Home ದಾವಣಗೆರೆಗೆ ಮೆಡಿಕಲ್ ಕಾಲೇಜು ತರುವುದಕ್ಕೆ ಹೋರಾಡಲು ನನಗೆ ಶಕ್ತಿ ಬೇಕು, ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ, ನನ್ನ ತೋಳ್ಬಲ ಹೆಚ್ಚಿಸಿ: ಬಿ. ಪಿ. ಹರೀಶ್
Homeದಾವಣಗೆರೆಬೆಂಗಳೂರು

ದಾವಣಗೆರೆಗೆ ಮೆಡಿಕಲ್ ಕಾಲೇಜು ತರುವುದಕ್ಕೆ ಹೋರಾಡಲು ನನಗೆ ಶಕ್ತಿ ಬೇಕು, ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ, ನನ್ನ ತೋಳ್ಬಲ ಹೆಚ್ಚಿಸಿ: ಬಿ. ಪಿ. ಹರೀಶ್

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆಗೆ ಮೆಡಿಕಲ್ ಕಾಲೇಜು ಪ್ರಾರಂಭಿಸಲು ಹೋರಾಟ ಮಾಡಲು ನಾನು ಸಿದ್ಧನಿದ್ದೇನೆ. ಇದು ಒಬ್ಬನಿಂದ ಮಾತ್ರ ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಮತ್ತೊಬ್ಬ ಶಾಸಕ ನನಗೆ ತೋಳ್ಬಲವಾಗಿ ಬೇಕು. ಅದಕ್ಕಾಗಿ ದಾವಣಗೆರೆ ದಕ್ಷಿಣದ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪರನ್ನು ಆ ಭಾಗದ ಜನತೆ ಗೆಲ್ಲಿಸಬೇಕೆಂದು ಹರಿಹರ ಶಾಸಕ ಬಿ. ಪಿ. ಹರೀಶ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಯುವಕರಿಗೆ ಒಂದೇ ಒಂದು ಉದ್ಯೋಗವನ್ನು ನೀಡಿಲ್ಲ. ದಾವಣಗೆರೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಇಲ್ಲದೇ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ತೊಂದರೆ
ಆಗುತ್ತಿದೆ. ಯುವಕರಿಗೆ ಉದ್ಯೋಗ ಸೃಷ್ಠಿ ಆಗಲಿಕ್ಕೆ, ದಾವಣಗೆರೆಗೆಯಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭಿಸಲು ಹೋರಾಟ ಮಾಡಲು ನಾನು ಸಿದ್ಧನಿದ್ದೇನೆ. ಒಬ್ಬನ ಹೋರಾಟದಿಂದ ಜಯ ಸಿಗಲ್ಲ. ಆದ್ದರಿಂದ ಬಿಜೆಪಿ ಎರಡನೇ ಶಾಸಕರನ್ನಾಗಿ
ದಾವಣಗೆರೆ ದಕ್ಷಿಣ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರನ್ನು ಜನ ಗೆಲ್ಲಿಸಬೇಕು. ಇಬ್ಬರು ಸೇರಿ ದಾವಣಗೆರೆ ಜಿಲ್ಲೆಯಲ್ಲಿ ನಡೆಯುವ ದುರಾಡಳಿತ ವಿರುದ್ಧ ಹೋರಾಡಿ, ಯುವಕರ ಧ್ವನಿಯಾಗಿ ಕೆಲಸ ಮಾಡುತ್ತೇವೆ ಎಂದರು.

ಚಿತ್ರದುರ್ಗದಲ್ಲಿ, ಹಾವೇರಿಯಲ್ಲಿ ಸೇರಿದಂತೆ ನಡೆಸಲು ಕಷ್ಟವಾಗುವಂತಹ ಜಿಲ್ಲಾ ಕೇಂದ್ರಗಳಲ್ಲೂ ಸರ್ಕಾರಿ ಮೆಡಿಕಲ್ ಕಾಲೇಜು ಇದೆ. ಆದರೆ ದಾವಣಗೆರೆಯಲ್ಲಿ ಮೆಡಿಕಲ್ ಕಾಲೇಜಿಲ್ಲ. ಇದರಿಂದ ಮಧ್ಯಮ ಮತ್ತು ಬಡ ವಿದ್ಯಾರ್ಥಿಗಳು ವೈದ್ಯಕೀಯ ಅಭ್ಯಾಸಕ್ಕೆ ಬೇರೆ ಜಿಲ್ಲೆಗೆ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ ಶ್ರೀಮಂತರ ಒಡೆತನದ ಕಾಲೇಜುಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಯಾವುದೇ ಸರ್ಕಾರವಾಗಲೀ ದಾವಣಗೆರೆಗೆ ಮಡಿಕಲ್ ಕಾಲೇಜು ಮಂಜೂರು ಮಾಡಿಲ್ಲ. ಮುಂದಿನ ದಿನಗಳಲ್ಲಿ ಯುವಕರು ದಾವಣಗೆರೆಯಲ್ಲಿ ಮೆಡಿಕಲ್ ಕಾಲೇಜಿಗಾಗಿ ಯುವಕರು ಹೋರಾಟ ಮಾಡುವಂತಾಗಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಜೈಶಂಕರ್ ನೇತೃತ್ವದಲ್ಲಿ ದೇಶದ ವಿದೇಶಾಂಗ ನೀತಿ ಬಲಿಷ್ಠವಾಗಿದ್ದು, ಈಗಾಗಲೇ ಹಾರ್ಮೋಜ್ ಜಲಸಂಧಿ ಮೂಲಕವೇ ಇರಾನ್ ಒಪ್ಪಿಗೆ ಪಡೆದು 94 ಸಾವಿರ ಮೆಟ್ರಿಕ್ ಟನ್ ಅನಿಲ ಭಾರತ ದೇಶಕ್ಕೆ ಬಂದಿದೆ. ಆದರೆ ದೇಶದಲ್ಲಿ ಗ್ಯಾಸ್, ಡೀಸೆಲ್, ಪೆಟ್ರೋಲ್ ಕೊರತೆ ಆಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ್ ಆರೋಪ ಖಂಡನೀಯ ಎಂದರು.

ಗೋಷ್ಠಿಯಲ್ಲಿ ಬಿಜೆಪಿ ನಾಯಕರಾದ ಬಿ. ಎಸ್. ಜಗದೀಶ್, ಲಕ್ಷ್ಮಣ್ ಮತ್ತಿತರರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *