Home ಗೋವಿನಕೋವಿ ಶ್ರೀ ಹಾಲಸ್ವಾಮೀಜಿ ಮಠದಲ್ಲಿ ಅದ್ಧೂರಿ ಮುಳ್ಳುಗದ್ದುಗೆ ಉತ್ಸವ: ಹಸಿಜಾಲಿ ಮುಳ್ಳಿನ ಮೇಲೆ ಹಾರಿ ಕುಣಿದ ಸ್ವಾಮೀಜಿ!
Home

ಗೋವಿನಕೋವಿ ಶ್ರೀ ಹಾಲಸ್ವಾಮೀಜಿ ಮಠದಲ್ಲಿ ಅದ್ಧೂರಿ ಮುಳ್ಳುಗದ್ದುಗೆ ಉತ್ಸವ: ಹಸಿಜಾಲಿ ಮುಳ್ಳಿನ ಮೇಲೆ ಹಾರಿ ಕುಣಿದ ಸ್ವಾಮೀಜಿ!

Share
ಉತ್ಸವ
Share

ದಾವಣಗೆರೆ: ನ್ಯಾಮತಿ ತಾಲೂಕಿನ ಗೋವಿನಕೋವಿ ಗ್ರಾಮದ ಶ್ರೀ ಹಾಲಸ್ವಾಮೀಜಿ ಬೃಹನ್ಮಠದ ಹಾಲಸ್ವಾಮೀಜಿಗಳ ಮುಳ್ಳುಗದ್ದುಗೆ ಉತ್ಸವ ವಿಜೃಂಣೆಯಿಂದ ನಡೆಯಿತು.

ಶ್ರೀ ಸ್ವಾಮಿಯ ಸೇವಾರ್ಥಿಗಳು ಹಾಗೂ ಬಾಬುದಾರರು ಶ್ರದ್ಧಾಭಕ್ತಿಯಿಂದ ಮೆರವಣಿಗೆ ಮೂಲಕ ಮುಳ್ಳನ್ನು ತಂದು ಗದ್ದುಗೆಯಲ್ಲಿ ಹಾಸಿ ಅಲಂಕರಿಸಲಾಗಿತ್ತು. ಉಪವಾಸ ವ್ರತದ ಬಳಿಕ ಮಠದ ಪರಂಪರೆಯಂತೆ ಬೃಹನ್ಮಠದ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿಯವರು ಧಾರ್ಮಿಕ ವಿಧಿ ವಿಧಾನಗಳ ಪೂಜಾ ಕೈಂಕರ್ಯಗಳನ್ನು ಪೂರೈಸಿ ಅಗ್ನಿಕುಂಡ ಪ್ರವೇಶಿಸಿ ಮುಳ್ಳುಗದ್ದುಗೆಯನ್ನು ಏರಿದರು.

ಮೈನವಿರೇಳಿಸುವ ಮುಳ್ಳುಗದ್ದುಗೆ ಉತ್ಸವ

  • ಪೂಜಾ ವಿಧಿವಿಧಾನ: ಶ್ರೀ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿಯವರು ಉಪವಾಸ ವ್ರತದ ನಂತರ ಅಗ್ನಿಕುಂಡ ಪ್ರವೇಶಿಸಿ, ಹಸಿಜಾಲಿ ಮುಳ್ಳಿನಿಂದ ನಿರ್ಮಿಸಲಾದ ಗದ್ದುಗೆಯನ್ನು ಏರಿದರು.

  • ವಿಶೇಷ ದೃಶ್ಯ: ಬಾಳೆ ಎಲೆಯಿಂದ ಮಾಡಿದ ಕೌಪೀನ ಧರಿಸಿ, ಹಸಿಜಾಲಿ ಮುಳ್ಳಿನ ಮೇಲೆ ಸ್ವಾಮೀಜಿಯವರು ಹಾರಿ ಹಾರಿ ಕುಣಿಯುವ ದೃಶ್ಯ ಭಕ್ತರಲ್ಲಿ ರೋಮಾಂಚನ ಉಂಟುಮಾಡಿತು.

  • ತೇಜಿ (ಕುದುರೆ) ಮೆರವಣಿಗೆ: ಮಠದ ಕುದುರೆಯು ಗ್ರಾಮದ ಪ್ರತಿಯೊಂದು ಮನೆಗೆ ಭೇಟಿ ನೀಡಿ ಪೂಜೆ ಸ್ವೀಕರಿಸಿದ ನಂತರವೇ ಈ ಪ್ರಧಾನ ಉತ್ಸವಕ್ಕೆ ಚಾಲನೆ ನೀಡಲಾಯಿತು.

ವಿಜೃಂಭಣೆಯ ಪಲ್ಲಕ್ಕಿ ಮೆರವಣಿಗೆ

  • ಮೂಲ ಹಾಲಸ್ವಾಮೀಜಿಯವರ ಪಾದುಕೆ ಹಾಗೂ ಗ್ರಾಮ ದೇವತೆಗಳಾದ ಲಕ್ಷ್ಮೀನರಸಿಂಹಸ್ವಾಮಿ, ಆಂಜನೇಯ ಮತ್ತು ಶಕ್ತಿ ಕಾಳಿಕಾಂಬದೇವಿಯ ಉತ್ಸವ ಮೂರ್ತಿಗಳ ಭವ್ಯ ಮೆರವಣಿಗೆ ನಡೆಯಿತು.

  • ವೀರಗಾಸೆ, ಡೊಳ್ಳು ಕುಣಿತ, ತಮಟೆ ಹಾಗೂ ಚಿಟ್ಟಿ ವಾದ್ಯ ಮೇಳಗಳು ಮೆರವಣಿಗೆಗೆ ಕಳೆ ತಂದವು. ಮಂಗಳವಾರ ರಾತ್ರಿ ಆರಂಭವಾದ ಈ ಉತ್ಸವ ಬುಧವಾರ ಬೆಳಗಿನ ಜಾವದವರೆಗೆ ಸಾಗಿತು.

ಧಾರ್ಮಿಕ ಕಾರ್ಯಕ್ರಮಗಳು

  • ಮಹಾರುದ್ರಾಭಿಷೇಕ: ಹೊಳಲೂರು ಶಿವಲಿಂಗಶಾಸ್ತ್ರಿಗಳ ನೇತೃತ್ವದಲ್ಲಿ ಗುಳ್ಯಮ್ಮ ದೇವಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಮತ್ತು ದುರ್ಗಾ ಹೋಮ ನೆರವೇರಿತು.

  • ಗಂಗಾ ಪೂಜೆ: ಸುಮಂಗಲೆಯರು ತುಂಗಾಭದ್ರಾ ನದಿಯಲ್ಲಿ ಗಂಗಾ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

ಭಕ್ತ ಸಾಗರ

  • ದಾವಣಗೆರೆ, ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲೆಗಳಿಂದ ಸಾವಿರಾರು ಭಕ್ತರು ಈ ಪವಾಡ ಸದೃಶ ಉತ್ಸವಕ್ಕೆ ಸಾಕ್ಷಿಯಾದರು.

  • ಮಹಿಳೆಯರು ಜಾನಪದ ಶೈಲಿಯಲ್ಲಿ ಮಠದ ಇತಿಹಾಸ ಮತ್ತು ಪವಾಡಗಳನ್ನು ಹಾಡುತ್ತಾ ಸಾಗಿದ್ದು ವಿಶೇಷವಾಗಿತ್ತು.

  • ಬಂದಿದ್ದ ಎಲ್ಲಾ ಭಕ್ತಾದಿಗಳಿಗೆ ಮಠದ ವತಿಯಿಂದ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಇದಕ್ಕೂ ಮೊದಲು ಶ್ರೀಮಠದ ಸೇವಾ ಪರಂಪರೆ ಮುಂದುವರಿಸಿಕೊಂಡು ಬಂದಿರುವ ಮುಳ್ಳುಗದ್ದಿಗೆ ಉತ್ಸವು ತೇಜಿ (ಮಠದ ಕುದುರೆ) ಗ್ರಾಮದ ಪ್ರತಿಯೊಂದು ಮನೆಗಳಿಗೆ ಹೋಗಿ ಪೂಜೆ ಸಲ್ಲಿಸಿಕೊಂಡು ಬಂದ ನಂತರ ಮಠದ ಆವರಣದಲ್ಲಿ ಮುಳ್ಳಿನ ಗದ್ದುಗೆಗೆ ಪೂಜೆ ನೇರವೇರಿಸಿದ ನಂತರ ಹಾಲಸ್ವಾಮೀಜಿ ಮುಳ್ಳುಗದ್ದಿಗೆಯ ಮೇಲೆ ಬಾಳೇ ಎಲೆಯಿಂದ ಮಾಡಿದ ಕೌಪೀನ
ಧರಿಸಿದ ಜಾಲಿಮುಳ್ಳಿನ ಗದ್ದುಗೆಯ ಮೇಲೆ ಹಾರಿ ಹಾರಿ ಕುಣಿಯುವ ದೃಶ್ಯ ನೋಡುಗರ ಮೈನವಿರೇಳಿಸಿತು,

ಗ್ರಾಮದ ಪ್ರಮುಖ ರಾಜ ಬೀದಿಗಳಲ್ಲಿ ಮುಳ್ಳುಗದ್ದುಗೆ ಉತ್ಸವದಲ್ಲಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಶ್ರೀ ಮಠದ ಮೂಲ ಶ್ರೀ ಹಾಲಸ್ವಾಮೀಜಿಯ ಪಾದುಕೆ, ಗ್ರಾಮ ದೇವತೆಗಳಾದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಶಕ್ತಿ ಕಾಳಿಕಾಂಬದೇವಿ ಉತ್ಸವ ಮೂರ್ತಿಗಳ ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳು, ತಮಟೆವಾದ್ಯ ಸೇರಿದಂತೆ ಹಲವು ಹತ್ತು ಮೇಳಗಳೊಂದಿಗೆ ವಿಜೃಂಭಣೆಯಿಂದ ಸಾಗಿ ಮಂಗಳವಾರ ರಾತ್ರಿ 10.30ಗಂಟೆಗೆ ಪ್ರಾರಂಭವಾದ ಉತ್ಸವ ಬುಧವಾರ ಬೆಳಗಿನ ಜಾವ ಶ್ರೀಮಠವನ್ನು ತಲುಪಿತು.

ಹಸಿಜಾಲಿಮುಳ್ಳುಗಳಿಂದ ನಿರ್ಮಾಣವಾದ ಮುಳ್ಳುಗದ್ದುಗೆಯ ಮಂಟಪದಲ್ಲಿ ವಿರಾಜಮಾನವಾಗುವ ಸ್ವಾಮೀಜಿಯ ಭವ್ಯ ಮೆರವಣಿಗೆಯಲ್ಲಿ ದಾವಣಗೆರೆ, ಶಿವಮೊಗ್ಗ, ಹಾವೇರಿ ಜಿಲ್ಲೆಗಳಿಂದ ಬಂದಿದ್ದ ಭಕ್ತ ಸಾಗರ ಸಾಕ್ಷೀಭೂತರಾದರು. ಮಹಿಳೆಯರು ಶ್ರೀಮಠದ ಇತಿಹಾಸ, ಪವಾಡಗಳನ್ನು ತಮ್ಮದೇ ಆದ ಜನಪದ ಶೈಲಿಯ ಹಾಡುಗಳ ರೂಪದಲ್ಲಿ ವರ್ಣಿಸುತ್ತ ಮೆರವಣಿಗೆ ಮೂಲಕ ಸಾಗಿ ಗಮನ ಸೆಳೆದರು.

ಮಹಾರುದ್ರಾಭಿಷೇಕ:

ಹಾಲಸ್ವಾಮೀಜಿಯ ಪಲ್ಲಕ್ಕಿ ಉತ್ಸವ ಮತ್ತು ತೇಜಿ ಮೆರವಣಿಗೆ ಅಂಗವಾಗಿ ಅಮಾವಾಸ್ಯೆಯ ಸಂಜೆ ಗುಳ್ಯಮ್ಮದೇವಿಯ ಮೂರ್ತಿಗೆ ವೇದ ಘೋಷದೊಂದಿಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ, ಪೂಜಾ ಕಾರ್ಯಕ್ರಮಗಳು ಹೊಳಲೂರು ಶಿವಲಿಂಗಶಾಸ್ತ್ರಿ ನೇತೃತ್ವದಲ್ಲಿ ಶ್ರೀ ದುರ್ಗಾ ಹೋಮ ರಾತ್ರಿ ಜಾಗರಣೆ ನೆರವೇರಿಸಲಾಯಿತು.

ಬೆಳಗಿನ ಜಾವ ಗ್ರಾಮದ ತುಂಗಾಭದ್ರ ನದಿಯಲ್ಲಿ ಸುಮಂಗಲೆಯರು ಗಂಗಾ ಪೂಜೆ , ಶ್ರೀ ಮಠದ ಕರ್ತುಗದ್ದುಗೆಗೆ ಪೂಜಾ ಸಲ್ಲಿಸಿ ಶ್ರೀ ಸದ್ಗುರು ಶಿವಯೋಗಿ ವಿಶ್ವರಾಧ್ಯ ಮಹಾಲಿಂಗ ಹಾಲಸ್ವಾಮೀಜಿಯ ವಿವಿಧ ಧಾರ್ಮಿಕ ಕೈಂಕರ್ಯ , ಗಣಾಂಗಳ ಸೇವೆಯನಂತರ ಗ್ರಾಮದ ಬೀದಿಗಳಲ್ಲಿ ಶ್ರೀ ಮಠದಿಂದ ಅಲಂಕೃತ ಪಲ್ಲಕ್ಕಿಯನ್ನು ಅರೋಹಣ ಮಾಡಿ ಪಲ್ಲಕ್ಕಿ ಉತ್ಸವ ಪ್ರಾರಂಭವಾಯಿತು. ಸುಮಾರು 6 ತಾಸಿಗೂ ಹೆಚ್ಚು ಪಲ್ಲಕ್ಕಿ ಉತ್ಸವ ಗ್ರಾಮದ ಬೀದಿಗಳಲ್ಲಿ ನಡೆಯಿತು.

ಮಠದ ಶ್ರೀ ಸದ್ಗುರು ಶಿವಯೋಗಿ ವಿಶ್ವರಾಧ್ಯ ಮಹಾಲಿಂಗ ಹಾಲಸ್ವಾಮೀಜಿಯ ಉತ್ಸವದ ಹಾಗೂ ತೇಜಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವದ ಮೆರವಣಿಗೆ ಮೆರವಣಿಗೆ ಉದ್ದಕ್ಕೂ ಚಿಟ್ಟಿ ವಾದ್ಯ ಮೇಳ , ಸೋಮನಹಳ್ಳಿ ಶ್ರೀ ಬಸವೇಶ್ವರ ಭಜನಾ ಯುವಕ ಸಂಘ , ಗೋವಿನಕೋವಿ ಶ್ರೀ ಬಸವೇಶ್ವರ ಭಜನಾ ಯುವಕ ಸಂಘ, ಯುವಕರ ಸಂಘ ಹಲಗೆ ವಾಧ್ಯ ವಿವಿಧ ಮಂಗಳವಾದ್ಯಗಳೊಂದಿಗೆ ಮತ್ತು ವಿವಿಧ ಮಂಗಳವಾದ್ಯಗಳೊಂದಿಗೆ ಸಂಗೀತ ವಾದ್ಯಮೇಳಗಳು ಸಂಚರಿಸಿ ತುಂಗಾ ಭದ್ರ ನದಿಯಲ್ಲಿ ಸುಮಂಗಲೆಯರು ಗಂಗಾ ಪೂಜೆ ನಡೆಸಿ ಮಠಕ್ಕೆ ಬಂದು ತಲುಪಿತು.

ಸುತ್ತಮುತ್ತಲಿನ ನಾನಾ ಗ್ರಾಮಗಳಿಂದ ಸೇರಿದಂತೆ ಹಾವೇರಿ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ಶ್ರೀ ಹಾಲಸ್ವಾಮೀಜಿಯವರ ಆಶಿರ್ವಾದ ಪಡೆದರು.ಭಾಗವಹಿಸಿದ್ದ ಭಕ್ತ ಸಮೂಹಕ್ಕೆ ಸೇವಾ ಸಮಿತಿಯವರು ಹಾಗೂ ಭಕ್ತರು ಸಾಮೂಹಿಕ ಅನ್ನ ಸಂತರ್ಪಣೆ ಏರ್ಪಡಿಸಿದ್ದರು.

Share

Leave a comment

Leave a Reply

Your email address will not be published. Required fields are marked *