Home ಕ್ರೈಂ ನ್ಯೂಸ್ ಬಿಜೆಪಿ ಕಚೇರಿ ಎದುರು ತೊಡೆ ತಟ್ಟಿದ ಪ್ರದೀಪ್ ಈಶ್ವರ್: ಚಪ್ಪಲಿ, ಪೊರಕೆ ತೋರಿಸಿ ವಿಕೃತಿ ಮೆರೆದ ಬಿಜೆಪಿಗರು!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಬಿಜೆಪಿ ಕಚೇರಿ ಎದುರು ತೊಡೆ ತಟ್ಟಿದ ಪ್ರದೀಪ್ ಈಶ್ವರ್: ಚಪ್ಪಲಿ, ಪೊರಕೆ ತೋರಿಸಿ ವಿಕೃತಿ ಮೆರೆದ ಬಿಜೆಪಿಗರು!

Share
ಪ್ರದೀಪ್ ಈಶ್ವರ್
Share

ದಾವಣಗೆರೆ: ಗಂಡಸೇ ಆಗಿದ್ದರೆ, ತಾಕತ್ತು ದಮ್ಮು ಇದ್ದರೆ ದಾವಣಗೆರೆಗೆ ಬರಲಿ ಎಂಬ ಬಿಜೆಪಿ ನಾಯಕ ಅಜಯ್ ಕುಮಾರ್ ಸವಾಲು ಸ್ವೀಕರಿಸಿ ಬಂದಿದ್ದ ಶಾಸಕ ಪ್ರದೀಪ್ ಈಶ್ವರ್ ನಗರದ ಕೆಬಿ ಬಡಾವಣೆಯಲ್ಲಿರುವ ಬಿಜೆಪಿ ಕಚೇರಿ ಎದುರು ತೊಡೆ ತಟ್ಟಿ ಸವಾಲು ಸ್ವೀಕರಿಸಿ ಅಬ್ಬರಿಸಿ ಬೊಬ್ಬಿರಿದರೆ, ಬಿಜೆಪಿಗರು ಮಾತ್ರ ಚಪ್ಪಲಿ, ಪೊರಕೆ ತೋರಿಸಿ ಹುಚ್ಚ ಎಂಬ ಘೋಷಣೆ ಕೂಗುತ್ತಾ ವಿಕೃತಿ ಮೆರೆದ ಘಟನೆ ನಡೆದಿದೆ.

ನಗರದ ಅಪೂರ್ವ ರೆಸಾರ್ಟ್ ನಿಂದ ಮೆರವಣಿಗೆಯಲ್ಲಿ ಆಗಮಿಸಿದ ಪ್ರದೀಪ್ ಈಶ್ವರ್ ನಗರದ ಕೆಬಿ ಬಡಾವಣೆಯ ರಾಘವೇಂದ್ರ ಸ್ವಾಮಿ ಮಠ ಮತ್ತು ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಆರಂಭವಾಯಿತು. ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರ ಪ್ರಚಾರ ಆರಂಭಿಸಿದರು. ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಜೊತೆಗೆ ತೆರೆದ ವಾಹನದಲ್ಲಿ ಮೇಲೆ ನಿಂತು ಕಾಂಗ್ರೆಸ್ ಬಾವುಟ ಹಾರಾಡಿಸುತ್ತಾ ಮೆರವಣಿಗೆಯಲ್ಲಿ ಆಗಮಿಸಿದರು.

ಬಿಜೆಪಿ ಕಚೇರಿ ಬಳಿ ಬರುತ್ತಿದ್ದಂತೆ ಮೊದಲೇ ಜಮಾವಣೆಗೊಂಡಿದ್ದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪ್ರದೀಪ್ ಈಶ್ವರ್ ವಿರುದ್ಧ ಘೋಷಣೆ ಹಾಕಿದರು. ಪ್ರದೀಪ್ ಈಶ್ವರ್ ತೊಡೆ ತಟ್ಟಿ ಸವಾಲು ಎಸೆದರೆ ಕೆಲ ಬಿಜೆಪಿ ಕಾರ್ಯಕರ್ತರು
ಪ್ರದೀಪ್ ಈಶ್ವರ್ ಗೆ ಚಪ್ಪಲಿ ತೋರಿಸಿದರೆ, ಮತ್ತೆ ಕೆಲವರು ಪೊರಕೆ ಪ್ರದರ್ಶಿಸಿದರು. ಮತ್ತೆ ಕೆಲವರಂತೂ ಹುಚ್ಚ ಹುಚ್ಚ ಕಾಂಗ್ರೆಸ್ ಶಾಸಕ ಹುಚ್ಚ ಎಂಬ ಘೋಷಣೆ ಹಾಕಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ
ವಾಗ್ದಾಳಿ ನಡೆಸಿದರು.

ಬಿಜೆಪಿ ಸಂಸ್ಕೃತಿ ಇದೆನಾ? ಯಾವಾಗಲೂ ಸಂಸ್ಕೃತಿ ಬಗ್ಗೆ ಮಾತನಾಡುವ ಬಿಜೆಪಿಗರಿಗೆ ಧಿಕ್ಕಾರ, ಸಂಸ್ಕೃತಿ ಮರೆತು ವಿಕೃತಿ ಮೆರೆದ ಬಿಜೆಪಿ ಕಾರ್ಯಕರ್ತರ ಹುಚ್ಚಾಟಕ್ಕೆ ಪೊಲೀಸರು ಬ್ರೇಕ್ ಹಾಕಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಕಚೇರಿ
ಬಳಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡ ಸ್ವಲ್ಪ ಕಾಲ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಪರದಾಡಿದರು. ಬಿಜೆಪಿ ಕಚೇರಿ ಮುಂದೆ ಕಾಂಗ್ರೆಸ್ ಶಾಸಕರ ಮೆರವಣಿಗೆಗೆ ಅನುಮತಿ ಕೊಟ್ಟ ಬಡಾವಣೆ ಪೊಲೀಸರ ವರ್ತನೆಗೆ
ಆಕ್ರೋಶ ವ್ಯಕ್ತಪಡಿಸಿದರು.

ಇನ್ನು 2023ರಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತಗೊಂಡಿದ್ದ ಅಜಯ್ ಕುಮಾರ್ ಬೆಂಬಲಿಗರು ಪ್ರದೀಪ್ ಈಶ್ವರ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಪ್ರದೀಪ್ ಈಶ್ವರ್ ಗೋ ಬ್ಯಾಕ್ ಎಂಬ
ಘೋಷಣೆ ಕೂಗಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಅಜಯ್ ಕುಮಾರ್ ಮೇಲಕ್ಕೆ ಎತ್ತಿ ತಲೆಮೇಲೆ ಕೂರಿಸಿಕೊಂಡು ಕೇಕೆ ಹಾಕಿದರು.

Share

Leave a comment

Leave a Reply

Your email address will not be published. Required fields are marked *