ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: ಅಪ್ಪನ ಬಗ್ಗೆ ಸಾಫ್ಟ್ ಕಾರ್ನರ್, ಮಗನ ವಿರುದ್ಧ ಕೌಂಟರ್ ಮೇಲೆ ಕೌಂಟರ್: ಏಕವಚನದಲ್ಲೇ ಎಸ್ ಎಸ್ ಎಂ ವಿರುದ್ಧ ಬೆಂಕಿಯುಗುಳಿದ ಸಿದ್ದೇಶ್ವರ…!

On: July 14, 2023 3:57 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:14-07-2023

ದಾವಣಗೆರೆ (Davanagere) : ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪರು ನಮ್ಮ ಮಾವನವರು. ಅವರು ಹಿರಿಯರು. ಅವರು ನನಗೆ ತಂದೆ ಸಮಾನ. ಎಸ್. ಎಸ್. ಬಗ್ಗೆ ತುಂಬಾನೇ ಗೌರವ ಇದೆ  ಎಂದು ಹೇಳುವ ಮೂಲಕ ಸಂಸದ ಜಿ. ಎಂ. ಸಿದ್ದೇಶ್ವರ ಸಾಫ್ಟ್ ಕಾರ್ನರ್ ಮಾತನಾಡಿದರೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ವಿರುದ್ಧ ಬೆಂಕಿಯುಗುಳಿದ್ದಾರೆ.

ದಾವಣಗೆರೆಯ ಸಂಸದರ ಕಚೇರಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಂಸ್ಕಾರ ಇದ್ದವರು ನನ್ನ ಬಗ್ಗೆ ಮಾತನಾಡಿದರೆ ಪ್ರತಿಕ್ರಿಯೆ ನೀಡುತ್ತೇನೆ. ಇಲ್ಲದಿದ್ದರೆ ನಾನ್ಯಾಕೆ ಏನನ್ನೋ ಮಾತನಾಡಬೇಕು. ಶಾಮನೂರು ಶಿವಶಂಕರಪ್ಪರು ಮಾವನವರು. ಹಿರಿಯರು, ಅವರು ತಂದೆ ಸಮಾನ. ಅವರ ಬಗ್ಗೆ ತುಂಬಾನೇ ಗೌರವವಿದೆ. ಸಂಸ್ಕಾರ ಇದ್ದವರು ನನ್ನ ಬಗ್ಗೆ ಮಾತನಾಡಿದರೆ ಪ್ರತಿಕ್ರಿಯಿಸುತ್ತೇನೆ. ಇಲ್ಲದಿದ್ರೆ ಇಲ್ಲ. ಅನಿವಾರ್ಯ ಎಂಬ ಕಾರಣಕ್ಕೆ ಮಾತನಾಡುತ್ತಿದ್ದೇನೆ. ಇಲ್ಲದಿದ್ದರೆ ಪ್ರತಿಕ್ರಿಯೆ ನೀಡುತ್ತಿರಲಿಲ್ಲ ಎಂದು ಮಲ್ಲಿಕಾರ್ಜುನ್ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನೂ ಓದಿ: 

Bharatiya Janata Party Tweet:ಸಂವಿಧಾನದ ಮೇಲೆ ಗೌರವವಿದ್ದರೆ ರಾಹುಲ್ ಗಾಂಧಿ ವಿರುದ್ಧ ಸಿದ್ದು ಅಂಡ್ ಟೀಂ ಪ್ರೊಟೆಸ್ಟ್ ಮಾಡ್ಬೇಕಿತ್ತು: ಬಿಜೆಪಿ ಟ್ವೀಟಾಸ್ತ್ರ

ಆನೆ ಹೋಗ್ತಾ ಇರುತ್ತೆ. ನಾಯಿ ಬೊಗಳುತ್ತಾ ಇರುತ್ತೆ. ಬೊಗಳೋ ನಾಯಿ ಕಚ್ಚಲ್ಲ, ಕಚ್ಚೋ ನಾಯಿ ಬೊಗಳಲ್ಲ. ಆನೆ ತೂಕ ಆನೆಗೆ, ನಾಯಿ ತೂಕ ನಾಯಿಗೆ. ಈ ಹಿಂದೆಯೂ ಹೇಳಿದ್ದೇನೆ. ಈಗಲೂ ಹೇಳುತ್ತೇನೆ. ಮಲ್ಲಿಕಾರ್ಜುನ್ ಗೆ ನನ್ನ ಮೇಲೆ ಬಹಳ ಪ್ರೀತಿ. ಹಾಗಾಗಿ, ಏಕವಚನದಲ್ಲಿ ಮಾತನಾಡುತ್ತೇನೆ. ಭಗವಂತ ನನಗೆ ಒಳ್ಳೆಯದು ಮಾಡಿದ್ದಾನೆ. ಏನೇ ಪ್ರಶ್ನೆ ಮಾಡಿದರೂ ಉತ್ತರ ಕೊಡಲು ಸಿದ್ಧನಿದ್ದೇನೆ ಎಂದು ಲೇವಡಿ ಮಾಡಿದರು.

ಎಸ್. ಎಸ್. ಗೆ ಸಾಲ ಕೊಟ್ಟಿದ್ದೆ:

1994ರಲ್ಲಿ ನಾನೇ ಅವರಿಗೆ ಸಾಲ ಕೊಟ್ಟಿದ್ದೆ. ಶಿವಶಂಕರಪ್ಪ ಅವರನ್ನೇ ಬೇಕಾದರೆ ಕೇಳಿ, ಕೊಟ್ಟಿದ್ದಾರೋ ಇಲ್ಲವೋ ಅಂತಾ. ಲಕ್ಷ್ಮೀ ಫ್ಲೋರ್ ಮಿಲ್ ಖರೀದಿ ಮಾಡುವಾಗ ಸಾಲ ಕೊಟ್ಟಿದ್ದೆ. 1996ರಲ್ಲಿ ಸಕ್ಕರೆ ಕಾರ್ಖಾನೆ ಮಾಡಿ ಮದ್ರಾಸ್ ಗೆ ಸಕ್ಕರೆ ಹೋಗಿತ್ತು. ಆಗಲೂ ಶಿವಶಂಕರಪ್ಪರೇ ನನ್ನ ಬಳಿ ದುಡ್ಡು ತೆಗೆದುಕೊಂಡಿದ್ದಾರೆ. 1997 ರಲ್ಲಿ ನಾನೂ ಆರು ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದೆ. 1 ಕೋಟಿ 85 ಲಕ್ಷ ರೂಪಾಯಿ ತೆರಿಗೆ ಕಟ್ಟಿದ್ದೇನೆ. ಆಗ ನಾನು ಮತ್ತು ಮಾವ ಶಾಮನೂರು ಶಿವಶಂಕರಪ್ಪರು ಚೆನ್ನಾಗಿಯೇ ಇದ್ದೆವು. ಆಗಲೂ ದುಡ್ಡು ಕೊಟ್ಟಿದ್ದೇನೆ. 1998ರಲ್ಲಿ ನಾನು ಚುನಾವಣೆಗೆ ನಿಲ್ಲುವಾಗ ಹಣ ಕೊಡುವಂತೆ ಕೇಳಿದೆ. ಆಗಲು ವಾಪಸ್ ಕೊಡಲು ತಡಮಾಡಿದರು. ಬಡ್ಡಿ ಸಮೇತ ವಸೂಲಿ ಮಾಡಿದ್ದೇನೆ ಎಂದು ತಿಳಿಸಿದರು.

1996ರಲ್ಲಿ ನಮ್ಮಪ್ಪ ಮಲ್ಲಿಕಾರ್ಜುನಪ್ಪ ಅವರು ಸಂಸದರಾಗಿ ಆಯ್ಕೆಯಾದ ಬಳಿಕ ಉತ್ತಮ ಕೆಲಸ ಮಾಡಿದ್ದಾರೆ. ಅಂದು ಕೇವಲ 50 ಸಾವಿರ ರೂಪಾಯಿಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಆಗುತಿತ್ತು. ಈಗ ಆಗುತ್ತದೆಯೇ ಎಂದು ಪ್ರಶ್ನಿಸಿದ
ಈಗ ಆ 50 ಸಾವಿರ ರೂಪಾಯಿಯಲ್ಲಿ ಬಸ್ ನಿಲ್ದಾಣ ಮಾಡಲು ಆಗುತ್ತದೆಯೇ. ಸಿದ್ದೇಶ್ವರ್ ಬಗ್ಗೆ ಮಾಧ್ಯಮದವರಿಗೆ ಎಲ್ಲವೂ ಗೊತ್ತು. ನೀವೇ ಹೇಳಿ ಈ ಸಿದ್ದೇಶಣ್ಣ ಹೇಗೆ ಅಂತಾ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ತಿಂಗಳು ಕಳೆದರೂ ವಿರೋಧ ಪಕ್ಷದ ನಾಯಕರು ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ನೇಮಕ ತಡವಾಗುತ್ತಿರುವ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಹಾಗೂ ರಾಜ್ಯದ ಪಕ್ಷದ
ವರಿಷ್ಠರು ಚರ್ಚಿಸಿ ಆಯ್ಕೆ ಮಾಡುತ್ತಾರೆ. ದಾವಣಗೆರೆ ಬಗ್ಗೆ ಏನಾದರೂ ಇದ್ದರೆ ಮಾತ್ರ ಕೇಳಿ ಎಂದು ಸಿದ್ದೇಶ್ವರ ಹೇಳಿದರು.

Davanagere News, Davanagere News Update, Davanagere M.P. Siddeshwar ,

Davanagere Suddi

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment