿ ಸೆರೆ: ದೆಹಲಿಯಿಂದ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿ ಸುರಜ್‌ನನ್ನು ಚುರುಕಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.





Leave a comment