ದಾವಣಗೆರೆ: ನಗರವನ್ನು ಸ್ವಚ್ಛ, ತ್ಯಾಜ್ಯಮುಕ್ತ ಹಾಗೂ ಆರೋಗ್ಯಕರ ನಗರವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ದಾವಣಗೆರೆ ಮಹಾನಗರಪಾಲಿಕೆ ಆಯುಕ್ತರಾದ ಡಾ. ಮಹಾಂತೇಶ್.ಎನ್ ಅವರು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸಾರ್ವಜನಿಕರು ತಮ್ಮ ಮನೆ ಅಥವಾ ಉದ್ದಿಮೆಗಳಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯವನ್ನು ಮೂಲದಲ್ಲಿಯೇ ಕಡ್ಡಾಯವಾಗಿ ನಾಲ್ಕು ಬಗೆಯಲ್ಲಿ ವಿಂಗಡಿಸಿ ಪಾಲಿಕೆಯ ಕಸ ಸಂಗ್ರಹಣಾ ವಾಹನಗಳಿಗೆ ನೀಡಬೇಕೆಂದು ಆದೇಶಿಸಿದ್ದಾರೆ.
ನಾಲ್ಕು ಬಗೆಯ ತ್ಯಾಜ್ಯ ವಿಂಗಡಣೆ ಕಡ್ಡಾಯ:
ಸಾರ್ವಜನಿಕರು ಕಸವನ್ನು ಕೊಳೆಯುವ ಹಸಿತ್ಯಾಜ್ಯ, ಕೊಳೆಯದ ಒಣತ್ಯಾಜ್ಯ (ಮರುಬಳಕೆಗೆ ಯೋಗ್ಯ/ಅಯೋಗ್ಯ ದಹನಕಾರಿ ಕಸ), ಸ್ಯಾನಿಟರಿ ತ್ಯಾಜ್ಯ (ಪೌಚ್ ಅಥವಾ ಪಾಲಿಕೆ ಸೂಚಿತ ರೀತಿಯಲ್ಲಿ ಸುತ್ತಿ ನೀಡಬೇಕು) ಹಾಗೂ ವಿಶೇಷ ಆರೈಕೆ ತ್ಯಾಜ್ಯ ಎಂದು ಪ್ರತ್ಯೇಕಿಸಿ ನೀಡಬೇಕು. ತೋಟಗಾರಿಕೆ ಕಸ, ಹಳೇ ಹಾಸಿಗೆ, ದಿಂಬುಗಳಂತಹ ಬಲ್ಕೀ ತ್ಯಾಜ್ಯವನ್ನು ಪ್ರತ್ಯೇಕವಾಗಿಯೇ ಹಸ್ತಾಂತರಿಸಬೇಕು.
ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಹೊಸ ನಿಯಮ:
ದಿನಕ್ಕೆ 100 ಕೆಜಿಗಿಂತ ಹೆಚ್ಚು ತ್ಯಾಜ್ಯ ಉತ್ಪಾದಿಸುವ ಹೋಟೆಲ್, ಕಲ್ಯಾಣ ಮಂಟಪ, ಆಸ್ಪತ್ರೆ ಹಾಗೂ ವಸತಿ ಸಮುಚ್ಚಯಗಳನ್ನು ‘ಬೃಹತ್ ತ್ಯಾಜ್ಯ ಉತ್ಪಾದಕರು’ (BWG) ಎಂದು ಪರಿಗಣಿಸಲಾಗುವುದು. ಇವರು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡು, ತಮ್ಮ ಆವರಣದಲ್ಲೇ ಹಸಿ ಕಸವನ್ನು ಕಾಂಪೋಸ್ಟ್ ಅಥವಾ ಬಯೋಗ್ಯಾಸ್ ಮೂಲಕ ಸಂಸ್ಕರಿಸುವುದು ಕಡ್ಡಾಯವಾಗಿದೆ. 100 ಕ್ಕೂ ಹೆಚ್ಚು ಜನ ಸೇರುವ ಕಾರ್ಯಕ್ರಮಗಳನ್ನು ಆಯೋಜಿಸುವ ಮುನ್ನ ಪಾಲಿಕೆಗೆ ಅಗತ್ಯ ಶುಲ್ಕ ಪಾವತಿಸಿ ಸೇವೆ ಪಡೆಯಬೇಕು.
ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ:
ರಸ್ತೆ, ಚರಂಡಿ ಹಾಗೂ ಖಾಲಿ ಸೈಟುಗಳಲ್ಲಿ ಕಸ ಎಸೆಯುವುದು ಮತ್ತು ಕಸಕ್ಕೆ ಬೆಂಕಿ ಹಚ್ಚುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುವುದು. ತಪ್ಪು ಮರುಕಳಿಸಿದರೆ ಪರಿಸರ ಸಂರಕ್ಷಣಾ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ನಗರದಲ್ಲಿ ಏಕಬಳಕೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಹಾಗೂ ಮಾಸಿಕ ಬಳಕೆದಾರರ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕೆಂದು ಆಯುಕ್ತರು ತಿಳಿಸಿದ್ದಾರೆ.
‘ಚೈಲ್ಡ್‌ಲೈನ್ 1098’ ಶಾಶ್ವತ ನಾಮಫಲಕ ಕಡ್ಡಾಯ:
ಇದೇ ಸಂದರ್ಭದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ‘ಮಿಷನ್ ವಾತ್ಸಲ್ಯ’ ಯೋಜನೆಯಡಿ ಸಂಕಷ್ಟದಲ್ಲಿರುವ ಮಕ್ಕಳ ಹಿತರಕ್ಷಣೆಗಾಗಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಅವರು ಪ್ರಮುಖ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ಎಲ್ಲಾ ಸರ್ಕಾರಿ, ಅರೆ-ಸರ್ಕಾರಿ ಹಾಗೂ ಸ್ವಯಂಸೇವಾ ಸಂಸ್ಥೆಗಳ (NGO) ಕಟ್ಟಡಗಳ ಮೇಲೆ ಮಕ್ಕಳ ಸಹಾಯವಾಣಿ ಸಂಖ್ಯೆ ‘1098’ ರ ಶಾಶ್ವತ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸುವಂತೆ ಅವರು ಸೂಚಿಸಿದ್ದಾರೆ.
- Bulk Waste Generators
- BWG Registration
- Childline 1098
- Criminal Case for Waste
- Davanagere ADC
- Davanagere Mahanagara Palike
- DAVANAGERE NEWS
- Environmental Protection Act
- Mandatory Signboard
- Mission Vatsalya
- Single Use Plastic Ban
- Solid Waste Management
- Waste Segregation Rules
- ಅಪರ ಜಿಲ್ಲಾಧಿಕಾರಿ
- ಕಸ ವಿಂಗಡಣೆ ನಿಯಮಗಳು
- ಕ್ರಿಮಿನಲ್ ಮೊಕದ್ದಮೆ
- ಘನ ತ್ಯಾಜ್ಯ ನಿರ್ವಹಣೆ
- ಚೈಲ್ಡ್‌ಲೈನ್ 1098
- ದಾವಣಗೆರೆ ಜಿಲ್ಲಾಡಳಿತ
- ದಾವಣಗೆರೆ ಸುದ್ದಿ
- ಪರಿಸರ ಸಂರಕ್ಷಣಾ ಕಾಯ್ದೆ
- ಪ್ಲಾಸ್ಟಿಕ್ ನಿಷೇಧ
- ಬೃಹತ್ ತ್ಯಾಜ್ಯ ಉತ್ಪಾದಕರು
- ಮಹಾನಗರಪಾಲಿಕೆ ಆಯುಕ್ತರು
- ಮಿಷನ್ ವಾತ್ಸಲ್ಯ
- ಹಸಿ ಕಸ ಮತ್ತು ಒಣ ಕಸ





Leave a comment