ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಎಂಟನೇ ಸುತ್ತಿನಲ್ಲಿ 1073 ಮತಗಳ ಮುನ್ನಡೆ ಗಳಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು 3945 ಮತಗಳ ಮುನ್ನಡೆ ಸಾಧಿಸಿದ್ದಾರೆ.
9ನೇ ಸುತ್ತಿನ ಮತ ಎಣಿಕೆ ಮುಗಿದಿದ್ದು, ಆರಂಭದಲ್ಲಿ ಏಳು ಸುತ್ತುಗಳಲ್ಲಿ ಹಿನ್ನೆಡೆಯಲ್ಲಿದ್ದ ಸಮರ್ಥ್ ಶಾಮನೂರು 8 ಮತ್ತು 9 ನೇ ಸುತ್ತಿನಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈ ಮೂಲಕ ಮತ್ತೆ ಹಾವು ಏಣಿ ಆಟ ಮುಂದುವರಿದಿದೆ.
ಅಂಚೆ ಮತಗಳಲ್ಲಿ ಮುನ್ನಡೆ ಸಾಧಿಸಿದ್ದ ಸಮರ್ಥ್ ಶಾಮನೂರು ಬಳಿಕ ಹಿನ್ನೆಡೆ ಅನುಭವಿಸಿದ್ದರು. ಸತತ ಏಳು ಸುತ್ತುಗಳಲ್ಲಿ ಮುನ್ನಡೆ ಸಾಧಿಸಿದ್ದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪರು ಎಂಟು ಮತ್ತು 9 ನೇ ಸುತ್ತಿನಲ್ಲಿ ಹಿನ್ನೆಡೆ ಅನುಭವಿಸಿದ್ದಾರೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯಲ್ಲಿ ಮುನ್ನಡೆ ಮತ್ತು ಹಿನ್ನೆಡೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಅನುಭವಿಸಿದ್ದಾರೆ. ಆದರೆ ಸದ್ಯಕ್ಕೆ ಕಾಂಗ್ರೆಸ್ ಮುನ್ನಡೆಯಲ್ಲಿದೆ. ಇದು ಕಾಂಗ್ರೆಸ್ ಕಾರ್ಯಕರ್ತರ ಸಂತಸಕ್ಕೆ ಕಾರಣವಾಗಿದೆ. ಆರಂಭದ ಏಳು ಸುತ್ತುಗಳಲ್ಲಿ ಹಿನ್ನೆಡೆ ಹೊಂದಿದ್ದರಿಂದ ಕಾಂಗ್ರೆಸ್ ನಲ್ಲಿ ತಳಮಳಕ್ಕೆ ಕಾರಣವಾಗಿತ್ತು. ಸದ್ಯಕ್ಕೆ ಅಲ್ಪ ಪ್ರಮಾಣದಲ್ಲಿ ಮುನ್ನಡೆ ಸಾಧಿಸಿರುವುದು ಸಮಾಧಾನ ತಂದಿದೆ.
- Congress vs BJP Davanagere
- Davanagere By-election 9th Round
- Davanagere Election Counting
- Davanagere South Bypoll Results
- Karnataka Assembly Bypolls 2026.
- Samarth Shamanur Lead
- Srinivas Dasakariyappa Trail
- ಕರ್ನಾಟಕ ಉಪಚುನಾವಣೆ 2026
- ಕಾಂಗ್ರೆಸ್ ಮುನ್ನಡೆ
- ದಾವಣಗೆರೆ
- ದಾವಣಗೆರೆ ದಕ್ಷಿಣ ಉಪಚುನಾವಣೆ
- ದಾವಣಗೆರೆ ರಾಜಕೀಯ ಸುದ್ದಿ
- ಬಿಜೆಪಿ ಹಿನ್ನೆಡೆ
- ಮತ ಎಣಿಕೆ ಫಲಿತಾಂಶ
- ಶ್ರೀನಿವಾಸ್ ದಾಸಕರಿಯಪ್ಪ ಹಿನ್ನಡೆ
- ಸಮರ್ಥ್ ಶಾಮನೂರು ಮುನ್ನಡೆ





Leave a comment