Home ದಾವಣಗೆರೆ 26ನೇ ವಯಸ್ಸಿಗೆ ಮಂತ್ರಿಗಿರಿ: 4ನೇ ಬಾರಿಗೆ ಸಚಿವರಾದ ದಾವಣಗೆರೆ ರಾಜಕಾರಣದ ‘ಉತ್ತರ’ ಧ್ರುವತಾರೆ ಮಲ್ಲಣ್ಣರ 32 ವರ್ಷಗಳ ರಾಜಕೀಯ ಪಯಣಗಿರಿ!
ದಾವಣಗೆರೆನವದೆಹಲಿಬೆಂಗಳೂರು

26ನೇ ವಯಸ್ಸಿಗೆ ಮಂತ್ರಿಗಿರಿ: 4ನೇ ಬಾರಿಗೆ ಸಚಿವರಾದ ದಾವಣಗೆರೆ ರಾಜಕಾರಣದ ‘ಉತ್ತರ’ ಧ್ರುವತಾರೆ ಮಲ್ಲಣ್ಣರ 32 ವರ್ಷಗಳ ರಾಜಕೀಯ ಪಯಣಗಿರಿ!

Share
ದಾವಣಗೆರೆ
Share

ವಿಶೇಷ ಲೇಖನ: ಗಜೇಂದ್ರ ಜಗನ್ನಾಥ್, ದಾವಣಗೆರೆ ಉತ್ತರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು, 28 ಮತ್ತು 37ನೇ ವಾರ್ಡ್ ಮುಖಂಡರು

ದಾವಣಗೆರೆ ರಾಜಕಾರಣದಲ್ಲಿ ಅಚ್ಚಳಿಯದ ಹೆಸರು ಎಸ್. ಎಸ್. ಮಲ್ಲಿಕಾರ್ಜುನ್ ಅವರದ್ದು. ರಾಜಕೀಯ ರಾಜತಾಂತ್ರಿಕ, ಅಭಿವೃದ್ಧಿಯ ವಿಕಾಸ ಪುರುಷರು ಎಂದರೆ ಉತ್ಪ್ರೇಕ್ಷೆ ಆಗದು. ವ್ಯಾಪಾರ, ಉದ್ಯಮ, ಶೈಕ್ಷಣಿಕ ಕ್ಷೇತ್ರ ಹಾಗೂ ರಾಜಕೀಯ ರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಮಲ್ಲಣ್ಣ ಅವರು ಸಮಗ್ರ ಅಭಿವೃದ್ಧಿಯ ರೂವಾರಿ.

ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಇಲಾಖೆ ಜೊತೆಗೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗುವ ಮೂಲಕ ಮತ್ತೆ ಅಭಿವೃದ್ಧಿ ಶಕೆಗೆ ಪಣ ತೊಟ್ಟಿದ್ದು, ಸಂಸದೆ ಹಾಗೂ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಪುತ್ರ ಸಮರ್ಥ್ ಶಾಮನೂರು ಅವರು ದಾವಣಗೆರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಿದ್ದು, ಮತ್ತಷ್ಟು ಅಭಿವೃದ್ಧಿ ಕಾರ್ಯಗತ ಆಗಲಿವೆ. 

ದಿವಂಗತ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಪಾರ್ವತಮ್ಮ ದಂಪತಿ ಪುತ್ರರು. 1999ರ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಜಯಶಾಲಿಯಾದರಲ್ಲದೇ, ಸಚಿವರಾಗಿಯೂ ಕಾರ್ಯನಿರ್ವಹಿಸಿದಾಗ ಕೇವಲ 26 ವರ್ಷ. ಸುಮಾರು 32 ವರ್ಷಗಳ ಕಾಲದ ಸುದೀರ್ಘ ರಾಜಕಾರಣದಲ್ಲಿ ಮಲ್ಲಿಕಾರ್ಜುನ್ ಅವರ ರಾಜಕೀಯ ಜೀವನವೂ ಅಭೂತಪೂರ್ವ ಹಾಗೂ ಅಭಿವೃದ್ಧಿಪರ ಚಿಂತನೆಯುಳ್ಳ ದೂರದೃಷ್ಟಿತ್ವದ ನಾಯಕರು.

ಎಸ್ ಎಸ್ ಎಂ ಬಾಲ್ಯ ಜೀವನ, ನಡೆದು ಬಂದ ಹಾದಿ:

– 1967ರಲ್ಲಿ ಶಾಮನೂರು ಶಿವಶಂಕರಪ್ಪ ಹಾಗೂ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪರ ತೃತೀಯ ಪುತ್ರರಾಗಿ ಜನನ

– ಮೈಸೂರು ವಿವಿಯಲ್ಲಿ ಬಿ.ಕಾಂ. ಪದವಿ.

– 1999ರಲ್ಲಿ ಜಿ. ಪಿ. ಪ್ರಭಾ ಜೊತೆ ವಿವಾಹ. ಪುತ್ರ ಸಮರ್ಥ್ ಶಾಮನೂರು, ಶಿವು, ಎಸ್. ಎಂ. ಡಾ. ಜೇಷ್ಠ

– ಚಿಕ್ಕ ವಯಸ್ಸಿನಿಂದಲೇ ಸಮಾಜ ಸೇವೆ

– ಜನರ ಕಲ್ಯಾಣಕ್ಕಾಗಿ, ನಿರಂತರವಾಗಿ ದುಡಿಯುತ್ತಾ ಬಂದಿರುವ ನೇತಾರ

– 1999ರಲ್ಲಿ ಶಾಸಕರಾಗಿ ಆಯ್ಕೆ

– 1999 ರಲ್ಲಿ ಅಧಿಕಾರಕ್ಕೆ ಬಂದ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಸಚಿವರಾಗಿ ಉತ್ತಮ ಕಾರ್ಯನಿರ್ವಹಣೆ

– ಕೈಗಾರಿಕೋದ್ಯಮದಲ್ಲಿ ಅಪಾರ ಆಸಕ್ತಿ ಹೊಂದಿರುವ ಎಸ್.ಎಸ್. ಮಲ್ಲಿಕಾರ್ಜುನ್

– ರಷ್ಯಾ, ಬ್ರೆಜಿಲ್, ಇಂಗ್ಲೆಂಡ್, ಸಿಂಗಪೂರ್, ಅಮೆರಿಕಾ, ದುಬೈ ಹಾಗೂ ಇತರ ಯುರೋಪಿಯನ್ ರಾಷ್ಟ್ರಗಳಿಗೆ ಭೇಟಿ ನೀಡಿ ಅಭಿವೃದ್ಧಿ ಬಗ್ಗೆ ಅಧ್ಯಯನ

– ಸ್ವತಃ ಕ್ರೀಡಾಪಟುಗಳಾದ ಎಸ್.ಎಸ್. ಮಲ್ಲಿಕಾರ್ಜುನ್ ರವರಿಗೆ ಅಚ್ಚುಮೆಚ್ಚಿನ ಆಟಗಳೆಂದರೆ ಕ್ರಿಕೆಟ್ ಹಾಗೂ ಷಟಲ್ ಬ್ಯಾಡ್ಮಿಂಟನ್.

– ಕರ್ನಾಟಕ ರಾಜ್ಯ ಒಲಂಪಿಕ್ ಅಸೋಸಿಯೇಷನ್ ನ ಉಪಾಧ್ಯಕ್ಷರಾಗಿ ಸೇವೆ

– ದಾವಣಗೆರೆ ಬಾಪೂಜಿ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿ

– ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಎರಡು ಬಾರಿ ಕಾರ್ಯನಿರ್ವಹಣೆ

– ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಸೇವೆ

– 2015ರಲ್ಲಿ ಸಿದ್ದರಾಮಯ್ಯರ ನೇತೃತ್ವದ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವ ಸ್ಥಾನ

– ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವರಾಗಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ

– 2023ರಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಜಯಭೇರಿ

– ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು

– ಸಿಎಂ ಡಿ. ಕೆ. ಶಿವಕುಮಾರ್ ಸಚಿವ ಸಂಪುಟದಲ್ಲಿ ಮತ್ತೆ ಸಚಿವ ಸ್ಥಾನ

ಪಕ್ಷನಿಷ್ಠೆ ಮತ್ತು ರಾಜಕೀಯ ಪಯಣ:

1998ರಲ್ಲಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದ ಮಲ್ಲಿಕಾರ್ಜುನ್, ನಾಲ್ಕು ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ನಾಲ್ಕೂ ಬಾರಿಯೂ ಸಚಿವರಾಗಿರುವುದು ಮಲ್ಲಣ್ಣರ ರಾಜಕೀಯ ತಂತ್ರಗಾರಿಕೆ ಮತ್ತು ಚಾಣಾಕ್ಷ ರಾಜಕಾರಣಕ್ಕೆ ಸಾಕ್ಷಿ. ಕಾಂಗ್ರೆಸ್ ಪಕ್ಷದ ಮೂಲಸ್ತಂಭ ಶಾಮನೂರು ಕುಟುಂಬದ ಕುಡಿಯಾದ ಮಲ್ಲಿಕಾರ್ಜುನ್ ಅವರು ಯಾವುದೇ ಅಧಿಕಾರದ ಆಸೆ-ಆಮಿಷಗಳಿಗೆ ಒಳಗಾಗದೆ ಸುದೀರ್ಘ ಪಕ್ಷನಿಷ್ಠೆ ಕಾಯ್ದುಕೊಂಡಿದ್ದಾರೆ. ಕಷ್ಟ ಎಂದು ಬಂದವರ ಪಾಲಿಗೆ ಮಲ್ಲಿಕಾರ್ಜುನ್ ಅವರೇ ದೈವಸ್ವರೂಪಿ.

ಅಭಿವೃದ್ಧಿ ವಿಚಾರಕ್ಕೆ ಬಂದರೆ ಮಲ್ಲಿಕಾರ್ಜುನ್ ಅವರಿಗೆ ಅವರೇ ಸಾಟಿ. ಜಿಲ್ಲಾ ಸಚಿವರಾಗಿದ್ದಾಗ ಮಲ್ಲಿಕಾರ್ಜುನ್ ಅವರು ಮಾಡಿರುವ ಯೋಜನೆಗಳು, ಕಾರ್ಯಕ್ರಮಗಳೇ ಸಾಕ್ಷಿ. ನೀರಾವರಿ ಸೌಲಭ್ಯ ಕಲ್ಪಿಸಲು ಕಟಿಬದ್ಧರಾಗಿರುವ ಮಲ್ಲಿಕಾರ್ಜುನ್ ಅವರು ಈಗಾಗಲೇ ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರುತ್ತಿದ್ದಾರೆ. ಬರಪೀಡಿತ ಪ್ರದೇಶಗಳಿಗೆ ನೀರುಣಿಸುವ ಕನಸು ಕಂಡಿದ್ದಾರೆ. ಯೋಜನೆಗಳೂ ಮುಂದುವರಿದಿವೆ. 2013ರಿಂದ 2018ರವರೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕೇವಲ ಎರಡೂವರೆ ವರ್ಷದ ಅವಧಿಯಲ್ಲಿ ಸಚಿವರಾಗಿ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದಿದ್ದರು. ಆನಂತರ ಬಿಜೆಪಿ ಅಧಿಕಾರಕ್ಕೆ ಬಂದಾಗ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆ ಆಗಿತ್ತು. ಮತ್ತೆ ದಾವಣಗೆರೆ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದ್ದು 2023ರಲ್ಲಿ. ಅದೂ ಮಲ್ಲಿಕಾರ್ಜುನ್ ಅವರು ಸಚಿವರಾದ ಬಳಿಕ.

ಸಚಿವರಾಗಿದ್ದಾಗ ನೀರಾವರಿ ಯೋಜನೆಗಳು:

ಶ್ರೀ ತರಳಬಾಳು ಜಗದ್ಗುರುಗಳ ಮಹಾತ್ವಾಕಾಂಕ್ಷೆಯ 22 ಕೆರೆಗಳನ್ನು ತುಂಗಾಭದ್ರಾ ನದಿಯಿಂದ ಏಕಕಾಲದಲ್ಲಿ ತುಂಬಿಸುವ ಯೋಜನೆಯ ಕಾಮಗಾರಿ.

ಕಾಡಜ್ಜಿ – ಚಿಕ್ಕಮ್ಯಾಗಳೇರಿ ರಸ್ತೆ ಕಾಮಗಾರಿ, ಆವರಗೊಳ್ಳದಿಂದ – ದೊಗ್ಗಳ್ಳಿಯವರೆಗೆ ಕಾಂಕ್ರೀಟ್ ರಸ್ತೆ

ಭದ್ರಾ ನೀರಾವರಿ ಯೋಜನೆಗೆ ಒಳಪಟ್ಟ ಪ್ರದೇಶದಲ್ಲಿ ಚಾನಲ್ ರಸ್ತೆಗಳ ಅಭಿವೃದ್ಧಿ ಜೊತೆಗೆ ಎಸ್ ಸಿ ಪಿ ಮತ್ತು ಟಿಎಸ್ ಪಿ ಯೋಜನೆಯಡಿ ಕಾಲೋನಿಯ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ.

ರಿಂಗ್ ರಸ್ತೆ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ರಸ್ತೆ ಸೇರುವ ವೃತ್ತ ಅಭಿವೃದ್ಧಿ, ಪಿ. ಬಿ. ರಸ್ತೆಯಲ್ಲಿ ಅಲಂಕಾರಿಕಾ ವಿದ್ಯುತ್ ದೀಪ ಅಳವಡಿಕೆ, ವಿಜಯಲಕ್ಷ್ಮೀ ರಸ್ತೆಯಲ್ಲಿರುವ ನವೀಕೃತಗೊಂಡ ಗಡಿಯಾರ ಕಂಬ,
ರಿಂಗ್ ರಸ್ತೆಯಲ್ಲಿರುವ ನೌಕರರ ಸಮುದಾಯದ ವೃತ್ತದಲ್ಲಿ ಅತ್ಯಾಧುನಿಕ ಗಡಿಯಾರ ಅಳವಡಿಕೆ, ಎಸ್. ಎಸ್. ಮಲ್ಲಿಕಾರ್ಜುನ್ ಸಾಗರದಲ್ಲಿ ಹೈಜೆಟ್ ಕಾರಂಜಿ.

ಒಟ್ಟು 72.85 ಕೋಟಿ ರೂಪಾಯಿ ಬಿಡುಗಡೆ. ಈ ಅನುದಾನದಲ್ಲಿ ರೈಲ್ವೆ ಮೇಲು ಸೇತುವೆಗೆ ಎರಡೂ ಬದಿಗೆ ಏರಿ ರಸ್ತೆ ನಿರ್ಮಾಣ, ಕುಂದುವಾಡ ಕೆರೆಗೆ ಹೈಜೆಟ್ ಕಾರಂಜಿ, ಹಳೇ ಪಿ. ಬಿ. ರಸ್ತೆಯ ವಿಭಜಕಕ್ಕೆ ಅಲಂಕಾರಿಕಾ
ವಿದ್ಯುತ್ ದೀಪ, ಕಾಂಕ್ರೀಟ್ ರಸ್ತೆ, ಒಳಚರಂಡಿ ನಿರ್ಮಾಣ ಇತ್ಯಾದಿ ಅಭಿವೃದ್ಧಿ ಕಾಮಗಾರಿ ಸೇರಿದಂತೆ ನೂರಾರು ಕಾರ್ಯಕ್ರಮಗಳು.

ರೈತರ ಪರ ನಿಲುವು:

ಭದ್ರಾ ಡ್ಯಾಂನ ನೀರು ನಾಲೆಯಲ್ಲಿ ನೀರು ಸ್ಥಗಿತಗೊಳಿಸಿದಾಗ ಮಲ್ಲಣ್ಣರ ಕಾರ್ಯಪರತೆ ಎಲ್ಲರ ಗಮನ ಸೆಳೆದಿತ್ತು. ಯಾವ ಪಕ್ಷದವರು ಬಂದರೂ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಕಷ್ಟ ಆಲಿಸುವ ಮಲ್ಲಿಕಾರ್ಜುನ್ ರ ಗುಣ ಮೆಚ್ಚುವಂಥದ್ದು. ನೀರು ಸ್ಥಗಿತಗೊಂಡ ತಕ್ಷಣ ರೈತರು ಎಸ್ ಎಸ್ ಎಂ ನಿವಾಸಕ್ಕೆ ಬಂದರು. ಕೂಡಲೇ ಆಗ ಜಲಸಂಪನ್ಮೂಲ ಸಚಿವರಾಗಿದ್ದ ಡಿ. ಕೆ. ಶಿವಕುಮಾರ್, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಮಧು ಬಂಗಾರಪ್ಪ, ನೀರಾವರಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರ ಜೊತೆ ಮಾತನಾಡಿ ಆನ್ ಅಂಡ್ ಆಫ್ ಮಾಡದಂತೆ ತಡೆದು ನೀರು ಹರಿಯುವಂತೆ ಮಾಡಿದವರು. ಇಂಥ ರಾಜಕೀಯ ಇಚ್ಚಾಶಕ್ತಿಯಿಂದಲೇ ಎಲ್ಲರ ಮನಸ್ಸು ಗೆದ್ದಿರುವುದು.

ರಾಜ್ಯ ಸರ್ಕಾರದಿಂದ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದದ್ದು ಇತಿಹಾಸದಲ್ಲೇ ಪ್ರಥಮ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸಚಿವರಾಗಿದ್ದ ಮಲ್ಲಿಕಾರ್ಜುನ್ ಅವರು ದಾವಣಗೆರೆ ಅಭಿವೃದ್ಧಿ ವಿಚಾರದಲ್ಲಿ ಪಟ್ಟುಬಿಡದ ತ್ರಿವಿಕ್ರಮರಂತೆ ಕೆಲಸ ಮಾಡಿಸಿಕೊಂಡು ಬರುತ್ತಿದ್ದರು. ಸ್ಮಾರ್ಟ್ ಸಿಟಿ ಆಗಿ ಆಯ್ಕೆಯಾಗಲು ಮಲ್ಲಣ್ಣ ಅವರ ದೂರದೃಷ್ಟಿ, ಆಡಳಿತದಲ್ಲಿದ್ದ ಜ್ಞಾನ, ಏನೇನೆಲ್ಲಾ ಅಂಶಗಳು ಬೇಕು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿ ಯಶಸ್ವಿಯಾದವರು.

ಮಹಾನಗರ ಪಾಲಿಕೆಯ ಇತಿಹಾಸದಲ್ಲಿ ಕಂಡು ಕೇಳರಿಯದಷ್ಟು ಮಲ್ಲಿಕಾರ್ಜುನ್ ಅವರು ಸಚಿವರಾಗಿದ್ದಾಗ ಕೆಲಸಗಳು ನಡೆದಿದ್ದವು. 2023ರಿಂದ 2026ರವರೆಗೆ ನಡೆದಿವೆ. ಇಪ್ಪತ್ತರಿಂದ ಮೂವತ್ತೈದು ವರ್ಷಗಳ ದೂರದೃಷ್ಟಿ ಇಟ್ಟುಕೊಂಡು ಒಳಚರಂಡಿ ನವೀಕರಣ, ಕಾಂಕ್ರಿಟ್ ರಸ್ತೆ ನಿರ್ಮಾಣ, ಯುಜಿಡಿ ಕಾಮಗಾರಿಗೆ ತಾಂತ್ರಿಕತೆ ಬಳಸಲಾಗಿತ್ತು. ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಈ ಎಲ್ಲಾ ಕೆಲಸ ಕಾರ್ಯಗಳ ಸಮರ್ಪಕ ನಿರ್ವಹಣೆಯಿಂದಲೇ ಪ್ರಥಮ ಹಂತದಲ್ಲಿ ದಾವಣಗೆರೆ ನಗರ
ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿದ್ದು. ಇದಕ್ಕೆಲ್ಲವೂ ಕಾರಣ ಮಲ್ಲಿಕಾರ್ಜುನ್ ಅವರೇ.

ಎಸ್. ಎಸ್. ಮಲ್ಲಿಕಾರ್ಜುನ್ ಅವರು ಮೊದಲಿನಿಂದಲೂ ಅಧಿಕಾರ ಇರಲಿ, ಇಲ್ಲದಿರಲಿ, ಜನಸೇವೆಯನ್ನೂ ಮಾತ್ರ ನಿಲ್ಲಿಸಿಯೇ ಇಲ್ಲ. ಕೊರೊನಾ ಸಂಕಷ್ಟದಲ್ಲಿ ದಾವಣಗೆರೆ ನಗರ ಜನರ ಪಾಲಿಗೆ ಆಪದ್ಭಾಂಧವರಾದರು. ಸಾವಿರಾರು ಮಂದಿಗೆ ಕೊರೊನಾ ಲಸಿಕೆ, ರೋಗಿಗಳಿಗೆ ಬೆಡ್, ಆಕ್ಸಿಜನ್ ಸೇರಿದಂತೆ ಎಲ್ಲಾ ರೀತಿಯಲ್ಲಿ ಸಹಾಯ ಮಾಡಿದವರು. ರಾತ್ರಿ ಎಷ್ಟು ಹೊತ್ತಿಗೆ ಯಾವ ಜಾತಿಯವರಾಗಲೀ, ಧರ್ಮದವರಾಗಲೀ ಕರೆ ಮಾಡಿದರೆ ಸ್ವೀಕರಿಸಿ ನೆರವು ನೀಡಿದ ಕರುಣಾಮಯಿ.

ಈಗ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ಮತ್ತೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದರಿಂದ ಮತ್ತೆ ದಾವಣಗೆರೆಯಲ್ಲಿ ಅಭಿವೃದ್ಧಿಯ ಶಕೆ ಮುಂದುವರಿಯಲಿದೆ. ಮಲ್ಲಣ್ಣ ಎಂದರೆ ಅದೊಂದು ಅದ್ಭುತ ಶಕ್ತಿ. ಏನಿದ್ದರೂ ನೇರ ಮಾತು. ಕೆಲಸ ಆಗಬೇಕೆಂದುಕೊಂಡರೆ ಅದು ಎಷ್ಟೇ ಕಷ್ಟ ಸಾಧ್ಯವಾದರೂ ಮಾಡಿಸಿಕೊಂಡುವ ಬರುವ ಛಾತಿ ಅವರಲ್ಲಿದೆ. ದಾವಣಗೆರೆ ಜಿಲ್ಲೆಯ ಜನರ ನೆಚ್ಚಿನ ಸಾಹುಕಾರರು, ಅಭಿವೃದ್ಧಿಯ ದಣಿವರಿಯದ ಧಣಿ ಸಚಿವರಾಗಿರುವುದು ನಮಗೆಲ್ಲಾ
ಸಂತಸದ ವಿಚಾರ.

ಕ್ರೀಡಾ ಪ್ರೋತ್ಸಾಹಕರು:

1999-2004ರ ಅವಧಿಯಲ್ಲಿ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರಾಗಿ ರಾಷ್ಟ್ರಮಟ್ಟದ ಪಂದ್ಯಾವಳಿಗಳನ್ನು ನಡೆಸಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡಿದರು.

ಬಡವರಿಗೆ ಸೂರು:

ಬಡಜನರಿಗೆ 15,000ಕ್ಕೂ ಹೆಚ್ಚು ಉಚಿತ ಮನೆ ನಿರ್ಮಿಸಿಕೊಟ್ಟಿದ್ದು ಹಾಗೂ ನೂತನ ಸಿಮೆಂಟ್ ರಸ್ತೆಗಳನ್ನು ನಿರ್ಮಿಸಿದ್ದು ಇವರ ಜನಪರ ಕಾಳಜಿಗೆ ಸಾಕ್ಷಿ. ಏಷ್ಯಾದ ಅತಿದೊಡ್ಡ ಗ್ಲಾಸ್ ಹೌಸ್, ದಾವಣಗೆರೆ ಸ್ಮಾರ್ಟ್ ಸಿಟಿ ಮತ್ತು ಜಲಸಿರಿ ಯೋಜನೆಗಳನ್ನು ತಂದ ಕೀರ್ತಿಯೂ ಮಲ್ಲಣ್ಣರಿಗೆ ಸಲ್ಲುತ್ತದೆ.

ಮುಂಬರುವ ಚುನಾವಣೆಗಳಿಗೆ ಕಾಂಗ್ರೆಸ್ ಗೆ ಬಂತು ಶಕ್ತಿ:

ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಗಳು ಎದುರಾಗಲಿವೆ. ಆಗ ಮಲ್ಲಿಕಾರ್ಜುನ್ ಅವರ ರಾಜಕೀಯ ತಂತ್ರಗಾರಿಕೆ, ಚಾಣಾಕ್ಷ ನಿರ್ಧಾರಗಳು ಖಂಡಿತವಾಗಿಯೂ ಸಹಾಯ ಮಾಡುತ್ತದೆ.

ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಗಳು, ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ಶಾಸಕ ಸಮರ್ಥ್ ಶಾಮನೂರು ಅವರ ನೇತೃತ್ವದಲ್ಲಿ ಕಾಂಗ್ರೆಸ್ ದಿಗ್ವಿಜಯ ಸಾಧಿಸುವುದು ಖಚಿತ. ಮತ್ತೊಮ್ಮೆ ಸಚಿವರಾಗಿರುವುದರಿಂದ ನೂರಾರು ಕೋಟಿ ರೂಪಾಯಿ ಅನುದಾನ ದಾವಣಗೆರೆ ಜಿಲ್ಲೆಗೆ ಬರುವ ಜೊತೆಗೆ ಅಭಿವೃದ್ಧಿ ಕಾರ್ಯಗಳು ಮತ್ತಷ್ಟು ವೇಗ ಪಡೆದುಕೊಳ್ಳುವುದು ಸ್ಪಷ್ಟ.

 

Share

Leave a comment

Leave a Reply

Your email address will not be published. Required fields are marked *

Related Articles