Home ಕ್ರೈಂ ನ್ಯೂಸ್ ವಾಕ್ ಬಳಿಕ ಸಾಯಿಬಾಬಾ ದರ್ಶನ ಪಡೆದು ಮನೆಗೆ ಬರುತ್ತಿದ್ದಾಗ ಹೃದಯಾಘಾತ: ಹಿರಿಯ ಲೆಕ್ಕ ಪರಿಶೋಧಕ ರಾಧೇಶ್ ಜಂಬಗಿ ನಿಧನಕ್ಕೆ ಸಂತಾಪಗಳ ಮಹಾಪೂರ
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ವಾಕ್ ಬಳಿಕ ಸಾಯಿಬಾಬಾ ದರ್ಶನ ಪಡೆದು ಮನೆಗೆ ಬರುತ್ತಿದ್ದಾಗ ಹೃದಯಾಘಾತ: ಹಿರಿಯ ಲೆಕ್ಕ ಪರಿಶೋಧಕ ರಾಧೇಶ್ ಜಂಬಗಿ ನಿಧನಕ್ಕೆ ಸಂತಾಪಗಳ ಮಹಾಪೂರ

Share
ಹೃದಯಾಘಾತ
Share

ದಾವಣಗೆರೆ: ನಗರದ ಪ್ರಮುಖ ಹಿರಿಯ ತೆರಿಗೆ ಸಲಹೆಗಾರರು, ವೀರಶೈವ ಮುಖಂಡರು ಹಾಗೂ ಹಿರಿಯ ಲೆಕ್ಕ ಪರಿಶೋಧಕರಾದ ರಾಧೇಶ್ ಎಸ್. ಜಂಬಗಿ (60) ಅವರು ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸಂಭವಿಸಿದ ರೀತಿ: ಗುರುವಾರ ಬೆಳಿಗ್ಗೆ ಎಂದಿನಂತೆ ಸ್ನೇಹಿತರೊಂದಿಗೆ ವಾಯು ವಿಹಾರ ಮುಗಿಸಿ, ಎಂಸಿ‌ಸಿ ಕಾಲನಿಯ ಶ್ರೀ ಸಾಯಿಬಾಬಾ ದೇವಸ್ಥಾನದ ದರ್ಶನ ಪಡೆದು ಮನೆಗೆ ವಾಪಸಾಗುತ್ತಿದ್ದ ವೇಳೆ ದಿಢೀರ್‌ ಹೃದಯಾಘಾತ ಸಂಭವಿಸಿದೆ.

ಪರಿಚಯ ಹಾಗೂ ಸೇವಾವಲಯ:

  • ದಾವಣಗೆರೆ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಮಾಜಿ ಅಧ್ಯಕ್ಷ

  • ಅಖಿಲ ಭಾರತ ವೀರಶೈವ ಮಹಾಸಭಾದ ಹಿರಿಯ ಮುಖಂಡ

  • ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ ಸಮಿತಿ ಪದಾಧಿಕಾರಿ

ಅಂತಿಮ ಸಂಸ್ಕಾರ: ಮೃತರು ತಾಯಿ, ಪತ್ನಿ ಜ್ಯೋತಿ ಜಂಬಗಿ, ಪುತ್ರಿ ಶ್ರೇಯಾ ಜಂಬಗಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಗಾಂಧಿ ನಗರದ ವೀರಶೈವ ರುದ್ರಭೂಮಿಯಲ್ಲಿ ಗುರುವಾರ ಸಂಜೆ ಅಂತ್ಯಕ್ರಿಯೆ ನೆರವೇರಿತು.

ಗುರುವಾರದ ದಿನವಾಗಿದ್ದರಿಂದ ವಾಕ್ ಮುಗಿಸಿಕೊಂಡು, ಎಂಸಿಸಿ ಕಾಲನಿ ಬಿ ಬ್ಲಾಕ್‌ನಲ್ಲಿ ಶ್ರೀ ಸಾಯಿಬಾಬಾ ದೇವಸ್ಥಾನಕ್ಕೆ ಹೋಗಿ ಬಾಬಾ ದರ್ಶನ ಮಾಡಿಕೊಂಡು, ಮನೆಗೆ ವಾಪಾಸ್ಸಾಗುವಾಗ ಹಾರ್ಟ್ ಅಟ್ಯಾಕ್ ಆಗಿ ಅಲ್ಲಿ ಸಾವನ್ನಪ್ಪಿದ್ದಾರೆ.
ಮೃತರ ನಿವಾಸಕ್ಕೆ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ, ಬಿಜೆಪಿ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ದಾವಣಗೆರೆ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಇ.ರಂಗಸ್ವಾಮಿ, ಮಾಜಿ ಮೇಯರ್ ಗಳಾದ ಕೆ.ಚಮನ್ ಸಾಬ್‌, ಎಸ್.ಟಿ.ವೀರೇಶ, ಪಾಲಿಕೆ ಮಾಜಿ ಸದಸ್ಯರಾದ ಸುರಭಿ ಎಸ್.ಶಿವಮೂರ್ತಿ, ಕೆ.ಚಮನ್ ಸಾಬ್‌, ಲಯನ್ಸ್ ಕ್ಲಬ್‌ನ ಮಹಾಂತೇಶ ವಿ.ಒಣರೊಟ್ಟಿ, ವಾಸುದೇವ ಎಲ್.ರಾಯ್ಕರ್, ಜಿಲ್ಲಾ ವರದಿಗಾರರ ಕೂಟದ ಗೌರವಾಧ್ಯಕ್ಷ ಬಿ.ಎನ್.ಮಲ್ಲೇಶ, ಅಧ್ಯಕ್ಷ ನಾಗರಾಜ ಎಸ್.ಬಡದಾಳ್, ಸಿವಿಲ್ ಇಂಜಿನಿಯರ್ ಮಂಜುನಾಥ ಸ್ವಾಮಿ, ಔಷಧಿ ಮಾರಾಟಗಾರರ ಸಂಘದ ಎನ್.ರವಿಕುಮಾರು ನುಗ್ಗೇಹಳ್ಳಿ, ಎನ್.ಸಿ.ಮಂಜುನಾಥ ಸೇರಿದಂತೆ ಲಯನ್ಸ್ ಕ್ಲಬ್ ಅಧ್ಯಕ್ಷರು, ರೋಟರಿ ಕ್ಲಬ್ ಅಧ್ಯಕ್ಷರು, ಪದಾಧಿಕಾರಿಗಳು, ಅನೇಕ ಗಣ್ಯರು, ಹಿರಿಯರು, ಸಮಾಜದ ಮುಖಂಡರು ಅಂತಿಮ ದರ್ಶನ ಪಡೆದರು.
Share

Leave a comment

Leave a Reply

Your email address will not be published. Required fields are marked *