SUDDIKSHANA KANNADA NEWS/ DAVANAGERE/ DATE:05-02-2025
ದಾವಣಗೆರೆ: ಲಂಚ ಪಡೆಯುವಾಗ ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವವಿಜ್ಞಾನ ಪ್ರಾಧ್ಯಾಪಕಿ ಗಾಯತ್ರಿ ದೇವರಾಜ ಸಿಕ್ಕಿಬಿದ್ದು ಬಂಧನಕ್ಕೊಳಗಾದ ಹಿನ್ನೆಲೆಯಲ್ಲಿ ದಾವಣಗೆರೆ ವಿವಿಯ ತುರ್ತು ಸಿಂಡಿಕೇಟ್ ಸಭೆಯಲ್ಲಿ ಫೆಬ್ರವರಿ 7ರಂದು ಕರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಶನಿವಾರ ಗಾಯತ್ರಿ ದೇವರಾಜ ಅವರನ್ನು ಸಿಬಿಐ ಆಂಧ್ರಪ್ರದೇಶದ ಗುಂಟೂರಿನಲ್ಲಿ ಬಂಧಿಸಿದೆ. ಈ ಹಿನ್ನೆಲೆಯಲ್ಲಿ ಕುಲಪತಿ ಪ್ರೊ. ಬಿ. ಡಿ. ಕುಂಬಾರ ಅವರು ಸಭೆ ಕರೆದಿದ್ದು, ವಿವಿಯ ರಿಜಿಸ್ಟ್ರಾರ್ ಸೇರಿದಂತೆ
ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
ಸಿಂಡಿಕೇಟ್ ಸುಪ್ರೀಂ ಆಗಿರುವ ಕಾರಣ ಗಾಯತ್ರಿ ದೇವರಾಜ ಅವರನ್ನು ಸಸ್ಪೆಂಡ್ ಮಾಡಬೇಕೋ, ಸಸ್ಪೆಂಡ್ ಮಾಡಿ ಸರ್ಕಾರಕ್ಕೆ ರವಾನೆ ಮಾಡಬೇಕೋ ಅಥವಾ ಮುಂದೆ ಯಾವ ರೀತಿ ಹೆಜ್ಜೆಗಳನ್ನು ಇಡಬೇಕು ಎಂಬ ಕುರಿತಂತೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಗಾಯತ್ರಿ ದೇವರಾಜ ಅರೆಸ್ಟ್ ಆಗುತ್ತಿದ್ದಂತೆ ದಾವಣಗೆರೆ ವಿವಿಗೆ ಕೆಟ್ಟ ಹೆಸರು ಬಂದಂತಾಗಿದೆ. ಈ ಘಟನೆ ನಿರೀಕ್ಷಿಸಿರಲಿಲ್ಲ. ವಿವಿಯು ಯಾರೋ ಒಬ್ಬರು ಮಾಡಿದ ಕೃತ್ಯದಿಂದಾಗಿ ತಲೆ ತಗ್ಗಿಸುವಂತಾಗಿ ಎಂದು ವಿವಿಯಲ್ಲಿ ಕಾರ್ಯನಿರ್ವಹಿಸುವ ಹೆಸರು ಹೇಳಲಿಚ್ಚಿಸದ ಪ್ರೊಫೆಸರ್ ಒಬ್ಬರು ಹೇಳಿದ್ದಾರೆ.