ಹೈದರಾಬಾದ್: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರ ವೈವಾಹಿಕ ಜೀವನ ಹಾಗೂ ವೈಯಕ್ತಿಕ ವಿಚಾರಗಳು ಸದಾ ಕಾಲ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿರುತ್ತವೆ.
ವಿಶೇಷವಾಗಿ ಪವನ್ ಕಲ್ಯಾಣ್ ಮತ್ತು ಅವರ ಮೂರನೇ ಪತ್ನಿ ಅನ್ನಾ ಲೇಝಿನೋವಾ ನಡುವಿನ ಸಂಬಂಧದ ಕುರಿತು ಹರಿದಾಡುತ್ತಿರುವ ವರದಿಗಳ ಬೆನ್ನಲ್ಲೇ, ಅವರ ಹಿಂದಿನ ಎರಡು ಮದುವೆಗಳು ಮತ್ತು ವಿಚ್ಛೇದನದ ಕುರಿತಾದ ಹಳೆಯ ಸಂಗತಿಗಳು ಮತ್ತೆ ಮುನ್ನೆಲೆಗೆ ಬಂದಿವೆ. ಮೊದಲ ಪತ್ನಿ ನಂದಿನಿ ಜೊತೆಗಿನ ಬೇರ್ಪಡೆ, ನಟಿ ರೇಣು ದೇಸಾಯಿ ಅವರೊಂದಿಗಿನ ಪ್ರೇಮ ಹಾಗೂ ವಿಚ್ಛೇದನದ ಕಹಿ ನೆನಪುಗಳು ಮತ್ತೊಮ್ಮೆ ಸಾರ್ವಜನಿಕ ವಲಯದಲ್ಲಿ ವೈರಲ್ ಆಗುತ್ತಿವೆ.
ಪವನ್ ಕಲ್ಯಾಣ್ ಅವರು 1997 ಮೇ ತಿಂಗಳಲ್ಲಿ ವಿಶಾಖಪಟ್ಟಣದ ನಂದಿನಿ ಎಂಬುವವರನ್ನು ತಮ್ಮ ಮೊದಲ ವಿವಾಹವಾಗಿದ್ದರು. ಆದರೆ ಸಿನಿಮಾ ರಂಗದ ಬಿಡುವಿಲ್ಲದ ಜೀವನ ಹಾಗೂ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದಾಗಿ 1999ರಿಂದ ಇಬ್ಬರೂ ದೂರವಿರಲು ಆರಂಭಿಸಿದರು. ನಂತರ 2008ರಲ್ಲಿ ವಿಶಾಖಪಟ್ಟಣದ ಫ್ಯಾಮಿಲಿ ಕೋರ್ಟ್ ಮೂಲಕ ಇವರಿಗೆ ಅಧಿಕೃತವಾಗಿ ವಿಚ್ಛೇದನ ದೊರೆಯಿತು. ಬಳಿಕ ‘ಬದ್ರಿ’ ಚಿತ್ರದ ನಟಿ ರೇಣು ದೇಸಾಯಿ ಅವರೊಂದಿಗೆ ಒಡನಾಟ ಬೆಳೆಸಿಕೊಂಡ ಪವನ್ ಕಲ್ಯಾಣ್, 2009ರಲ್ಲಿ ಅವರನ್ನು ವಿವಾಹವಾದರು. ಆದರೆ ಈ ದಾಂಪತ್ಯ ಜೀವನ ಕೂಡ ಹೆಚ್ಚು ಕಾಲ ಉಳಿಯಲಿಲ್ಲ. ಪವನ್ ಕಲ್ಯಾಣ್ ಅವರಿಂದ ಬೇರ್ಪಡುವ ಸಂದರ್ಭದಲ್ಲಿ ತಾನು ಅನುಭವಿಸಿದ ಮಾನಸಿಕ ವೇದಿಕೆಯನ್ನು ರೇಣು ದೇಸಾಯಿ ಅವರು ಈ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.
ಮೊದಲ ಮದುವೆ ಮತ್ತು ವಿಚ್ಛೇದನ: 1997ರಲ್ಲಿ ನಂದಿನಿ ಅವರನ್ನು ವರಿಸಿದ್ದ ಪವನ್ ಕಲ್ಯಾಣ್, 2008ರಲ್ಲಿ ಕೌಟುಂಬಿಕ ಕಾರಣಗಳಿಂದ ಕಾನೂನುಬದ್ಧವಾಗಿ ವಿಚ್ಛೇದನ ಪಡೆದರು.
ರೇಣು ದೇಸಾಯಿ ಜೊತೆಗಿನ ದಾಂಪತ್ಯ ಅಂತ್ಯ: ನಟಿ ರೇಣು ದೇಸಾಯಿ ಅವರನ್ನು 2009ರಲ್ಲಿ ಮದುವೆಯಾಗಿದ್ದರೂ, ವೈಯಕ್ತಿಕ ಕಾರಣಗಳಿಂದ 2012ರಲ್ಲಿ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ಪಡೆದು ಬೇರ್ಪಟ್ಟರು.
ಆರ್ಥಿಕ ಸಹಾಯದ ವಾದ ತಳ್ಳಿಹಾಕಿದ ರೇಣು: ಪವನ್ ಕಲ್ಯಾಣ್‌ರಿಂದ ತಾನು ಯಾವುದೇ ಭಾರಿ ಮೊತ್ತದ ಜೀವನಾಂಶವನ್ನು ಪಡೆದಿಲ್ಲ ಎಂದು ರೇಣು ದೇಸಾಯಿ ಸ್ಪಷ್ಟಪಡಿಸಿದ್ದರು.
ಮೂರನೇ ಪತ್ನಿ ಅನ್ನಾ ಲೇಝಿನೋವಾ: ವಿದೇಶಿ ಪ್ರಜೆ ಅನ್ನಾ ಲೇಝಿನೋವಾ ಅವರನ್ನು 2013ರಲ್ಲಿ ವಿವಾಹವಾಗಿದ್ದ ಪವನ್ ಕಲ್ಯಾಣ್, ದೀರ್ಘಕಾಲದ ದಾಂಪತ್ಯದ ಬಳಿಕ ಬೇರ್ಪಡುವ ನಿರ್ಧಾರಕ್ಕೆ ಬಂದಿದ್ದಾರೆ.
ವೈಯಕ್ತಿಕ ಜೀವನದಲ್ಲಿ ಏಳುಬೀಳುಗಳನ್ನು ಕಂಡರೂ ರಾಜಕೀಯ ಮತ್ತು ಸಿನಿಮಾ ರಂಗದಲ್ಲಿ ಪವನ್ ಕಲ್ಯಾಣ್ ತಮ್ಮದೇ ಆದ ಪ್ರಭಾವವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಅವರ ಮೂರು ಮದುವೆಗಳು ಮತ್ತು ವೈವಾಹಿಕ ಜೀವನದ ಈ ಹಾದಿಯು ಟಾಲಿವುಡ್ ಹಾಗೂ ರಾಜಕೀಯ ವಲಯದಲ್ಲಿ ಸದಾ ಚರ್ಚೆಯ ಕೇಂದ್ರಬಿಂದುವಾಗಿದೆ.





Leave a comment