ದಾವಣಗೆರೆ: ಕರ್ನಾಟಕ ರಾಜ್ಯದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (KSET-2026) ಯನ್ನು ಅತ್ಯಂತ ಪಾರದರ್ಶಕ, ನ್ಯಾಯೋಚಿತ ಹಾಗೂ ದೋಷರಹಿತವಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ. ಎಂ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೆ ಸೆಟ್ ಪರೀಕ್ಷೆಯ ಪೂರ್ವ ಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಅಕ್ಟೋಬರ್ 11, ಭಾನುವಾರ ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ವತಿಯಿಂದ ದಾವಣಗೆರೆ ಜಿಲ್ಲೆಯಾದ್ಯಂತ 19 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 9012 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ, ಪರೀಕ್ಷೆಯು ಎರಡು ಪ್ರಶ್ನೆಪತ್ರಿಕೆ ಗಳನ್ನ ಒಳಗೊಂಡಿದ್ದು ಪತ್ರಿಕೆ-1 : 50 ಪ್ರಶ್ನೆಗಳು =100 ಅಂಕಗಳು , ಪತ್ರಿಕೆ-2 : 100 ಪ್ರಶ್ನೆಗಳು =200 ಅಂಕಗಳು ಒಟ್ಟು 300 ಅಂಕಗಳಿಗೆ ನಡೆಯಲಿದೆ,ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ ಒಂದೇ ಅವಧಿಯಲ್ಲಿ ನಡೆಯಲಿದೆ ಎಂದರು.
ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಆಸನ, ಶೌಚಾಲಯ ವ್ಯವಸ್ಥೆಯನ್ನ ಕಲ್ಪಿಸಬೇಕು. ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿ ಅಭ್ಯರ್ಥಿಗಳ ಗುರುತಿನ ಚೀಟಿ ಮತ್ತು ಆಡ್ಮಿಟ್ ಕಾರ್ಡ್ನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಫೋಟೋ ಸಹಿತ ಪರಿಶೀಲಿಸಿದ ನಂತರವಷ್ಟೇ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ಪ್ರಾಧಿಕಾರ ನಿಗದಿಪಡಿಸಿದ ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ತಪಾಸಣೆಗಾಗಿ ಪ್ರತಿ ಕೇಂದ್ರದಲ್ಲಿ ಹೋಮ್ ಗಾರ್ಡ್ಗಳು ಹಾಗೂ ವಸ್ತ್ರ ಸಂಹಿತೆ ಅಧಿಕಾರಿಗಳನ್ನು ನೇಮಿಸಲಾಗುವುದು ಮತ್ತು ಪರೀಕ್ಷಾ ಕೊಠಡಿಯೊಳಗೆ ಯಾವುದೇ ಮಾದರಿಯ ಎಲೆಕ್ಟ್ರಾನಿಕ್ ಉಪಕರಣಗಳು ಅಥವಾ ಕೈಗಡಿಯಾರಗಳನ್ನು ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗುತ್ತಿದ್ದು ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುವುದು, ಮತ್ತು ಪರೀಕ್ಷೆ ಕೇಂದ್ರಗಳ ಸುತ್ತಲಿನ ಜೆರಾಕ್ಸ್ ಅಂಗಡಿಗಳು ತೆರೆಯದಂತೆ ಸೂಚಿಸಲಾಗುವುದು ಹಾಗೂ ಎಲ್ಲಾ ಕೇಂದ್ರಗಳಲ್ಲಿ ಸಿಸಿಟಿವಿ ರೆಕಾರ್ಡಿಂಗ್ ಮತ್ತು ಲೈವ್ ವೆಬ್ಕಾಸ್ಟಿಂಗ್ ಇರಲಿದ್ದು, ಅಭ್ಯರ್ಥಿಗಳು ಹಾಗೂ ಸಿಬ್ಬಂದಿಗಳು ನಿಯಮಿತ ಸಮಯಕ್ಕಿಂತ ಮುಂಚಿತವಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಿ ಪರೀಕ್ಷೆಯನ್ನು ಯಶಸ್ವಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಡಿಡಿಪಿಯು ಪಳನಿವೇಲು ಡಿಡಿಪಿಯು ಬಿ.ಹೆಚ್.ಕೃಷ್ಣಪ್ರಸಾದ್ ಹಾಗೂ ಇತರರು ಉಪಸ್ಥಿತರಿದ್ದರು.
19-ಪರೀಕ್ಷಾ ಕೇಂದ್ರಗಳ ವಿವರ:
1.ಪಿ. ಜೆ. ಎಕ್ಸ್ಟೆನ್ಷನ್ ಮೋತಿವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು, 2. ಪಿ. ಜೆ. ಎಕ್ಸ್ಟೆನ್ಷನ್ ಎ.ಆರ್.ಜಿ. ಪದವಿ ಪೂರ್ವ ಕಲಾ ಮತ್ತು ವಾಣಿಜ್ಯ ಕಾಲೇಜು , 3. ಹದಡಿ ಮುಖ್ಯ ರಸ್ತೆ, ಜಿಲ್ಲಾ ಕ್ರೀಡಾಂಗಣದ ಹತ್ತಿರ ಡಿ.ಆರ್.ಎಮ್. ವಿಜ್ಞಾನ ಪದವಿ ಪೂರ್ವ ಕಾಲೇಜು, 4. ಕೆ.ಆರ್. ರಸ್ತೆ, ಸರ್ಕಾರಿ ಮಾಜಿ ಪುರಸಭೆ ಪದವಿ ಪೂರ್ವ ಕಾಲೇಜು, 5. ಪಿ. ಜೆ. ಎಕ್ಸ್ಟೆನ್ಷನ್ ರಾಜನಹಳ್ಳಿ ಸೀತಮ್ಮ ಸರ್ಕಾರಿ ಹೆಣ್ಣು ಮಕ್ಕಳ ಪದವಿ ಪೂರ್ವ ಕಾಲೇಜು,6. ಎಸ್ಎಸ್ ಲೇಔಟ್, ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಹಿಂಭಾಗ , ಡಾ. ಶಾಮನೂರು ಶಿವಶಂಕರಪ್ಪ ಪದವಿ ಪೂರ್ವ ಕಾಲೇಜು, 7. ಎಸ್.ಎಸ್. ಲೇಔಟ್, ‘ಎ’ ಬ್ಲಾಕ್, ಕುಂದವಾಡ ಕೆರೆ ಹತ್ತಿರ, ಎಸ್.ಬಿ.ಸಿ. ಪ್ರಥಮ ದರ್ಜೆ ಮಹಿಳಾ ಕಾಲೇಜು
8. ಡೆಂಟಲ್ ಕಾಲೇಜು ರಸ್ತೆ, ಎಂ.ಸಿ.ಸಿ ‘ಬಿ’ ಬ್ಲಾಕ್, ಯು.ಬಿ.ಡಿ.ಟಿ. ಬಾಲಕರ ವಸತಿನಿಲಯದ ಹತ್ತಿರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ, 9. ಎಸ್.ಎಸ್. ಲೇಔಟ್, ‘ಎ’ ಬ್ಲಾಕ್, ಒಳಾಂಗಣ ಕ್ರೀಡಾಂಗಣದ ಹತ್ತಿರ, ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು 10. ವಿದ್ಯಾನಗರ ತರಳುಬಾಳು ಬಡಾವಣೆ, ಈಶ್ವರ ಪಾರ್ವತಿ ದೇವಾಲಯದ ಎದುರು, ಮಗನೂರು ಬಸಪ್ಪ ಪದವಿ ಪೂರ್ವ ಕಾಲೇಜು, 11. 2ನೇ ಮುಖ್ಯ ರಸ್ತೆ, 2ನೇ ಕ್ರಾಸ್, ಸಾಯಿ ರಾಮ ಪಾರ್ಕ್ ಹತ್ತಿರ, ಪಿ. ಜೆ. ಎಕ್ಸ್ಟೆನ್ಷನ್, ಎಸ್.ಎ.ಜಿ.ಬಿ. ಸಂಯುಕ್ತ ಪದವಿ ಪೂರ್ವ ಕಾಲೇಜು , 12.ಅಕ್ಕಮಹಾದೇವಿ ರಸ್ತೆ, ಪಿ. ಜೆ. ಎಕ್ಸ್ಟೆನ್ಷನ್ ,ಎ.ವಿ. ಕಮಲಮ್ಮ ಪದವಿ ಪೂರ್ವ ಕಾಲೇಜು, 13. ಹೆಚ್.ಆರ್.ಬಿ. ಲೇಔಟ್ ಶಿವಕುಮಾರ ಸ್ವಾಮಿ ಬಡಾವಣೆ ಸೆಂಟ್ ಜಾನ್ಸ್ ವಿಜ್ಞಾನ ಪದವಿ ಪೂರ್ವ ಕಾಲೇಜು.
14. ಪಿ. ಜೆ. ಎಕ್ಸ್ಟೆನ್ಷನ್, ರಾಮಕೃಷ್ಣ ನರ್ಸಿಂಗ್ ಹೋಮ್ ಹತ್ತಿರ,ಸೆಂಟ್ ಪಾಲ್ಸ್ ಪದವಿ ಪೂರ್ವ ಕಾಲೇಜು, 15. #1179/7, ಎಸ್. ನಿಜಲಿಂಗಪ್ಪ ಲೇಔಟ್, ಅಮೃತ ಪದವಿ ಪೂರ್ವ ಕಾಲೇಜು, 16. ನಿಜಲಿಂಗಪ್ಪ ಲೇಔಟ್, ಶ್ರೀ ಗುರುಬಸವೇಶ್ವರ ಛತ್ರದ ಹತ್ತಿರ ಎಸ್.ಎಲ್. ಪದವಿ ಪೂರ್ವ ಕಾಲೇಜು , 17. ವಿದ್ಯಾನಗರ ಹದಡಿ ರಸ್ತೆ ಅನುಭವ ಮಂಟಪ, ಶ್ರೀ ತರಳುಬಾಳು ಜಗದ್ಗುರು ಸಂಯುಕ್ತ ಪದವಿ ಪೂರ್ವ ಕಾಲೇಜು, 18. ಎಸ್.ಎಸ್. ಲೇಔಟ್, ‘ಎ’ ಬ್ಲಾಕ್, ಕುಂದವಾಡ ಕೆರೆ ಹತ್ತಿರ, ಅಥಣಿ ಸಂಯುಕ್ತ ಪದವಿ ಪೂರ್ವ ಕಾಲೇಜು, 19. ಪಿ. ಜೆ. ಎಕ್ಸ್ಟೆನ್ಷನ್, ರೈಲ್ವೆ ನಿಲ್ದಾಣದ ಹತ್ತಿರ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜು.





Leave a comment