Home ದಾವಣಗೆರೆ ಎಲ್ಲಾ ಗೊತ್ತಿದ್ದರೂ ಹೈಕಮಾಂಡ್‌ ಎಸ್. ಎಸ್. ಮಲ್ಲಿಕಾರ್ಜುನ್ ಮೇಲೆ ಅವಲಂಬಿತ, ನಾನು ಮಾತನಾಡಿದ್ರೆ ಏನೂ ಪ್ರಯೋಜನ ಆಗದು: ಕೈ ಶಾಸಕ ಶಿವಗಂಗಾ ಬಸವರಾಜ್ ಸ್ಫೋಟಕ ಹೇಳಿಕೆ!
ದಾವಣಗೆರೆನವದೆಹಲಿಬೆಂಗಳೂರು

ಎಲ್ಲಾ ಗೊತ್ತಿದ್ದರೂ ಹೈಕಮಾಂಡ್‌ ಎಸ್. ಎಸ್. ಮಲ್ಲಿಕಾರ್ಜುನ್ ಮೇಲೆ ಅವಲಂಬಿತ, ನಾನು ಮಾತನಾಡಿದ್ರೆ ಏನೂ ಪ್ರಯೋಜನ ಆಗದು: ಕೈ ಶಾಸಕ ಶಿವಗಂಗಾ ಬಸವರಾಜ್ ಸ್ಫೋಟಕ ಹೇಳಿಕೆ!

Share
ಶಿವಗಂಗಾ ಬಸವರಾಜ್
Share

ದಾವಣಗೆರೆ: ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಯಾವ ತಾಲೂಕಿಗೆ ಭೇಟಿ ನೀಡಿದ್ದಾರೆ? ಮಾತನಾಡುವುದು ಸೂಕ್ತ ಅಲ್ಲ. ಈಗ ಮಾತ್ರ ಈ ಪರಿಸ್ಥಿತಿ ಅಲ್ಲ. ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಂದಿನ ವ್ಯವಸ್ಥೆ, ಪರಿಸ್ಥಿತಿ ಆಗಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ಮಾತನಾಡಬಹುದಿತ್ತು. ಈ ವಿಚಾರದ ಬಗ್ಗೆ ಹೆಚ್ಚು ಮಾತನಾಡುವುದು ಸೂಕ್ತ ಅಲ್ಲ. ನಾನು ಮಾತನಾಡಿದರೆ ಸಚಿವರು ಹಾಗೂ ನನ್ನ ನಡುವೆ ವೈಮನಸ್ಸು ಮೂಡುವುದು ಅಷ್ಟೇ. ಬೇರೆ ಏನೂ ಪ್ರಯೋಜನ ಆಗದು ಚನ್ನಗಿರಿ ಶಾಸಕ ಶಿವಗಂಗಾ ವಿ. ಬಸವರಾಜ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ತಲಾತಲಾಂತರದಿಂದ ನಡೆದುಕೊಂಡು ಬಂದಿದೆ. ಹೈಕಮಾಂಡ್ ಅವರಿಗೆ ಅವಲಂಬಿತವಾಗಿದೆ. ನಾವು ನೀವು ಏನು ಮಾತನಾಡಿದರೆ ಉಪಯೋಗವಿಲ್ಲ. ಫಲಿತಾಂಶ ಬರುವುದಿದ್ದರೆ ಮಾತನಾಡಬಹುದು. ಡಿಸಿಸಿ ಬ್ಯಾಂಕ್ ಸೇರಿದಂತೆ ಬೇರೆ ಬೇರೆ ವಿಚಾರದಲ್ಲಿ ಮಾತನಾಡಿದ್ದೆ. ನೋವಾದಾಗ ಮಾತನಾಡುವುದು ಸಹಜ ಪ್ರಕ್ರಿಯೆ. ಹೈಕಮಾಂಡ್, ಸಿಎಂ ಮತ್ತು ಬಿ. ಕೆ. ಹರಿಪ್ರಸಾದ್ ಅವರ ಗಮನದಲ್ಲಿಯೂ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಕಾರ್ಯವೈಖರಿ ಬಗ್ಗೆ ಗೊತ್ತಿದೆ. ನಾನು ವಿರೋಧಿಸಿದರೂ ಏನು ಆಗಲ್ಲ. ನನ್ನ ಮತ್ತು ಮಲ್ಲಿಕಾರ್ಜುನ್ ನಡುವೆ ವೈಮನಸ್ಸು ಬರಬಹುದು ಅಷ್ಟೇ ಎಂದು ತಿಳಿಸಿದರು.

ಶಾಸಕರು ನನ್ನ ಜೊತೆಗೆ ಇದ್ದಾರೆ. ದೇವೇಂದ್ರಪ್ಪರ ನೋವಿಗೆ ಸ್ಪಂದಿಸಿದ್ದೇನೆ, ನೋವಿಗೆ ಫಲ ಕೊಡಿಸುತ್ತೇನೆ. ಉಸ್ತುವಾರಿ ಸಚಿವರೊಬ್ಬರೇ ಬೇಕು ಎಂದೇನಿಲ್ಲ. ನಾಲ್ವರು ಶಾಸಕರು ಜೊತೆಗಿದ್ದೇವೆ. ನೀವು ಮಾಧ್ಯಮದಲ್ಲಿ ನೋಡಿದ್ದೀರಲ್ವಾ. ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳೇ ಖುದ್ದು ಕರೆ ಮಾಡಿ ಏನೇ ಕೆಲಸ ಇದ್ದರೂ ಬಾ ಎಂದು ದೇವೇಂದ್ರಪ್ಪರಿಗೆ ಭರವಸೆ ನೀಡಿದ್ದಾರೆ. ಅವರ ಕೆಲಸ ನಾನು ನಿಂತು ಮಾಡಿಸಿಕೊಡುತ್ತೇನೆ ಎಂದು ಶಿವಗಂಗಾ ಬಸವರಾಜ್ ಹೇಳಿದರು.

ನೀವು ಸಚಿವರಿಗೆ ಕೇಳಬೇಕು ಅಲ್ವ. ಇವತ್ತಿನವರೆಗೆ ನಮ್ಮ ತಾಲೂಕಿಗೆ ಬಂದಿಲ್ಲ. ನಾನು ಎಷ್ಟೇ ವಿರೋಧ ಮಾತನಾಡಿದರೂ ಪ್ರಯೋಜನ ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Share

Leave a comment

Leave a Reply

Your email address will not be published. Required fields are marked *