Home ದಾವಣಗೆರೆ ಬೆಸ್ಕಾಂ ತುರ್ತು ಕಾಮಗಾರಿ: ಅಕ್ಟೋಬರ್ 10ರ ನಾಳೆ ದಾವಣಗೆರೆ ನಗರದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ!
ದಾವಣಗೆರೆನವದೆಹಲಿಬೆಂಗಳೂರು

ಬೆಸ್ಕಾಂ ತುರ್ತು ಕಾಮಗಾರಿ: ಅಕ್ಟೋಬರ್ 10ರ ನಾಳೆ ದಾವಣಗೆರೆ ನಗರದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ!

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ನಗರ ಉಪವಿಭಾಗ-2 ರ ವ್ಯಾಪ್ತಿಯ 66/11 ಕೆವಿ ಯರಗುಂಟ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಶಿವಾಲಿ, ಶಿವನಗರ, ಎಸ್.ಜೆ.ಎಂ, ಎಸ್ ಟಿಪಿ ಮಾರ್ಗಗಳ ವ್ಯಾಪ್ತಿಯಲ್ಲಿ ಜಲಸಿರಿ ಕಾಮಗಾರಿ ಹಾಗೂ ಬೆಸ್ಕಾಂ ತುರ್ತು ಕಾಮಗಾರಿಯನ್ನು ನಿರ್ವಹಿಸಬೇಕಾಗಿರುವುದರಿಂದ ಅಕ್ಟೋಬರ್‌ 10 ರಂದು ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಕಟ್ ಆಗಲಿದೆ.

ಬಿಸ್ಮಿಲ್ಲಾ ನಗರ, ಎಲ್ ಬಿ ಎಸ್ ನಗರ, ಎಸ್ ಎಸ್ ಎಂ ನಗರ, ಬೀಡಿ ಕಾರ್ಮಿಕರ ಬಡಾವಣೆ, ಶಿವ ನಗರ, ಮಿಲತ್ ಕಾಲೋನಿ, ಅಜಾದ್ ನಗರ, ಎಸ್‌ಟಿ ಪಿ ಪ್ಲಾಂಟ್, ಬಾಷಾ ನಗರ, ಮಂಡಕ್ಕಿ ಬಟ್ಟಿ, ಚೌಡೇಶ್ವರಿ ನಗರ, ಗಾಂಧಿ ನಗರ, ಬಿ ಎನ್ ಲೇಔಟ್ -1, ಎಸ್‌ ಪಿ ಎಸ್‌ ನಗರ, ಭಾಷಾ ನಗರ, ಮಂಡಕ್ಕಿ ಬಟ್ಟಿ, ಚೌಡೇಶ್ವರಿ ನಗರ, ಗಾಂಧಿ ನಗರ, ಬಿ ಎನ್ ಲೇಔಟ್ -1, ಎಸ್‌ ಪಿ ಎಸ್‌ ನಗರ, ಎಸ್.ಜೆ.ಎಂ ನಗರ, ಆರ್ ಟಿ ಓ ಆಫೀಸ್, ಎಸ್ ಎಂ ಕೃಷ್ಣ ನಗರ, ರಿಂಗ್ ರೋಡ್, ಬಿ ಎನ್ ಲೇಔಟ್ , ಮಾಗನಹಳ್ಳಿ ಲೇಔಟ್, ನೂರಾನಿ ಲೇಔಟ್, ಬಾಬು ಜಗಜೀವನ್ ನಗರ, ಸೇವಾ ದಳ ಕಾಲೋನಿ, ಎಸ್.ಟಿ.ಪಿ. ಪ್ಲಾಂಟ್, ಬೂದಾಳ್ ರೋಡ್ ಪ್ರದೇಶಗಳು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ.

ಗ್ರಾಹಕರು ಸಹಕರಿಸಬೇಕೆಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *