ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

EXCLUSIVE: Davanagere PSI ನಾಗರಾಜ್ ಪತ್ನಿ ಕೆಟಿಜೆ ನಗರ ಪೊಲೀಸ್ ಠಾಣೆಗೆ ಕೊಟ್ಟ ದೂರಿನಲ್ಲೇನಿದೆ?

On: July 6, 2025 1:11 PM
Follow Us:
Davanagere
---Advertisement---

SUDDIKSHANA KANNADA NEWS/ DAVANAGERE/ DATE_06-07_2025

ದಾವಣಗೆರೆ (Davanagere): ದಾವಣಗೆರೆಯ ನಿಟುವಳ್ಳಿಯ ನಾಲ್ಕನೇ ಕ್ರಾಸ್ ನಲ್ಲಿನ ಪೊಲೀಸ್ ಕ್ವಾರ್ಟಸ್ ನಲ್ಲಿ ವಾಸವಿದ್ದ ಬಡಾವಣೆ ಪೊಲೀಸ್ ಠಾಣೆಯ PSI ಬಿ. ಆರ್. ನಾಗರಾಜ್ ಅವರ ಪತ್ನಿ ಲಲಿತಾ ಅವರು ಕೆಟಿಜೆ
ನಗರ ಪೊಲೀಸ್ ಠಾಣೆಗೆ ಜುಲೈ 2ರಂದು ದೂರು ನೀಡಿದ್ದರು. ತನ್ನ ಪತಿ ಕಾಣೆಯಾಗಿದ್ದು ಹುಡುಕಿಕೊಡುವಂತೆ ದೂರಿನಲ್ಲಿ ಮನವಿ ಮಾಡಿದ್ದ ಅಂಶ ಬೆಳಕಿಗೆ ಬಂದಿದೆ.

READ ALSO THIS STORY: EXCLUSIVE: Davanagere ಬಡಾವಣೆ ಪೊಲೀಸ್ ಠಾಣೆ ಪಿಎಸ್ಐ ನಾಗರಾಜ್ ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ?

ಜುಲೈ 2 ರಂದು ಕೆಟಿಜೆ ನಗರ ಪೊಲೀಸ್ ಠಾಣೆಗೆ ಖುದ್ದು ಹಾಜರಾಗಿ ಲಲಿತ ಅವರು ದೂರು ನೀಡಿದ್ದರು. ನಗರದ ನಿಟುವಳ್ಳಿಯ ಪೊಲೀಸ್ ಕ್ವಾಟರ್ಸ್ ನಲ್ಲಿ ನಾನು ಮತ್ತು ನನ್ನ ಪತಿ ನಾಗರಾಜ್ ಒಟ್ಟಿಗೆ ವಾಸವಿದ್ದೆವು.
ನಾಪತ್ತೆಯಾದ ನನ್ನ ಪತಿ ನಾಗರಾಜಪ್ಪ ಅವರು ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನನ್ನ ಗಂಡನಿಗೆ ಬಿಪಿ, ಶುಗರ್, ಥೈರಾಯಿಡ್, ವೆಕಿಕೋಸ್ವೇನ್
ಕಾಯಿಲೆಯೂ ಇದೆ. ಕೆಲಸದೊತ್ತಡ ಹಾಗೂ ಕಾಯಿಲೆಗಳಿಂದ ತುಂಬಾ ಟೆನ್ಶನ್ ಮಾಡಿಕೊಳ್ಳುತ್ತಿದ್ದರು.

ಕಳೆದ ಜೂನ್ 30ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಮಧ್ಯಪ್ರದೇಶದಿಂದ ವಿಶೇಷ ಕರ್ತವ್ಯ ಮುಗಿಸಿ ಮನೆಗೆ ಬಂದಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಮನೆಯಲ್ಲಿ ಕೌಟುಂಬಿಕ ವಿಚಾರದಲ್ಲಿ ನನಗೂ ಹಾಗೂ ನನ್ನ ಪತಿ ನಡುವೆ
ಮನಸ್ತಾಪ ಬಂದಿದ್ದು, ಜಗಳವಾಗಿತ್ತು. ಮನಸ್ಸಿಗೆ ಬೇಸರ ಮಾಡಿಕೊಂಡು ರಾತ್ರಿ 2 ಗಂಟೆ ಸುಮಾರಿಗೆ ಮನೆಯಿಂದ ಹೊರಗಡೆ ಹೋದವರು ವಾಪಸ್ ಬಂದಿಲ್ಲ. ಕರ್ತವ್ಯಕ್ಕೂ ಹಾಜರಾಗಿಲ್ಲ. ನಮ್ಮ ಸಂಬಂಧಿಕರು, ಸ್ನೇಹಿತರು, ಪೊಲೀಸರಿಗೆ ವಿಚಾರಿಸಿದರೂ ಪತ್ತೆಯಾದಿಲ್ಲ. ಎಲ್ಲಾ ಕಡೆ ಹುಡುಕಾಡಿದೆವು. ಆದರೂ ಸಿಗಲಿಲ್ಲ. ಕಾಣೆಯಾಗಿರುವ ನನ್ನ ಗಂಡನನ್ನು ಹುಡುಕಿಕೊಡಿ ಎಂದು ದೂರಿನಲ್ಲಿ ಮನವಿ ಮಾಡಿದ್ದರು.

ನೇಣುಬಿಗಿದ ಸ್ಥಿತಿಯಲ್ಲಿ Davanagere PSI ದೇಹ ಪತ್ತೆ:

ಆದ್ರೆ, ಇಂದು ತುಮಕೂರಿನ ದ್ವಾರಕಾ ಲಾಡ್ಜ್ ನಲ್ಲಿ ಪಿಎಸ್ಐ ನಾಗರಾಜ್ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment