ದಾವಣಗೆರೆ: ನಗರದ ಜನರೇ ಗಮನಿಸಿ, ನೀರು ಸಂಗ್ರಹಣೆ ಹಾಗೂ ನಿಮ್ಮ ತುರ್ತು ಕೆಲಸಗಳಿದ್ದರೆ ಇಂದೇ ಯೋಜನೆ ಮಾಡಿಕೊಳ್ಳಿ. ಮಹಾನಗರ ಪಾಲಿಕೆ ಹಾಗೂ ಬೆಸ್ಕಾಂ ವತಿಯಿಂದ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂನ್ 16 ರಂದು ನಗರದ ಪ್ರಮುಖ ಪ್ರದೇಶಗಳಲ್ಲಿ ದಿನದ ಬಹುಪಾಲು ಸಮಯ ವಿದ್ಯುತ್ ವ್ಯತ್ಯಯವಾಗಲಿದೆ.
ಯಾವಾಗ ಪವರ್ ಕಟ್?: ಬೆಸ್ಕಾಂ ಪ್ರಕಟಣೆಯ ಪ್ರಕಾರ, 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-10 ಸರಸ್ವತಿ ಫೀಡರ್ ವ್ಯಾಪ್ತಿಯಲ್ಲಿ ಜೂನ್ 16 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ (ಒಟ್ಟು 8 ಗಂಟೆಗಳು) ಕರೆಂಟ್ ಇರುವುದಿಲ್ಲ.
ಬಾಧಿತ ಪ್ರದೇಶಗಳು:
ಕಾಳಿದಾಸ ಸರ್ಕಲ್
ಜಯನಗರ ಬಿ & ಸಿ ಬ್ಲಾಕ್
ಚರ್ಚ್ ರೋಡ್
ಭಗಿರಥ ಸರ್ಕಲ್
ಮೋರ್ ಸೂಪರ್ ಮಾರ್ಕೆಟ್ ರಸ್ತೆ
ಖಾದಿ ಕೇಂದ್ರ
ಆಂಜನೇಯ ದೇವಸ್ಥಾನ ಮತ್ತು ಕರಿಯಮ್ಮ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳು.
ಎಫ್-10 ಸರಸ್ವತಿ ಫೀಡರ್ ವ್ಯಾಪ್ತಿಯ ಕಾಳಿದಾಸ ಸರ್ಕಲ್, ಜಯನಗರ ಬಿ & ಸಿ ಬ್ಲಾಕ್, ಚರ್ಚ್ರೋಡ್, ಭಗಿರಥ ಸರ್ಕಲ್, ಮೋರ್, ಖಾದಿ ಕೇಂದ್ರ, ಆಂಜನೇಯ ದೇವಸ್ಥಾನ, ಕರಿಯಮ್ಮದೇವಸ್ಥಾನ” ಮತ್ತು ಸುತ್ತ ಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ಸಾರ್ವಜನಿಕರು ಬೆಸ್ಕಾಂ ಸಿಬ್ಬಂದಿಯೊಂದಿಗೆ ಸಹಕರಿಸಬೇಕಾಗಿ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.





Leave a comment