ದಾವಣಗೆರೆ: 2025-26ನೇ ಸಾಲಿನ 10ನೇ ತರಗತಿ ಕೇಂದ್ರ ಪಠ್ಯಕ್ರಮದ ಫಲಿತಾಂಶ ಪ್ರಕಟವಾಗಿದ್ದು ನಗರದ ಶ್ರೀ ಸಿದ್ಧಗಂಗಾ ಸಿ.ಬಿ.ಎಸ್.ಇ. ಶಾಲೆ ಶೇಕಡ 100 ಫಲಿತಾಂಶ ಪಡೆದಿದೆ.
ಪ್ರೇಕ್ಷಾ ಪಿ. ರಾಮಘಟ್ ಶೇಕಡ 95.60 ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಇಂಗ್ಲೀಷ್ 94, ಕನ್ನಡ 95, ಗಣಿತ 96, ವಿಜ್ಞಾನ 97, ಸಮಾಜ 96 ಒಟ್ಟು 478 ಅಂಕಗಳನ್ನು ಪಡೆದಿದ್ದಾಳೆ.
ಬಾಲಕಿ ಪ್ರಕಾಶ್ ಆರ್. ಮತ್ತು ವೇದಾವತಿ ಆರ್. ಶಿಕ್ಷಕ ದಂಪತಿಗಳ ಪುತ್ರಿಯಾಗಿದ್ದಾಳೆ. ಮುಹಮ್ಮದ್ ಫರ್‌ಹಾನ್ ಆರ್.ಎನ್. 95.4%, ಸಂಪ್ರೀತ್ ಡಿ ಬೈರಡಿಗಿ 94.4%, ಚಿನ್ಮಯಿ ಎಸ್.ಎಲ್. 94%, ನೀರಜ್ ಕೆ.ಟಿ. 93.4%, ಸುಚಿತ್ ಎ. 92.6%, ಪದ್ಮ ಸಿ.ಆರ್. 91.6%, ಪರ್ಣಿಕಾ ಎಸ್. 91.6%, ಲಕ್ಷ್ಮೀಸಾಗರ್ ಎ.ವಿ. 90.8%, ಶಾಶ್ವತ್. ಎಲ್.ಎ. 90.2%, ಸಾನ್ವಿ ಜಿ.ಬಿ. 90% ಪಡೆದಿದ್ದಾರೆ.
90%ಗಿಂತ ಅಧಿಕ ಅಂಕಗಳಿಸಿದವರು 12 ಮಕ್ಕಳು, 85%ಗಿಂತ ಹೆಚ್ಚು ಅಂಕಗಳನ್ನು ಗಳಿಸಿದವರ ಸಂಖ್ಯೆ 15, 60%ಗಿಂತ ಹೆಚ್ಚು ಅಂಕಗಳನ್ನು ಗಳಿಸಿದವರು 97 ಹಾಗೂ 50%ಗಿಂತ ಹೆಚ್ಚು ಪಡೆದವರು 8 ಮಕ್ಕಳಿದ್ದಾರೆ. ದ್ವಿತೀಯ ಸ್ಥಾನ ಪಡೆದ ಮುಹಮ್ಮದ್ ಫರ್‌ಹಾನ್ ಆರ್.ಎನ್. ಇಂಗ್ಲೀಷ್‌ನಲ್ಲಿ 99, ಚಿನ್ಮಯಿ ಎಸ್.ಎಲ್ ಗಣಿತದಲ್ಲಿ 99, ನೀರಜ್. ಕೆ.ಟಿ. ಕನ್ನಡದಲ್ಲಿ 99, ಪದ್ಮ ಸಿ.ಆರ್. ಕನ್ನಡದಲ್ಲಿ 99 ಮತ್ತು ಪರ್ಣಿಕ ಎಸ್. ಕನ್ನಡದಲ್ಲಿ 99 ಪಡೆದು ದಾಖಲೆ ಸ್ಥಾಪಿಸಿದ್ದಾರೆ.
100ಕ್ಕೆ 100 ಫಲಿತಾಂಶ ನೀಡಿರುವ ಮಕ್ಕಳನ್ನು ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜ, ಪ್ರಾಚಾರ್ಯರಾದ ಗಾಯತ್ರಿ ಚಿಮ್ಮಡ್, ಅಧ್ಯಕ್ಷರಾದ ಪ್ರಶಾಂತ್, ನಿರ್ದೇಶಕರಾದ ಜಯಂತ್, ಕಾರ್ಯದರ್ಶಿ ಹೇಮಂತ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
- 100 Percent Result
- 10th Class Result
- 10ನೇ ತರಗತಿ ಫಲಿತಾಂಶ
- CBSE 10th Result Davanagere
- CBSE Result 2026
- Davanagere Education
- DAVANAGERE NEWS
- High School Results Karnataka
- Preksha P Ramaghat
- Siddaganga CBSE School
- Student Achievement Davanagere.
- ಗಾಯತ್ರಿ ಚಿಮ್ಮಡ್
- ಜಸ್ಟಿನ್ ಡಿಸೋಜಾ
- ದಾವಣಗೆರೆ ಶಿಕ್ಷಣ
- ದಾವಣಗೆರೆ ಸುದ್ದಿ
- ಪ್ರೇಕ್ಷಾ ಪಿ ರಾಮಘಟ್
- ಸಿದ್ಧಗಂಗಾ ಶಾಲೆ ಸಾಧನೆ.
- ಸಿದ್ಧಗಂಗಾ ಸಿಬಿಎಸ್ಇ ಶಾಲೆ
- ಸಿಬಿಎಸ್ಇ ಫಲಿತಾಂಶ 2026






Leave a comment