Home ದಾವಣಗೆರೆ ದಾವಣಗೆರೆ ಜಿಲ್ಲೆಯಲ್ಲಿ 2026-27ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಬೆಳೆ ವಿಮೆ ನೋಂದಣಿ ಆರಂಭ
ದಾವಣಗೆರೆಬೆಂಗಳೂರು

ದಾವಣಗೆರೆ ಜಿಲ್ಲೆಯಲ್ಲಿ 2026-27ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಬೆಳೆ ವಿಮೆ ನೋಂದಣಿ ಆರಂಭ

Share
ಹಿಂಗಾರು
Share

 ದಾವಣಗೆರೆ: 2026-27ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ದಾವಣಗೆರೆ ಜಿಲ್ಲೆಯಲ್ಲಿ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗೆ ಜಾರಿಗೊಳಿಸಲಾಗಿದೆ. ಈ ವಿಮಾ  ಯೋಜನೆಯು ಜಿಲ್ಲೆಯಲ್ಲಿ, ಹಿಂಗಾರು ಹಂಗಾಮಿನಲ್ಲಿ ಮುಖ್ಯ ಬೆಳೆಗಳಿಗೆ ಗ್ರಾಮ ಪಂಚಾಯತಿ/ಹೋಬಳಿ ಮಟ್ಟದಲ್ಲಿ ಜೋಳ (ಮಳೆ ಆಶ್ರಿತ/ ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ/ನೀರಾವರಿ), ಮೆಕ್ಕೆಜೋಳ (ನೀರಾವರಿ), ರಾಗಿ (ನೀರಾವರಿ), ಹುರುಳಿ (ಮಳೆ ಆಶ್ರಿತ), ಕಡಲೆ (ಮ.ಆ), ಕೃಷಿ ಬೆಳೆಗಳಿಗೆ ಮತ್ತು ತೋಟಗಾರಿಕೆ ಬೆಳೆಗಳಾದ ಈರುಳ್ಳಿ (ನೀರಾವರಿ) ಟೊಮ್ಯಾಟೋ (NS) ಬೆಳೆಗಳಿಗೆ ಹಾಗೂ ಬೇಸಿಗೆ ಹಂಗಾಮಿಗೆ ಭತ್ತ (ನೀರಾವರಿ )ಬೆಳೆಗೆ ಅಧಿಸೂಚನೆ ಮಾಡಲಾಗಿದೆ.  

ಬೆಳೆ ಸಾಲ ಪಡೆದ ರೈತರಿಗೆ  ‘ಆಪ್ಟಿಂಗ್-ಔಟ್’ ಮತ್ತು ‘ಆಪ್ಟ್-ಇನ್’ ಅವಕಾಶವಿದ್ದು, ವಿಮೆ ಕಡ್ಡಾಯವಿರುವುದಿಲ್ಲ. ವಿಮೆ ಮಾಡಿಸಲು ಇಚ್ಛಿಸದಿದ್ದಲ್ಲಿ, ಕೊನೆಯ ದಿನಾಂಕಕ್ಕಿಂತ 7 ದಿನ ಮುಂಚಿತವಾಗಿ ಸಂಬಂಧಪಟ್ಟ ಬ್ಯಾಂಕಿಗೆ ‘ಆಪ್ಟಿಂಗ್-ಔಟ್’ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಹೊರಗುಳಿಯಬಹುದು. ಅರ್ಜಿ ಸಲ್ಲಿಸದ ಉಳಿದ ಎಲ್ಲಾ ಸಾಲಗಾರ ರೈತರ ವಿಮೆ ಕಡ್ಡಾಯವಾಗಿರುತ್ತದೆ.

ಬೆಳೆ ಸಾಲ ಪಡೆಯದ ರೈತರು ಪಹಣಿ, ಆಧಾರ್ ಜೋಡಿಸಲ್ಪಟ್ಟ ಬ್ಯಾಂಕ್ ಖಾತೆ ವಿವರ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಬ್ಯಾಂಕ್ ಅಥವಾ ಸಿ.ಎಸ್.ಸಿ (CSC) ಕೇಂದ್ರಗಳ ಮೂಲಕ ನೋಂದಾಯಿಸಿಕೊಳ್ಳಬಹುದು. ನೋಂದಣಿಗೆ ಕಡ್ಡಾಯವಾಗಿ FRUITS ID (FID) ಅಗತ್ಯವಿರುತ್ತದೆ.   ಜಿಲ್ಲೆಯಲ್ಲಿ ಈ ವಿಮಾ ಯೋಜನೆಯ ಅನುಷ್ಠಾನಕ್ಕಾಗಿ “ಎಸ್‌ಬಿಐ ಜನರಲ್ ಇನ್ಶೂರೆನ್ಸ್ ಲಿಮಿಟೆಡ್” (SBI General Insurance Ltd) ಸಂಸ್ಥೆಯನ್ನು ನಿಗದಿಪಡಿಸಲಾಗಿದೆ.

 ಹಿಂಗಾರು ಹಂಗಾಮು ಬೆಳೆ ವಿಮೆ ನೋಂದಣಿಗೆ ಕೊನೆಯ ದಿನಾಂಕ,ಮೆಕ್ಕೆಜೋಳ (ನೀ), ಸೂರ್ಯಕಾಂತಿ (ಮ.ಆ/ನೀ),ಹುರುಳಿ (ಮ.ಆ), ರಾಗಿ (ನೀ), ಜೋಳ (ಮ.ಆ/ನೀ),ನವೆಂಬರ್ 16 ಕೊನೆಯ ದಿನಾಂಕ,  ಈರುಳ್ಳಿ (ನೀ), ಟೊಮ್ಯಾಟೋ(NS) ನವೆಂಬರ್ 30, ಕಡಲೆ (ಮ.ಆ) ಡಿಸೆಂಬರ್ 15, ಬೇಸಿಗೆ ಹಂಗಾಮು ಭತ್ತ (ನೀ) 2027 ರ ಫೆಬ್ರವರಿ 26 ಕೊನೆಯ ದಿನಾಂಕಗಳಾಗಿವೆ.ರೈತರು ನಿಗದಿತ ದಿನಾಂಕದೊಳಗೆ ಮುಂಚಿತವಾಗಿ ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ವಾಣಿಜ್ಯ/ಗ್ರಾಮೀಣ/ಸಹಕಾರಿ ಬ್ಯಾಂಕುಗಳು, ಸಾರ್ವಜನಿಕ ಸೇವಾ ಕೇಂದ್ರಗಳು, ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *