ದಾವಣಗೆರೆ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ ಆದೇಶ ಹೊರಡಿಸಿದ್ದಾರೆ. ಬಿಜೆಪಿ ಯುವ
ಮೋರ್ಚಾದ ಅಧ್ಯಕ್ಷರಾಗಿ ಹರೀಶ್ ಶಾಮನೂರು ಅವರನ್ನು ನೇಮಕ ಮಾಡಲಾಗಿದೆ.
ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ಕೇಂದ್ರದ ಮಾಜಿ ಸಚಿವ ಡಾ. ಜಿ. ಎಂ. ಸಿದ್ದೇಶ್ವರ, ವಿಧಾನ ಪರಿಷತ್ ಮಾಜಿ ಮುಖ್ಯಸಚೇತಕ ಶಿವಯೋಗಿಸ್ವಾಮಿ, ಲೋಕಿಕೆರೆ ನಾಗರಾಜ್ ಹಾಗೂ ಕ್ಷೇತ್ರದ ಹಿರಿಯರೊಡನೆ ಚರ್ಚಿಸಿ ಜಿಲ್ಲಾಧ್ಯಕ್ಷ
ರಾಜಶೇಖರ್ ನಾಗಪ್ಪರ ಸೂಚನೆ ಮೇರೆಗೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳನ್ನಾಗಿ ಈ ಕ್ಷಣದಿಂದಲೇ ನಿಯೋಜಿಸಲಾಗಿದೆ ಎಂದು ತಿಳಿಸಲಾಗಿದೆ.
ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾಗಿ ಹರೀಶ್ ಶಾಮನೂರು, ಪ್ರಧಾನ ಕಾರ್ಯದರ್ಶಿಯಾಗಿ ಮೋಹಿತ್ ಸೂರ್ಯವಂಶಿ, ಮಹಾಂತೇಶ್ ನಾಯ್ಕ್, ರೈತ ಮೋರ್ಚಾ ಅಧ್ಯಕ್ಷರಾಗಿ ಶಂಕರಮೂರ್ತಿ ಬಾತಿ, ಪ್ರಧಾನ ಕಾರ್ಯದರ್ಶಿಗಳಾಗಿ ಭೀಮಾನಾಯ್ಕ್, ಸಿದ್ದೇಶ್ ಬೇತೂರು, ಎಸ್. ಸಿ. ಮೋರ್ಚಾ ಅಧ್ಯಕ್ಷರಾಗಿ ಬಿ. ಆನಂದ್, ಪ್ರಧಾನ ಕಾರ್ಯದರ್ಶಿಗಳಾಗಿ ಮಂಜುನಾಥ್ (ನಲ್ಲಿ), ಕೊಟ್ರೇಶ್, ಎಸ್. ಟಿ. ಮೋರ್ಚಾ ಅಧ್ಯಕ್ಷರಾಗಿ ಕರಿಯಪ್ಪ ನಾಯಕ, ಪ್ರಧಾನ ಕಾರ್ಯದರ್ಶಿಗಳಾಗಿ ಸುರೇಶ್ ಆವರಗೆರೆ, ಎಸ್. ಪಿ. ಮಂಜುನಾಥ್, ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ಮಮತಾ ಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮೀ ಉಮೇಶ್, ಒಬಿಸಿ ಮೋರ್ಚಾ ಅಧ್ಯಕ್ಷರಾಗಿ ವಿನಯ್ ದಿಳ್ಳೆಪ್ಪ, ಪ್ರಧಾನ ಕಾರ್ಯದರ್ಶಿಗಳಾಗಿ ಮನೋಜ್ ಕುಮಾರ್, ಸತೀಶ್, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾಗಿ ಮಹೇಂದ್ರಕರ್ ಜೈನ್, ಪ್ರಧಾನ ಕಾರ್ಯದರ್ಶಿಗಳಾಗಿ ಶ್ರಣಿಕ್ ಜೈನ್ ಅವರನ್ನು ನೇಮಕ ಮಾಡಲಾಗಿದೆ.
ಪಕ್ಷದ ಬಲವರ್ಧನೆ ಹಾಗೂ ಮುಂಬರುವ ರಾಜಕೀಯ ಚಟುವಟಿಕೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಎಲ್ಲಾ ಸಮುದಾಯ ಮತ್ತು ವಿಭಾಗಗಳಿಗೆ ಆದ್ಯತೆ ನೀಡಿ ಈ ಸಮಿತಿಯನ್ನು ರಚಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
- BJP Morcha list Davanagere
- Davanagere BJP list
- Davanagere BJP Yuva Morcha
- DAVANAGERE NEWS
- Davanagere North BJP
- Davanagere North Morcha presidents
- Harish Shamanur BJP
- Harish Shamanur Davanagere
- Karnataka BJP News
- Rajashekar Nagappa
- ದಾವಣಗೆರೆ ಉತ್ತರ ಬಿಜೆಪಿ
- ದಾವಣಗೆರೆ ಬಿಜೆಪಿ ಅಧ್ಯಕ್ಷರು
- ದಾವಣಗೆರೆ ಬಿಜೆಪಿ ಯುವ ಮೋರ್ಚಾ
- ದಾವಣಗೆರೆ ರಾಜಕೀಯ
- ದಾವಣಗೆರೆ ಸುದ್ದಿ
- ಬಿಜೆಪಿ ಮೋರ್ಚಾ ಪದಾಧಿಕಾರಿಗಳ ಪಟ್ಟಿ
- ಮಮತಾ ಗೌಡ ಮಹಿಳಾ ಮೋರ್ಚಾ
- ರಾಜಶೇಖರ್ ನಾಗಪ್ಪ
- ಹರೀಶ್ ಶಾಮನೂರು
- ಹರೀಶ್ ಶಾಮನೂರು ಬಿಜೆಪಿ





Leave a comment