ದಾವಣಗೆರೆ: ಅಂಚೆ ಇಲಾಖೆಯಲ್ಲಿ ಗ್ರಾಮೀಣ ಅಂಚೆ ಸೇವಕರ ನೇಮಕಾತಿ ಸಂಬಂಧ ಇಲಾಖೆಯಲ್ಲಿ ಖಾಲಿ ಅರ್ಜಿ ಇರುವ ಶಾಖಾ ಅಂಚೆ ಪಾಲಕ, `ಸಹಾಯಕ ಶಾಖಾ ಅಂಚೆ ಪಾಲಕ ಮತ್ತು ಡಾಕ್ ಸೇವಕ್ ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಅಂಚೆ ಇಲಾಖೆಯಲ್ಲಿ 19 ಗ್ರಾಮೀಣ ಅಂಚೆ ಸೇವಕ (GDS) ಹುದ್ದೆಗಳಿಗೆ ಅರ್ಜಿ ಆಹ್ವಾನ
ಮುಖ್ಯ ಮುಖ್ಯಾಂಶಗಳು:
ಹುದ್ದೆಗಳು: ಶಾಖಾ ಅಂಚೆ ಪಾಲಕ (BPM), ಸಹಾಯಕ ಶಾಖಾ ಅಂಚೆ ಪಾಲಕ (ABPM) ಮತ್ತು ಡಾಕ್ ಸೇವಕ್.
ಒಟ್ಟು ಖಾಲಿ ಹುದ್ದೆಗಳು:
ದೇಶಾದ್ಯಂತ: 23,757 ಹುದ್ದೆಗಳು
ಕರ್ನಾಟಕ: 1,116 ಹುದ್ದೆಗಳು
ದಾವಣಗೆರೆ ಅಂಚೆ ವಿಭಾಗ: 19 ಹುದ್ದೆಗಳು
ಶೈಕ್ಷಣಿಕ ಅರ್ಹತೆ: 10ನೇ ತರಗತಿ (SSLC) ತೇರ್ಗಡೆ ಕಡ್ಡಾಯ. ಇಂಗ್ಲಿಷ್ ಮತ್ತು ಗಣಿತದಲ್ಲಿ ಉತ್ತೀರ್ಣ ಅಂಕಗಳನ್ನು ಹೊಂದಿರಬೇಕು ಹಾಗೂ ಕನ್ನಡವನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು.
ವಯೋಮಿತಿ: 18 ರಿಂದ 40 ವರ್ಷಗಳು.
ಆಯ್ಕೆ ಪ್ರಕ್ರಿಯೆ: 10ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ (ಮೆರಿಟ್ ಪಟ್ಟಿ) ನೇರ ಆನ್‌ಲೈನ್ ನೇಮಕಾತಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 19.
ಅರ್ಜಿ ಸಲ್ಲಿಸುವ ಲಿಂಕ್: indiapost.gov.in/gdsonlineengagement
ಸೆಪ್ಟೆಂಬರ್ 19 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. https://indiapost.gov.in/gdsonlineengagement ಸಲ್ಲಿಸಬೇಕು.
ಎಲ್ಲಾ ಹುದ್ದೆಗಳಿಗೆ 10ನೇ ತರಗತಿ ತೇರ್ಗಡೆ ಕಡ್ಡಾಯ. ಇಂಗ್ಲೀಷ್ ಮತ್ತು ಗಣಿತದಲ್ಲಿ ಉತ್ತೀರ್ಣ ಅಂಕಗಳೊಂದಿಗೆ 10ನೇ ತರಗತಿಯಲ್ಲಿ, ಕನ್ನಡವನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು. ವಯಸ್ಸು 18 ಮತ್ತು ಗರಿಷ್ಟ 40 ವರ್ಷಗಳ ವಯೋಮಾನದವರಾಗಿರಬೇಕು. 10ನೇ ತರಗತಿಯಲ್ಲಿ ಪಡೆದ ಅಂಕಗಳ (ಮೆರಿಟ್) ಆಧಾರದಲ್ಲಿ ಆನ್‍ಲೈನ್ ಮೂಲಕವೇ ನೇಮಕಾತಿ ನಡೆಯುತ್ತದೆ.
ಒಟ್ಟು ಹುದ್ದೆಗಳು: 23.757 (ಭಾರತದಾದ್ಯಂತ), ಅದರಲ್ಲಿ 1,116 ಹುದ್ದೆಗಳು ಕರ್ನಾಟಕಕ್ಕೆ ಸೀಮಿತವಾಗಿರುತ್ತವೆ. ದಾವಣಗೆರೆ ಅಂಚೆ ವಿಭಾಗದಲ್ಲಿ ಒಟ್ಟು 19 ಹುದ್ದೆಗಳು ಖಾಲಿ ಇರುತ್ತವೆ. ಹೆಚ್ಚಿನ ಮಾಹಿಗಾಗಿ ಸಮೀಪದ ಯಾವುದೇ ಅಂಚೆ ಕಚೇರಿಯನ್ನು ಅಥವಾ ಮೇಲೆ ತಿಳಿಸಿದ ವೆಬ್ ಸೈಟ್ ಲಿಂಕ್‍ನ್ನು ಸಂಪರ್ಕಿಸಬಹುದೆಂದು ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.





Leave a comment