Home ದಾವಣಗೆರೆ ‘ಸ್ಪಿರಿಟ್’ ವಿವಾದಕ್ಕೆ ದೀಪಿಕಾ ಪಡುಕೋಣೆ ಖಡಕ್ ಲೈಕ್: ‘ಪುರುಷ ಅಹಂಕಾರದ ಬಿಕ್ಕಟ್ಟು’ ಎಂದ ಪೋಸ್ಟ್‌ಗೆ ನಟಿ ಬೆಂಬಲ!
ದಾವಣಗೆರೆಬೆಂಗಳೂರುಸಿನಿಮಾ

‘ಸ್ಪಿರಿಟ್’ ವಿವಾದಕ್ಕೆ ದೀಪಿಕಾ ಪಡುಕೋಣೆ ಖಡಕ್ ಲೈಕ್: ‘ಪುರುಷ ಅಹಂಕಾರದ ಬಿಕ್ಕಟ್ಟು’ ಎಂದ ಪೋಸ್ಟ್‌ಗೆ ನಟಿ ಬೆಂಬಲ!

Share
ದೀಪಿಕಾ ಪಡುಕೋಣೆ
Share

ಬೆಂಗಳೂರು: ಪ್ರಭಾಸ್ ಹಾಗೂ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್‌ನ ಬಹುನಿರೀಕ್ಷಿತ ‘ಸ್ಪಿರಿಟ್’ (Spirit) ಸಿನಿಮಾದಿಂದ ನಟಿ ದೀಪಿಕಾ ಪಡುಕೋಣೆ ಹೊರಬಂದಿರುವ ವಿಚಾರದ ಬಗ್ಗೆ ದಿನಕ್ಕೊಂದು ಹೊಸ ತಿರುವು ಸಿಗುತ್ತಿದೆ.

ಇತ್ತೀಚೆಗೆ ‘ಸ್ಪಿರಿಟ್’ ಚಿತ್ರದ ನಿರ್ಮಾಪಕ ಹಾಗೂ ಸಂದೀಪ್ ವಂಗಾ ಸಹೋದರ ಪ್ರಣಯ್ ರೆಡ್ಡಿ ವಂಗಾ ನೀಡಿದ ಸಂದರ್ಶನವೊಂದರಲ್ಲಿ, “ದೀಪಿಕಾ ಸಿನಿಮಾದ ಲಾಭದಲ್ಲಿ ಶೇ. 10ರಷ್ಟು ಪಾಲು ಕೇಳಿದ್ದರು ಹಾಗೂ ಕಥೆಯ ಸೀಕ್ರೆಟ್‌ಗಳನ್ನು ಲೀಕ್ ಮಾಡಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದರು.

ಇದೀಗ ಈ ಆರೋಪಗಳಿಗೆ ದೀಪಿಕಾ ಪಡುಕೋಣೆ ನೇರವಾಗಿ ಯಾವುದೇ ಹೇಳಿಕೆ ನೀಡದಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪೋಸ್ಟ್ ಒಂದನ್ನು ‘ಲೈಕ್’ ಮಾಡುವ ಮೂಲಕ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ಪತ್ರಕರ್ತರೊಬ್ಬರು ಬರೆದಿದ್ದ ಪೋಸ್ಟ್‌ನಲ್ಲಿ, “ಚಿತ್ರರಂಗದಲ್ಲಿ ನಟರು ಶೇರ್ ಹಾಗೂ ತಮ್ಮದೇ ಷರತ್ತುಗಳನ್ನು ವಿಧಿಸಿದಾಗ ಒಪ್ಪುವ ನಿರ್ಮಾಪಕರು, ನಟಿಯರು ಕೇಳಿದರೆ ಅದನ್ನು ‘ಮಹಿಳಾ ಅಹಂ’ ಎಂದು ಬಿಂಬಿಸುವುದು ಸೂಕ್ತವಲ್ಲ. ಇದು ಕೇವಲ ಪುರುಷ ಅಹಂಕಾರದ ಬಿಕ್ಕಟ್ಟು ” ಎಂದು ವಂಗಾ ಸಹೋದರರನ್ನು ತೀವ್ರವಾಗಿ ತರಾಟೆಗೆ ತಗೆದುಕೊಳ್ಳಲಾಗಿತ್ತು.

ದೀಪಿಕಾ ಪಡುಕೋಣೆ ಈ ಪೋಸ್ಟ್‌ಗೆ ಬೆಂಬಲ ಸೂಚಿಸಿ ಲೈಕ್ ಮಾಡಿರುವುದು ಇದೀಗ ಬಾಲಿವುಡ್ ಹಾಗೂ ಟಾಲಿವುಡ್ ಅಂಗಳದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Share

Leave a comment

Leave a Reply

Your email address will not be published. Required fields are marked *