Home ದಾವಣಗೆರೆ ದಾವಣಗೆರೆ ಮಹಿಳಾ ನಿಲಯದ ಮೂವರು ಯುವತಿಯರಿಗೆ ಕಲ್ಯಾಣ ಭಾಗ್ಯ; ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಅಂತರ್ಧರ್ಮೀಯ ವಿವಾಹ!
ದಾವಣಗೆರೆಬೆಂಗಳೂರು

ದಾವಣಗೆರೆ ಮಹಿಳಾ ನಿಲಯದ ಮೂವರು ಯುವತಿಯರಿಗೆ ಕಲ್ಯಾಣ ಭಾಗ್ಯ; ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಅಂತರ್ಧರ್ಮೀಯ ವಿವಾಹ!

Share
ದಾವಣಗೆರೆ
Share

ದಾವಣಗೆರೆ:  ದಾವಣಗೆರೆಯ ಮಹಿಳಾ ನಿಲಯದಲ್ಲಿ 3 ಜನ ಅನಾಥ ಯುವತಿಯರು ಪರಸ್ಪರ ಒಪ್ಪಿಗೆ ಮೇರೆಗೆ ಮದುವೆ ಮಾಡಿಸಲಾಯಿತು, ಅದರಲ್ಲಿ ಮುಸ್ಲಿಂ ಜನಾಂಗದ ಯುವತಿ ಹಾಗೂ ಹಿಂದೂ ಯುವಕ ಇಬ್ಬರೂ ಪರಸ್ಪರ ಒಪ್ಪಿ ಸಂತೋಷದಿಂದ ಮದುವೆಯಾಗುವ ಮೂಲಕ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ  ಗಂಗಾಧರ ಸ್ವಾಮಿ ಜಿ. ಎಂ ಅವರು ತಿಳಿಸಿದರು.

ದಾವಣಗೆರೆ  ಶ್ರೀರಾಮನಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಮಹಿಳಾ ನಿಲಯ, ಶ್ರೀರಾಮನಗರ, ದಾವಣಗೆರೆ ಇವರ ಸಂಯುಕ್ತಾಶ್ರಯದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದಾವಣಗೆರೆಯ ಮಹಿಳಾ ನಿಲಯದಲ್ಲಿ ಸುಮಾರು 43 ಅನಾಥ ಮಕ್ಕಳಿದ್ದು, ಪೋಷಕರು ಅಥವಾ ತಂದೆ-ತಾಯಿ ಇಲ್ಲದ ಹಾಗೂ ಕೆಲವರಲ್ಲಿ ಇದ್ದರೂ ಕೂಡ ಪಾಲಕರು ನಿರ್ಲಕ್ಷ್ಯ ಮಾಡಿರುವ ಮೂರು ಮಕ್ಕಳ ಮದುವೆ ಯನ್ನು ಇಂದು ನೆರವೇರಿಸಿಕೊಡಲಾಗಿದೆ.   ನಮ್ಮ  ಅಧಿಕಾರಿಗಳು ವದು ಮತ್ತು ವರರ ಬಗ್ಗೆ ವಿಚಾರಿಸಿ ಅವರ ಎಲ್ಲಾ ದಾಖಲಾತಿಗಳ ಪೊಲೀಸ್ ಪರಿಶೀಲನೆ ನಡೆಸಿ ತೃಪ್ತಿಕರವಾದ ಮಾಹಿತಿ ಪಡೆದು ಒಪ್ಪಿಗೆ ಸೂಚಿಸಿದ ಮೇರೆಗೆ ಈ ಮದುವೆಗಳನ್ನು ಮಾಡಿಸಲಾಗಿದೆ. ಈ ಮದುವೆಯಾದ ಮೂರು ಜನ ವರರು ಸ್ಥಿತಿವಂತರು, ಆಸ್ತಿ ಹಾಗೂ ರೈತ ಕುಟುಂಬಗಳಿಗೆ ಸೇರಿದವರಾಗಿದ್ದಾರೆ ಎಂದರು.

ವಧು ವರರ ವಿವರ: 

1.ಪೂಜಾ ಕೆ. (ರಾಜ್ಯ ಮಹಿಳಾ ನಿಲಯ ದಾವಣಗೆರೆ ಸಂಸ್ಥೆಯ ನಿವಾಸಿ) ಹಾಗೂ ಸುರೇಶ್ ಆರ್.ಎಸ್. (ತುಮಕೂರು ಜಿಲ್ಲೆ, ಮಧುಗಿರಿ ತಾಲೂಕು), 2.ಸುಪ್ರಿಯಾ ಬೆಳಗೇರಿ (ರಾಜ್ಯ ಮಹಿಳಾ ನಿಲಯ ದಾವಣಗೆರೆ ಸಂಸ್ಥೆಯ ನಿವಾಸಿ) ಹಾಗೂ ಮಧುಸೂದನ. ತೇ (ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲೂಕು) , 3.ಅಜಿತಾ ಸಬಾನಾ (ರಾಜ್ಯ ಮಹಿಳಾ ನಿಲಯ ದಾವಣಗೆರೆ ಸಂಸ್ಥೆಯ ನಿವಾಸಿ) ಹಾಗೂ ಸುರೇಶ್ ಎಂ ಮತ್ತೂರ (ಹಾವೇರಿ ಜಿಲ್ಲೆ, ರಾಣೆಬೆನ್ನೂರು)

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಹೆಚ್. ಟಿ, ಜಿಲ್ಲಾ ಹಿರಿಯ ನ್ಯಾಯದೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶರು ಗೌರವನ್ವಿತ  ನ್ಯಾ.ಸಿ.ರಂಗೇಗೌಡ  , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ರಾಜಾನಾಯ್ಕ್ ಕೆ. ಎಸ್, ಜಿಲ್ಲಾ ರಾಜ್ಯ ಮಹಿಳಾ ನಿಲಯದ ಅಧೀಕ್ಷಕರು ಭಾರತಿ ಹಿಂಡೇರ, ಮತ್ತು ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಅಧಿಕಾರಿಗಳು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles