Home ದಾವಣಗೆರೆ ಮಿಲ್ಲತ್ ಎಜುಕೇಶನಲ್ ಅಂಡ್ ವೆಲ್ಫೇರ್ ಸೊಸೈಟಿಗೆ ಕರ್ನಾಟಕ ಉರ್ದು ಅಕಾಡೆಮಿ ವಿಶೇಷ ರಾಜ್ಯ ಪ್ರಶಸ್ತಿ: ಪ್ರಶಸ್ತಿ ಲಭಿಸಿದ್ದು ಅತ್ಯಂತ ಹೆಮ್ಮೆಯ ಮೈಲಿಗಲ್ಲು ಎಂದ ಸೈಯದ್ ಖಾಲಿದ್ ಅಹ್ಮದ್
ದಾವಣಗೆರೆನವದೆಹಲಿಬೆಂಗಳೂರು

ಮಿಲ್ಲತ್ ಎಜುಕೇಶನಲ್ ಅಂಡ್ ವೆಲ್ಫೇರ್ ಸೊಸೈಟಿಗೆ ಕರ್ನಾಟಕ ಉರ್ದು ಅಕಾಡೆಮಿ ವಿಶೇಷ ರಾಜ್ಯ ಪ್ರಶಸ್ತಿ: ಪ್ರಶಸ್ತಿ ಲಭಿಸಿದ್ದು ಅತ್ಯಂತ ಹೆಮ್ಮೆಯ ಮೈಲಿಗಲ್ಲು ಎಂದ ಸೈಯದ್ ಖಾಲಿದ್ ಅಹ್ಮದ್

Share
ಮಿಲ್ಲತ್
Share

ದಾವಣಗೆರೆ: ದಾವಣಗೆರೆಯ ಮಿಲ್ಲತ್ ಎಜುಕೇಶನಲ್ ಅಂಡ್ ವೆಲ್ಫೇರ್ ಸೊಸೈಟಿ ಶಿಕ್ಷಣ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿರುವ ಮಹತ್ವದ ಕೊಡುಗೆಯನ್ನು ಗುರುತಿಸಿ, ರಾಜ್ಯ ಸರ್ಕಾರದ ಕರ್ನಾಟಕ ಉರ್ದು ಅಕಾಡೆಮಿಯ ವಿಶೇಷ ರಾಜ್ಯ ಪ್ರಶಸ್ತಿಗೆ ಭಾಜನವಾಗಿದೆ.

ಸಿಎಂ ಡಿ. ಕೆ. ಶಿವಕುಮಾರ್ ಅವರು ಈ ಪ್ರಶಸ್ತಿ ಪ್ರದಾನ ಮಾಡಿದರು. ಸಿಎಂ ಡಿ.ಕೆ. ಶಿವಕುಮಾರ್, ಆರೋಗ್ಯ ಸಚಿವ ಯು.ಟಿ. ಖಾದರ್, ಸಚಿವ ರಿಜ್ವಾನ್ ಅರ್ಷದ್, ಶಾಸಕರಾದ ಎನ್.ಎ. ಹ್ಯಾರಿಸ್, ಯಾಸೀರ್ ಪಠಾಣ್, ಕನೀಜ್ ಫಾತಿಮಾ, ಸಂಸದ ಮನ್ಸೂರ್ ಅಲಿ ಖಾನ್, ಮಿಲ್ಲತ್ ಎಜುಕೇಶನಲ್ ಅಂಡ್ ವೆಲ್ಫೇರ್ ಸೊಸೈಟಿಯ ಆಡಳಿತಾಧಿಕಾರಿ ಸೈಯದ್ ಅಲಿ, ಗೌರವ ಕಾರ್ಯದರ್ಶಿಗಳಾದ ಸೈಯದ್ ಖಾಲಿದ್ ಅಹ್ಮದ್, ಜಂಟಿ ಕಾರ್ಯದರ್ಶಿಗಳಾದ ಸೈಯದ್ ಜುಫಿಶಾನ್ ಅಲಿ, ಉಪ ಪ್ರಾಂಶುಪಾಲರಾದ ಜಾಕೀರ್ ಹುಸೇನ್ ಮತ್ತಿತರರು ಹಾಜರಿದ್ದರು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಪ್ರತಿಕ್ರಿಯೆ ನೀಡಿರುವ ಸೈಯದ್ ಖಾಲಿದ್ ಅಹ್ಮದ್ ಅವರು ಈ ಗೌರವ ಮತ್ತು ಮನ್ನಣೆಯನ್ನು ನೀಡಿದ ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷ ಮೌಲಾನಾ ಮೊಹಮ್ಮದ್ ಅಲಿ ಖಾನ್ಜಿ ಅವರಿಗೆ ಧನ್ಯವಾದ ಸಲ್ಲಿಸುತ್ತೇವೆ ಎಂದು
ಹೇಳಿದರು.

1979ರಲ್ಲಿ ಸಂಸ್ಥಾಪಕರಾದ ದಿವಂಗತ ಸೈಯದ್ ಸೈಫುಲ್ಲಾ ಸಾಹೇಬ್ ಅವರಿಂದ ಸ್ಥಾಪಿತವಾದ ಮಿಲ್ಲತ್ ಎಜುಕೇಶನಲ್ ಅಂಡ್ ವೆಲ್ಫೇರ್ ಸೊಸೈಟಿಯ ಸುದೀರ್ಘ ಪಯಣದಲ್ಲಿ ಈ ಪ್ರಶಸ್ತಿಯು ಅತ್ಯಂತ ಹೆಮ್ಮೆಯ ಮೈಲಿಗಲ್ಲಾಗಿದೆ. ಶಿಕ್ಷಣದ ಮೂಲಕ ಸಮಾಜದ ಹಿಂದುಳಿದ ವರ್ಗಗಳ ಉನ್ನತಿ ಮತ್ತು ಸಬಲೀಕರಣಕ್ಕಾಗಿ ಅವರು ಹೊಂದಿದ್ದ ದೂರದೃಷ್ಟಿ, ಸಮರ್ಪಣೆ ಹಾಗೂ ಬದ್ಧತೆ ಇಂದಿಗೂ ನಮಗೆಲ್ಲರಿಗೂ ಪ್ರೇರಣೆಯಾಗಿದೆ ಎಂದು ತಿಳಿಸಿದರು.

ಕಳೆದ ಹಲವು ದಶಕಗಳಿಂದ ಸಂಸ್ಥೆಯ ಬೆಳವಣಿಗೆಯಲ್ಲಿ ಅಮೂಲ್ಯ ಕೊಡುಗೆ ನೀಡುತ್ತಾ ಬಂದಿರುವ ಶಿಕ್ಷಕ ವೃಂದದ ಸೇವೆ ಮತ್ತು ಪರಿಶ್ರಮವನ್ನು ವಿಶೇಷವಾಗಿ ಸ್ಮರಿಸುತ್ತೇವೆ. ದಿವಂಗತ ಸೈಯದ್ ಸೈಫುಲ್ಲಾ ಸಾಹೇಬ್ ಅವರ ಮಾರ್ಗದರ್ಶನ ಮತ್ತು ಆಶಯಗಳೊಂದಿಗೆ, ತಲೆಮಾರುಗಳ ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ, ಅವರ ಪ್ರತಿಭೆಯನ್ನು ಪೋಷಿಸುವಲ್ಲಿ ಹಾಗೂ ಸಂಸ್ಥೆಯ ಶೈಕ್ಷಣಿಕ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಮ್ಮ ಶಿಕ್ಷಕರು ಈ ಸಂಸ್ಥೆಯ ನಿಜವಾದ ಶಕ್ತಿ ಮತ್ತು ಬೆನ್ನೆಲುಬಾಗಿದ್ದಾರೆ. ಅವರ ನಿಸ್ವಾರ್ಥ ಸೇವೆ, ಬದ್ಧತೆ ಮತ್ತು ನಿರಂತರ ಪರಿಶ್ರಮವೇ ಮಿಲ್ಲತ್
ಸಂಸ್ಥೆಯನ್ನು ಇಂದು ಇಷ್ಟೊಂದು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಬಣ್ಣಿಸಿದರು.

ಈ ಗೌರವವು ಸಂಸ್ಥೆಯ ಪ್ರತಿಯೊಬ್ಬ ಶಿಕ್ಷಕರಿಗೆ, ಸಿಬ್ಬಂದಿ ವರ್ಗಕ್ಕೆ, ಆಡಳಿತ ಮಂಡಳಿಯ ಸದಸ್ಯರಿಗೆ ಹಾಗೂ ನಮ್ಮ ಈ ಪಯಣದಲ್ಲಿ ಕೈಜೋಡಿಸಿದ ಪ್ರತಿಯೊಬ್ಬ ಹಿತೈಷಿಗೂ ಸಲ್ಲುತ್ತದೆ. ಇದು ಕೇವಲ ಪ್ರಶಸ್ತಿಯಲ್ಲ, ನಮ್ಮ ಸಂಸ್ಥೆಯ ಸುದೀರ್ಘ ಪರಂಪರೆಗೆ ಸಂದ ಗೌರವ. ಸಾಮೂಹಿಕ ಪರಿಶ್ರಮಕ್ಕೆ ದೊರೆತ ಮನ್ನಣೆ ಹಾಗೂ ನಮ್ಮ ಸಂಸ್ಥಾಪಕರ ಕನಸು ಮತ್ತು ಆಶಯಗಳನ್ನು ಮುಂದುವರಿಸಲು ದೊರೆತ ಹೊಸ ಸ್ಫೂರ್ತಿಯಾಗಿದೆ ಎಂದು ಸೈಯದ್ ಖಾಲಿದ್ ಅಹಮದ್ ಅವರು ತಿಳಿಸಿದರು.

Share

Leave a comment

Leave a Reply

Your email address will not be published. Required fields are marked *