SUDDIKSHANA KANNADA NEWS/ DAVANAGERE/ DATE:16-10-2023
ದಾವಣಗೆರೆ: ದಾವಣಗೆರೆ (Davanagere) ನಗರದ ಬಸವರಾಜ ಪೇಟೆ ಶ್ರೀಗಣಪತಿ ಮೂರ್ತಿ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಆಸ್ಪತ್ರೆ ಎದುರು ಅತಿ ಹೆಚ್ಚಿನ ಶಬ್ದ ಮಾಡಿ ಶಬ್ದ ಮಾಲಿನ್ಯ ನಿಯಂತ್ರಣ ನಿಯಮದ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಮುಸ್ಲಿಂ ಒಕ್ಕೂಟವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರಿಗೆ ಮನವಿ ಸಲ್ಲಿಸಿದೆ.
ಕೆಲ ಕಿಡಿಗೇಡಿಗಳು ಗಲಾಟೆಗೆ ಯತ್ನಿಸಿದ್ದು, ಇಂಥವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸುದ್ದಿಯನ್ನೂ ಓದಿ:
ಸ್ಕಾಚ್ ವಿಸ್ಕಿ (Scotch whisky) ಬಗ್ಗೆ ನಿಮಗೆಷ್ಟು ಗೊತ್ತು… ದೇಸಿ ಬ್ರಾಂಡ್‌ಗಳ ಭಾರೀ ಬೆಳವಣಿಗೆ: ಭಾರತದ ಸಿಂಗಲ್-ಮಾಲ್ಟ್ ಉದ್ಯಮದ ಏರಿಕೆ
ಬಸವರಾಜ ಪೇಟೆಯ ಮಹಾರಾಜ ಯುವಕರ ಸಂಘ ದವರು ಪ್ರತಿಷ್ಠಾಪನೆ ಮಾಡಿದ್ದ ಶ್ರೀ ಗಣಪತಿ ಮೂರ್ತಿ ವಿಸರ್ಜನೆ ಕಾರ್ಯಕ್ರಮ ಅ. 12ರಂದು ಇತ್ತು. ಅಂದು ಸಂಜೆ 5 ಘಂಟೆ ಇಂದ ಬೃಹತ್ ಗಾತ್ರದ ಡಿ.ಜೆ ಸಿಸ್ಟಮ್ ಅಳವಡಿಸಿಕೊಂಡು ಬೇರೆ ಸಮುದಾಯಗಳಿಗೆ ನೋವು ಉಂಟಾಗುವ ರೀತಿ ಹಾಡುಗಳು ಹಾಕಿ ಶಬ್ದ ಮಾಲಿನ್ಯ ಮಾಡುತ್ತಿದ್ದರು. ರಾತ್ರಿ ಸುಮಾರು
7.30 ಗಂಟೆಯ ಹೊತ್ತಿಗೆ ಹಳೆ ಬೇತೂರು ರಸ್ತೆಯ ಮದಿನಾ ಆಟೋರಿಕ್ಷಾ ನಿಲ್ದಾಣ ಹತ್ತಿರ ಇರುವ ನಾಸಿರ್ ಮೆಡಿಕಲ್ ಶಾಪ್ ಪಕ್ಕದಲ್ಲಿ ಮಕ್ಕಳ ಆಸ್ಪತ್ರೆ ಮುಂದೆ ಮೆರವಣಿಗೆ ಬಂದು ನಿಂತಿತು. ಡಿ. ಜೆ ಯಲ್ಲಿ ಮತ್ತೆ ಅದೇ ರೀತಿ ಯ ಹಾಡು ಹಾಕಿದ್ದಾರೆ. ಆಸ್ಪತ್ರೆ ಗೆ ಬಂದ ಮಕ್ಕಳು, ಪೋಷಕರು, ಚಿಕ್ಕ ಮಕ್ಕಳು ಡಿ. ಜೆ ಅತಿ ಹೆಚ್ಚಿನ ಶಬ್ದದಿಂದ ಗಾಬರಿ ಆದರು. ಈ ಕಾರಣದಿಂದ
ಮಾನವೀಯತೆ ದೃಷ್ಟಿ ಯಿಂದ ಆಸ್ಪತ್ರೆ ಇದೆ, ಡಿ. ಜೆ ಬಂದ್ ಮಾಡಲು ಹೇಳಿದರು.
ಆದರೂ ಕೇಳದ ಕೆಲ ಯುವಕರು ಹಠಕ್ಕೆ ಬಿದ್ದು ಡಿ. ಜೆ ಯಲ್ಲಿ ಹಾಡುಗಳ ಶಬ್ದ ಮತ್ತೆ ಜಾಸ್ತಿ ಮಾಡಿದರಿಂದ ಇದು ಸರಿಯಲ್ಲ ಎಂದು ವಾದ ವಿವಾದ ನಡೆದಿರುತ್ತದೆ. ತಕ್ಷಣ ಕ್ಕೆ ಪೋಲಿಸರು ಸ್ಥಳಕ್ಕೆ ಆಗಮಿಸಿ ಎರಡು ಕಡೆಯವರಿಗೂ ಸಮಜಾಯಿಷಿ ಕೇಳಿದರೆ ಸ್ವಲ್ಪ ಮುಂದೆ ಹೋಗಿ ಹಾಸಬಾವಿ ಸರ್ಕಲ್ ನಲ್ಲಿ ಕೆಲ ಕಿಡಿಗೇಡಿಗಳು ನಮ್ಮ ಧರ್ಮ ಕ್ಕೆ ಹಾಗೂ ನಮ್ಮ ಸಮುದಾಯಕ್ಕೆ ಕೆಟ್ಟ ಕೆಟ್ಟದಾಗಿ ಬೈದು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಹಾಕಿದ್ದಾರೆ. ಶಬ್ದ ಮಾಲಿನ್ಯ ನಿಯಂತ್ರಣ ನಿಯಮದ ಉಲ್ಲಂಘನೆ ಮಾಡಿ ಕೋಮು ಹಿಂಸಾಚಾರ ಮಾಡಲು ತಯಾರಿ ಮಾಡಿಕೊಂಡು ಬಂದಿದ್ದ ಆರೋಪದ ಮೇಲೆ ಕಿಡಿಗೇಡಿಗಳನ್ನು ಗುರುತಿಸಿ ತಕ್ಷಣ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಆದ್ರೆ, ಅ. 13ರಂದು ಪ್ರತಿಭಟನೆ ಮಾಡಿ ತಮಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಅವರ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ದಾವಣಗೆರೆ ಮುಸ್ಲಿಂ ಒಕ್ಕೂಟ ದ ಸಂಚಾಲಕರಾದ ಟಿ.ಅಸ್ಗರ್, ಮಹಮ್ಮದ್ ಶೋಯೇಬ್, ಇಬ್ರಾಹಿಂ ಖಲೀಲವುಲ್ಲಾ, ನೂರ್ ಅಹ್ಮದ್, ಹಾಕಿ ಸೈಯದ್ ಆರೀಫ್,. ಶಾನವಜ್ ಖಾನ್, ಡಿ. ಸೈಯದ್ ರಿಯಾಜ್, ಮನ್ಸೂರ್, ನವೀದ್, ಅಯೂಬ್ ಖಾನ್, ಹೈದರ್ ಅಲಿ, ಮೆಹಬೂಬ್ ಬೀಡ, ಖಲೀಂವುಲ್ಲಾ ಖಾನ್, ಖಾಸಿಂ ಸಾಬ್, ಫಕೃಧ್ದೀನ್, ಎನ್. ಉಸ್ಮಾನ್ ಹಾಗೂ ಇತರರು ಉಪಸ್ಥಿತರಿದ್ದರು.