ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Pension: ಈ ಜೋಡಣೆ ಮಾಡದಿದ್ದರೆ ಸಿಗಲ್ಲ ಗಮನಿಸಿ… .ವೃದ್ಧಾಪ್ಯ, ಸಂಧ್ಯಾಸುರಕ್ಷಾ, ವಿಧವಾ, ಅಂಗವಿಕಲ ವೇತನ ಸೇರಿ ಇತರೆ ಮಾಸಿಕ ಪಿಂಚಣಿದಾರರಿಗೆ ಸೂಚನೆ

On: October 18, 2023 1:41 PM
Follow Us:
NOTE
---Advertisement---

SUDDIKSHANA KANNADA NEWS/ DAVANAGERE/ DATE:18-10-2023

ದಾವಣಗೆರೆ: ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಮಾಸಿಕ ಪಿಂಚಣಿ (Pension) ಯೋಜನೆಗಳನ್ನು ಆಧಾರ್ ಆಧಾರಿತ ನೇರ ಹಣ ಸಂದಾಯ ಯೋಜನೆಯಡಿ ತರಲು ಕ್ರಮವಹಿಸಲಾಗುವುದೆಂದು ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್ ತಿಳಿಸಿದ್ದಾರೆ.

Read Also This Story:

M. P. Renukacharya: ಹಲವು ನಾಯಕರು ಬಿಜೆಪಿ ಪಕ್ಷ ಬಿಡ್ತಾರೆ: ಎಂ. ಪಿ. ರೇಣುಕಾಚಾರ್ಯ ಈ ಹೇಳಿಕೆ ಮರ್ಮವೇನು..? ಬ್ಲಾಕ್ ಮೇಲ್ ತಂತ್ರನಾ…?

ಕಂದಾಯ ಇಲಾಖೆಯ ಸಾಮಾಜಿಕ ಭದ್ರತಾ ಯೋಜನೆಗಳಡಿ ಬರುವ ಯೋಜನೆಗಳಾದ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂದ್ಯಾಸುರಕ್ಷಾ ವೇತನ, ವಿಧವಾ ವೇತನ, ರೈತರ ಆತ್ಮಹತ್ಯೆ, ಪ್ರಕರಣದಡಿ ರೈತ ಪತ್ನಿಗೆ ನೀಡುವ ವಿಧವಾ ವೇತನ, ಅಂಗವಿಕಲ ವೇತನ, ಆಸಿಡ್ ಪ್ರಕರಣದಡಿ ನೀಡುವ ವೇತನ, ಮನಸ್ವಿನಿ, ಮತ್ತು ಮೃತ್ರಿ ಯೋಜನೆಗಳನ್ನು ಅಕ್ಟೋಬರ್ 2023 ರ ಮಾಹೆಯಿಂದ ಪಿಂಚಣಿ ಪಾವತಿಯನ್ನು ಆಧಾರ್ ಆಧಾರಿತ ನೇರ ಹಣ ಸಂದಾಯ ಯೋಜನೆಯಡಿ ತರಲು ಕ್ರಮವಹಿಸಲಾಗಿದೆ.

ಪಿಂಚಣಿ, ಮತ್ತು ಸಹಾಯಧನ ಪಡೆಯುವ ಫಲಾನುಭವಿಗಳು ತಪ್ಪದೇ ತಮ್ಮ ಆಧಾರ್ ನಂಬರ್, ಬ್ಯಾಂಕ್, ಅಂಚೆ ಉಳಿತಾಯ ಖಾತೆಗೆ ಎನ್.ಪಿ.ಸಿ.ಐ ಮಾಡಿಸುವುದು ಕಡ್ಡಾಯ.

ಜಿಲ್ಲಾದ್ಯಂತ ಎಲ್ಲಾ ತಾಲ್ಲೂಕುಗಳಲ್ಲಿ ಇಲ್ಲಿಯವರೆಗೂ ಮ್ಯಾಪಿಂಗ್ ಮಾಡಿಸಲು ಬಾಕಿಯಿರುವ ಪ್ರಕರಣಗಳು ದಾವಣಗೆರೆ-4579, ಹರಿಹರ-458, ಚನ್ನಗಿರಿ-1693, ಹೊನ್ನಾಳಿ-538, ನ್ಯಾಮತಿ 381 ಮತ್ತು ಜಗಳೂರು-637 ಗಳಿದ್ದು, ಬಾಕಿಯಿರುವ ಪಟ್ಟಿಯು ತಮ್ಮ ಗ್ರಾಮದ ಗ್ರಾಮ ಆಡಳಿತ ಅಧಿಕಾರಿ, ಕಂದಾಯ ನಿರೀಕ್ಷಕರು ಅಥವಾ ತಹಶೀಲ್ದಾರ್ ಕಛೇರಿಯಲ್ಲಿ ಲಭ್ಯವಿರುತ್ತದೆ.

ಜಿಲ್ಲೆಯಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಡಿ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರು, ಅಕ್ಟೋಬರ್ 25 ರ ಒಳಗಾಗಿ ತಮ್ಮ ಆಧಾರ್ ನಂಬರ್, ಪಿಂಚಣಿ ಪಡೆಯುವ ಬ್ಯಾಂಕ್, ಅಂಚೆ ಕಚೇರಿಗೆ ಸಂಪರ್ಕಿಸಿ ತಕ್ಷಣವೇ ಆಧಾರ್
ಜೋಡಣೆ ಪ್ರಕ್ರಿಯೆಯ ಜೊತೆಗೆ ಮ್ಯಾಪಿಂಗ್ ಮಾಡಿಕೊಳ್ಳಬೇಕು. ಈಗಾಗಲೇ ಪಿಂಚಣಿ ಪಾವತಿ ಖಾತೆಗೆ ಆಧಾರ್ ಜೋಡಣೆಯಾಗಿದ್ದರೆ ಮ್ಯಾಪಿಂಗ್ ಆಗಿದೆಯೇ ಅಥವಾ ಇಲ್ಲವೋ ಎಂಬ ಬಗ್ಗೆ ಸಂಬಂಧಪಟ್ಟ ಬ್ಯಾಂಕ್, ಅಂಚೆ ಕಚೇರಿಗೆ ಭೇಟಿ ನೀಡಿ ಖಚಿತಪಡಿಸಿಕೊಳ್ಳಬೇಕು

ಮ್ಯಾಪಿಂಗ್ ಮಾಡಿಸಲು ಆಕ್ಟೋಬರ್ 25 ಕೊನೆಯ ದಿನವಾಗಿದ್ದು ಒಂದು ವೇಳೆ ಪಿಂಚಣಿದಾರರು ಆಧಾರ್ ಜೋಡಣೆ ಮಾಡಿಸದಿದ್ದರೆ ಪಿಂಚಣಿ ಪಾವತಿ ಸ್ಥಗಿತವಾಗಲಿದೆ ಎಂದು ತಿಳಿಸಲಾಗಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment