Home ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ನಿರ್ದೇಶಕರಾಗಿ ದಾವಣಗೆರೆಯ ಕಾಂಗ್ರೆಸ್ ಯುವ ಮುಖಂಡ ಲಿಯಾಖತ್ ಅಲಿ ನೇಮಕ
Homeದಾವಣಗೆರೆಬೆಂಗಳೂರು

ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ನಿರ್ದೇಶಕರಾಗಿ ದಾವಣಗೆರೆಯ ಕಾಂಗ್ರೆಸ್ ಯುವ ಮುಖಂಡ ಲಿಯಾಖತ್ ಅಲಿ ನೇಮಕ

Share
ದಾವಣಗೆರೆ
Share

ದಾವಣಗೆರೆ: ಕಾಂಗ್ರೆಸ್ ಮುಖಂಡರಾದ ಎಂ.ಕೆ. ಲಿಯಾಖತ್ ಅಲಿ ಅವರು ಕರ್ನಾಟಕ ಸರ್ಕಾರದ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಲಿಯಾಖತ್ ಅಲಿ ಅವರು ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸಿದ್ದು, ದಾವಣಗೆರೆ ಉತ್ತರ ವಲಯದ ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ, ಅಸಂಘಟಿತ ವಿಭಾಗದ ಕಾರ್ಯಾಧ್ಯಕ್ಷರಾಗಿ ಹಾಗೂ ಜವಹರಬಾಲ್ ಮಂಚ್ ರಾಜ್ಯ ಸಂಚಾಲಕರಾಗಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದರು.

ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಮತ್ತು ಶಾಸಕ ಸಮರ್ಥ್ ಶಾಮನೂರು ಅವರ ಶಿಫಾರಸಿನ ಮೇರೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ತಮ್ಮನ್ನು ನೇಮಕ ಮಾಡಿದ್ದಾರೆ. ಈ ಮಹತ್ವದ ಜವಾಬ್ದಾರಿ ದೊರಕಲು ಸಹಕರಿಸಿದ ಎಲ್ಲರಿಗೂ ಲಿಯಾಖತ್ ಅಲಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

Share
Related Articles