ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: ನಾಳೆ ಎಲ್ಲೆಲ್ಲಿ ದಾವಣಗೆರೆಯಲ್ಲಿ ಕರೆಂಟ್ ಇರೋದಿಲ್ಲ ಗೊತ್ತಾ…? ಗಮನಿಸಿ

On: October 18, 2023 1:56 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:18-10-2023

ದಾವಣಗೆರೆ: 66/11 ಕೆ.ವಿ. ದಾವಣಗೆರೆ (Davanagere) ವಿದ್ಯುತ್ ವಿತರಣಾ ಕೇಂದ್ರದ ಫೀಡರ್‍ನಿಂದ 24*7 ಜಲಸಿರಿ ಯೋಜನೆಯಡಿ ನಿರಂತರ ಶುದ್ದಕುಡಿಯುವ ಯೋಜನೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಕ್ಟೋಬರ್ 19 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

Read Also This Story:

Pramod Muthalik: ಭಯೋತ್ಪಾದಕನ ರೀತಿ ನನ್ನನ್ನು ಬಂಧಿಸಿದ್ರು, ರಾಗಿಗುಡ್ಡಕ್ಕೆ ನಿರ್ಬಂಧ ಪ್ರಶ್ನಿಸಿ ಹೈಕೋರ್ಟ್ ಗೆ ಹೋಗಿ ತಡೆಯಾಜ್ಞೆ ತರುತ್ತೇನೆ ಎಂದಿದ್ಯಾಕೆ ಪ್ರಮೋದ್ ಮುತಾಲಿಕ್..?

ಎಂ.ಸಿ.ಸಿ.ಬಿ ಎಫ್.2 ಫೀಡರ್ ವ್ಯಾಪ್ತಿಯ ಎಸ್.ಎಸ್ ಲೇಔಟ್ ಎ.ಬ್ಲಾಕ್, ಕುವೆಂಪು ನಗರ, ಎಂ.ಸಿ.ಸಿ.ಬಿ ಬ್ಲಾಕ್, ಸಿದ್ದವೀರಪ್ಪ ಬಡಾವಣೆ, ಶಾಮನೂರು ರೋಡ್, ಬಿ.ಐ.ಇ.ಟಿ ರೋಡ್, ಗ್ಲಾಸ್ ಹೌಸ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜನ್ ಇಂಟರ್ ನ್ಯಾಷನಲ್ ಸ್ಕೂಲ್ ಮಾನ್ಯತೆ ವಾಪಸ್: 

ಎಂಪವರ್ ಎಜುಕೇಷನ್(ರಿ) ದಾವಣಗೆರೆ ಇವರ ಆಶ್ರಯದಲ್ಲಿನ ವಿಜನ್ ಇಂಟರ್ ನ್ಯಾಷನಲ್ ಸ್ಕೂಲ್, ಸವಣೂರು ಪ್ಲಾಜಾ ಹತ್ತಿರ, ಪಿ.ಬಿ.ರಸ್ತೆ, ದಾವಣಗೆರೆ. ಉತ್ತರವಲಯ ಈ ಪೂರ್ವ ಪ್ರಾಥಮಿಕ ಶಾಲೆಯ ಮಾನ್ಯತೆಯನ್ನು ಹಿಂಪಡೆಯಲಾಗಿದೆ.

ಈ ಶಾಲೆಯು ಇಲಾಖೆಯಿಂದ ಅನುಮತಿ ಪಡೆದ ಸ್ಥಳದಲ್ಲಿ ನಡೆಸದೇ ಅನಧೀಕೃತವಾಗಿ ಬೇರೆ ಸ್ಥಳದಲ್ಲಿ ನಡೆಸುತ್ತಿರುವ ಹಾಗೂ ಈ ಶಾಲೆಯ ಕಟ್ಟಡದ ಮೇಲೆ ವಿದ್ಯುತ್ ಹೈಟೆನ್ಸನ್ ತಂತಿ ಹಾದು ಹೋಗಿದ್ದು ಹಾಗೂ ಮಹಾನಗರ ಪಾಲಿಕೆಯಿಂದ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯದೇ ಕಟ್ಟಡ ನಿರ್ಮಾಣ ಮಾಡಿರುವ ಪ್ರಯುಕ್ತ ಈ ಶಾಲೆಯ ಮಾನ್ಯತೆಯನ್ನು ಹಿಂಪಡೆಯಲಾಗಿದೆ.

ವಿದ್ಯಾರ್ಥಿಗಳ ಪೋಷಕರು ಈ ಶಾಲೆಗೆ ದಾಖಲಾತಿ ಮಾಡದಂತೆ ಹಾಗೂ ಈಗಾಗಲೇ ದಾಖಲಾತಿ ಹೊಂದಿರುವ ಮಕ್ಕಳನ್ನು ಸಂಬಂಧಿಸಿದ ಪೋಷಕರು ಸಮೀಪದ ಅಧಿಕೃತ ಶಾಲೆಗೆ ದಾಖಲಾತಿ ಮಾಡುವಂತೆ ಈ ಮೂಲಕ ಪೋಷಕರಿಗೆ ತಿಳಿಸಲಾಗಿದೆ ಎಂದು ಉತ್ತರವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment