Home ದಾವಣಗೆರೆ ರಣಬೀರ್ ಕಪೂರ್, ಯಶ್ ಅಭಿನಯ ಸೂಪರ್: ರಾಮಾಯಣ ಚಿತ್ರದಲ್ಲಿ ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ ‘ತಪ್ಪು ಆಯ್ಕೆ’ ಎಂದ ನಟಿ ತನಿಷಾ ಮುಖರ್ಜಿ!
ದಾವಣಗೆರೆಬೆಂಗಳೂರುಸಿನಿಮಾ

ರಣಬೀರ್ ಕಪೂರ್, ಯಶ್ ಅಭಿನಯ ಸೂಪರ್: ರಾಮಾಯಣ ಚಿತ್ರದಲ್ಲಿ ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ ‘ತಪ್ಪು ಆಯ್ಕೆ’ ಎಂದ ನಟಿ ತನಿಷಾ ಮುಖರ್ಜಿ!

Share
ತನಿಷಾ ಮುಖರ್ಜಿ
Share

ಮುಂಬೈ: ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ಬ್ರಹ್ಮಾಂಡ ಚಿತ್ರ ‘ರಾಮಾಯಣ’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಬೆನ್ನಲ್ಲೇ, ಚಿತ್ರದ ತಾರಾಗಣದ ಕುರಿತು ಚರ್ಚೆಗಳು ಮುಂದುವರಿದಿವೆ.

ಬಾಲಿವುಡ್ ನಟಿ ಕಾಜೋಲ್ ಸಹೋದರಿ ಹಾಗೂ ನಟಿ ತನಿಷಾ ಮುಖರ್ಜಿ ಅವರು ಚಿತ್ರದಲ್ಲಿ ಸೀತಾ ಮಾತೆಯ ಪಾತ್ರದಲ್ಲಿ ನಟಿಸಿರುವ ಸಾಯಿ ಪಲ್ಲವಿ ಅವರನ್ನು ‘ಸಂಪೂರ್ಣವಾಗಿ ತಪ್ಪು ಆಯ್ಕೆ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಟೀಕಿಸಿದ್ದಾರೆ.

ರಣಬೀರ್ ಕಪೂರ್ ಅವರ ರಾಮ ಹಾಗೂ ಯಶ್ ಅವರ ರಾವಣನ ಅಭಿನಯವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ತನಿಷಾ, ಸಾಯಿ ಪಲ್ಲವಿ ಪಾತ್ರದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಸಿನಿಪ್ರಿಯರ ವಲಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ.

ಎಕ್ಸ್‌  ಖಾತೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ತನಿಷಾ ಮುಖರ್ಜಿ, “ಸಾಯಿ ಪಲ್ಲವಿ ಉತ್ತಮ ನಟಿ ಎಂಬುದರಲ್ಲಿ ಸಂದೇಹ ಇಲ್ಲ, ಆದರೆ ಸೀತೆ ಪಾತ್ರಕ್ಕೆ ಅವರು ಸಂಪೂರ್ಣವಾಗಿ ಅನ್ ಫಿಟ್. ಅವರ ನೋಟವು ಆ ಪಾತ್ರದಿಂದ ನನ್ನನ್ನು ಸಂಪೂರ್ಣವಾಗಿ ದೂರವಿರಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.

ಮತ್ತೊಂದೆಡೆ, ರಣಬೀರ್ ಕಪೂರ್ ರಾಮನಾಗಿ ಹಾಗೂ ಯಶ್ ರಾವಣನಾಗಿ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ ಎಂದು ಇಬ್ಬರ ನಟನೆಯನ್ನು ಕೊಂಡಾಡಿದ್ದಾರೆ. ಈಗಾಗಲೇ ಹಿರಿಯ ನಟ ಮುಖೇಶ್ ಖನ್ನಾ ಕೂಡ ಚಿತ್ರದಲ್ಲಿ ಸೀತೆಯ ಯೋಧೆಯ ರೂಪದ ಚಿತ್ರಣವನ್ನು ಪ್ರಶ್ನಿಸಿದ್ದು, ಬಾಲಿವುಡ್ ಸೆಲೆಬ್ರಿಟಿಯೊಬ್ಬರು ಸಾಯಿ ಪಲ್ಲವಿ ಅವರ ಕಾಸ್ಟಿಂಗ್ ಬಗ್ಗೆ ನೇರವಾಗಿ ಸಾರ್ವಜನಿಕವಾಗಿ ಅಸಮಾಧಾನ ಹೊರಹಾಕಿರುವುದು ಇದೇ ಮೊದಲು.

ತನಿಷಾ ಮುಖರ್ಜಿ ಟೀಕೆ: ಸಾಯಿ ಪಲ್ಲವಿ ಸೀತೆ ಪಾತ್ರಕ್ಕೆ ಸೂಕ್ತವಲ್ಲ ಎಂದಿರುವ ತನಿಷಾ, ಅವರ ಅಭಿನಯ ಹಾಗೂ ವಿಝುಯಲ್ ಕನೆಕ್ಷನ್ ದೃಶ್ಯಾನುಭವಕ್ಕೆ ಅಡ್ಡಿಯಾಗಿದೆ ಎಂದು ನೇರವಾಗಿ ಟೀಕಿಸಿದ್ದಾರೆ.

ರಣಬೀರ್ ಹಾಗೂ ಯಶ್ ಪ್ರಶಂಸೆ: ‘ರಾಮಾಯಣ’ ಚಿತ್ರದಲ್ಲಿ ರಾಮನಾಗಿ ನಟಿಸಿರುವ ರಣಬೀರ್ ಕಪೂರ್ ಮತ್ತು ರಾವಣನಾಗಿ ಕಾಣಿಸಿಕೊಂಡಿರುವ ಯಶ್ ಅವರ ನಟನೆ ನಿರೀಕ್ಷೆಗೂ ಮೀರಿ ಅದ್ಭುತವಾಗಿದೆ ಎಂದು ಕೊಂಡಾಡಿದ್ದಾರೆ.

ಬಾಕ್ಸ್ ಆಫೀಸ್ ಸಕ್ಸಸ್: ವಿವಾದಗಳು ಹಾಗೂ ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ನಿತೇಶ್ ತಿವಾರಿಯ ‘ರಾಮಾಯಣ’ ಚಿತ್ರವು ಜಾಗತಿಕ ಮಟ್ಟದಲ್ಲಿ ರೂ. 1,735 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವ ಹಾದಿಯಲ್ಲಿದೆ.

Share